C T Ravi: ತೀರ್ಪು ಬರಲಿ, ಧರ್ಮಸ್ಥಳಕ್ಕೆ ನಾನೇ ಕರೆಯುವೆ: ಸಿ.ಟಿ.ರವಿ

ಕಳೆದೊಂದು ವಾರದಿಂದ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನಡುವಿನ ‘ಪದ ಬಳಕೆ ಹಾಗೂ ಅದಾದ ಬಳಿ

Profile Ashok Nayak December 25, 2024
ರಂಜಿತ್ ಎಚ್. ಅಶ್ವತ್ಥ ಎಲ್ಲ ಕಾನೂನು ಉಲ್ಲಂಘಿಸಿ, ಈಗ ಆತ್ಮಸಾಕ್ಷಿಯ ಮಾತಾಡುತ್ತಿದ್ದಾರೆ ಈಗಲೂ ನನ್ನ ಫೋನ್ ಕದ್ದಾಲಿಕೆ ಯಾಗುತ್ತಿದೆ; ಇಡೀ ಪ್ರಕರಣ ಸಿಬಿಐನಿಂದ ತನಿಖೆಯಾಗಲಿ ರಾಜಕೀಯ ಕಾರಣಕ್ಕಾಗಿ ನನ್ನ ಟಾರ್ಗೆಟ್ ಮಾಡಲಾಗಿದೆ ಸುವರ್ಣಸೌಧದ ಆವರಣದಲ್ಲಿ ಬಂದಿಸಿದ ಕ್ಷಣದಿಂದ ಕ್ಷಣ-ಕ್ಷಣಕ್ಕೂ ಕಾನೂನು ಉಲ್ಲಂಘಿಸಿದವರು ಈಗ ಆತ್ಮ ಸಾಕ್ಷಿಯ ಮಾತುಗಳನ್ನು ಆಡುತ್ತಿದ್ದಾರೆ. ಸಾವಿಗೆ ಹೆದರಲ್ಲ. ಆದರೆ ನನಗಾದ ಅನ್ಯಾಯ ಇನ್ಯಾರಿಗೂ ಆಗಬಾರದು ಎನ್ನುವ ಕಾರಣಕ್ಕೆ ಪ್ರಕರಣವನ್ನು ಸಿಬಿಐನಿಂದ ತನಿಖೆ ನಡೆಸಲು ಆಗ್ರಹಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ಹೇಳಿದ್ದಾರೆ. ಕಳೆದೊಂದು ವಾರದಿಂದ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನಡುವಿನ ‘ಪದ ಬಳಕೆ ಹಾಗೂ ಅದಾದ ಬಳಿಕ ನಡೆದ ಘಟನಾವಳಿಗೆ ಸಂಬಂಧಿಸಿದಂತೆ ‘ವಿಶ್ವವಾಣಿ’ಯೊಂದಿಗೆ ಸಿ.ಟಿ. ರವಿ ಅವರು ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ. ‘ಅಶ್ಲೀಲ’ ಪದ ಬಳಕೆಯಾಗಿದೆಯೇ? ಈ ಸಂಬಂಧ ಈಗಾಗಲೇ ನಾನು ಸ್ಪಷ್ಟನೆ ನೀಡಿದ್ದೇನೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನದಲ್ಲಿ ನಡೆದ ಚರ್ಚೆ ಹಾಗೂ ಇನ್ನಿತರೆ ವಿಷಯಕ್ಕೆ ಸಂಬಂಧಿಸಿದಂತೆ ರೂಲಿಂಗ್ ನೀಡಿದ್ದಾರೆ. ಇದೇ ವಿಷಯವನ್ನು ಮಾಧ್ಯಮಗಳಮುಂದೆಯೂ ಪುನರುಚ್ಚರಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಪದೇಪದೆ ಆರೋಪಿಸುತ್ತಿರುವವರಿಗೆ ಉತ್ತರಿಸಬೇಕಿಲ್ಲ. ಸದನದಲ್ಲಿ ನಡೆದಿರುವ ಘಟನೆಯ ಬಳಿಕ ನಡೆದಿರುವ ಎಲ್ಲ ಘಟನಾವಳಿ ರಾಜಕೀಯ ಪ್ರೇರಿತ. ರಾಜಕೀಯವಾಗಿ ನನ್ನ ಮೇಲೆ ದಾಳಿ ನಡೆಸಿ, ರಾತ್ರಿಯಿಡೀ ಸುತ್ತಾಡಿಸಿದ್ದು, ಕಾನೂನುಬಾಹಿರವಾಗಿ ವಶಕ್ಕೆ ಪಡೆದಿರುವುದು ಹಾಗೂ ಪ್ರಕರಣ ದಾಖಲಿಸಿರುವುದು ರಾಜಕೀಯ ಪ್ರೇರಿತ. ಘಟನೆ ನಡೆದಿರುವ ಸ್ಥಳ ಸಭಾಪತಿಗಳ ಸುಪರ್ದಿಗೆ ಬಂದರೂ, ಪ್ರಕರಣವನ್ನು ದಾಖಲಿಸುವ ಮೂಲಕ ಕಾನೂನ ನ್ನು ಉಲ್ಲಂಘಿಸಿದ್ದಾರೆ. ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ನನ್ನ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು, ನಾನು ನೀಡಿರುವ ದೂರನ್ನು ಈ ಹಂತದಲ್ಲಿಯೂ ಏಕೆ ದಾಖಲಿಸಿಕೊಂಡಿಲ್ಲ? ಇಡೀ ಪ್ರಕರಣದಲ್ಲಿಕಾನೂನು ಹಾಗೂ ಅಧಿಕಾರ ದುರ್ಬಳಕೆಯಾಗಿದೆ. ಹಾಗಾದರೆ ಈ ಪಿತೂರಿಗೆ ನೀವೇಕೆ ಟಾರ್ಗೆಟ್ ಆದ್ರಿ? ನನ್ನನ್ನು ಏಕೆ ಟಾರ್ಗೆಟ್ ಮಾಡಿ ಈ ರೀತಿ ಮಾಡಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ನನ್ನ ರಾಜೀಯಿಲ್ಲದರಾಜಕಾರಣ ನನ್ನನ್ನು ಟಾರ್ಗೆಟ್ ಮಾಡಲು ಕಾರಣವಿರಬಹುದು. ಇದನ್ನು ಮೀರಿ ಯಾವುದೋ ದುರುದ್ದೇಶ ವಿರಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಸರಕಾರದ ತಪ್ಪುಗಳನ್ನು ನೇರವಾಗಿಯೇ ಟಾರ್ಗೆಟ್ ಮಾಡುತ್ತೇನೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಿರಬಹುದು. ಸಿದ್ಧಾಂತಕ್ಕೆ ಬದ್ಧವಾಗಿ ರಾಜಕೀಯದಲ್ಲಿ ರಾಜಿಯಿಲ್ಲದೇ ಹೋರಾಡುವ ಸ್ವಭಾವ ಅವರಿಗೆ ಉಳಿದವರಿ ಗಿಂತ ನನ್ನ ಮೇಲೆ ಹೆಚ್ಚು ದ್ವೇಷ ಹಾಗೂ ಭಯವಿರ ಬಹುದು. ಅಶ್ಲೀಲ ಪದ ಬಳಸಿದ್ದೀರಾ ಎಂದು ಆಣೆಮಾಡಲು ಸಜ್ಜಾಗಿದ್ದಾರಲ್ಲ? ಸದ್ಯ ಪ್ರಕರಣ ನ್ಯಾಯಾಲಯದ ಮುಂದಿದೆ. ನ್ಯಾಯಾಲಯ ತೀರ್ಪು ನೀಡಿದ ಬಳಿಕ ಷರತ್ತುಬದ್ಧವಾಗಿ ನಾನೇ ಅವರಿಗೆ ಆಹ್ವಾನ ನೀಡುತ್ತೇನೆ. ಆಗ ಅವರು ಬಂದು ಧರ್ಮಸ್ಥಳದಲ್ಲಿಯೇ ಆಣೆ-ಪ್ರಮಾಣ ಮಾಡಲಿ. ಅಕ್ರಮವಾಗಿ ಬಂಽಸಿ, ಸುತ್ತಾಡಿಸಿದ ಬಳಿಕ ಈ ಹಂತದಲ್ಲಿ ಆಣೆ -ಪ್ರಮಾಣ ಮಾಡುತ್ತಿದ್ದಾರೆ. ಆದ್ದರಿಂದ ಪ್ರಕರಣ ಇತ್ಯರ್ಥವಾದ ಬಳಿಕ ಕರೆಯುತ್ತೇನೆ, ಆಗ ಬಂದು ಆಣೆ ಪ್ರಮಾಣ ಮಾಡಲಿ. ಇದಕ್ಕೂ ಮುಖ್ಯವಾಗಿ ಒಬ್ಬರು ಹಿರಿಯರು ಭೇಟಿ ಯಾದ ಸಮಯದಲ್ಲಿ ‘ಕೆಸರ ಮೇಲೆ ನೀನು ಬಿದ್ದರೂ, ಕೆಸರು ನಿನ್ನ ಮೇಲೆ ಬಿದ್ದರೂ ಕೊಳೆಯಾಗುವುದು ನೀನು. ಆದ್ದರಿಂದ ಕೆಸರಿನಿಂದ ದೂರವಿರು‘ ಎನ್ನುವ ಮಾತನ್ನು ಹೇಳಿದ್ದಾರೆ. ಅವರ ಮಾತನ್ನು ಅನ್ವಯಿಸಿ ಕೊಂಡು, ಕೆಲ ಸಂಗತಿಗಳಿಂದ ನಾನು ಎಚ್ಚರವಹಿಸಬೇಕಾಗುತ್ತದೆ. ದಾಳಿ ಮಾಡಲು ಬಂದ ಕ್ಷಣ ಏನನಿಸಿತು? ಈ ರೀತಿಯ ದಾಳಿಗಳು ಇದೇ ಮೊದಲಲ್ಲ. ವಿದ್ಯಾರ್ಥಿ ಜೀವನದಿಂದಲೂ ನಾನು ಓಡಿಹೋಗುವ ವ್ಯಕ್ವಿತ್ವವಲ್ಲ. ನನ್ನದ್ದು ಬೆನ್ನು ತೋರಿಸುವ ಸ್ವಭಾವವಲ್ಲ. ಕಾಲೇಜು ದಿನಗಳಿಂದಲೂ ಹೋರಾಡಿಕೊಂಡು ಬಂದಿದ್ದೇನೆ. ಎಂದಿಗೂ ಮನೆ ಹಾಳು ಮಾಡಿದ, ಅಂಡರ್‌ಗ್ರೌಂಡ್ ಹಿನ್ನೆಲೆ ನನಗಿಲ್ಲ. ಮೊದಲಿನಿಂದಲೂ ಹೋರಾಟದ ಬದುಕು. ಆದ್ದರಿಂದ ವಿಧಾನಪರಿಷತ್‌ನಲ್ಲಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್, ಬೋಸರಾಜು, ನಸೀರ್ ಅಹ್ಮದ್, ಚನ್ನರಾಜ್ ಹಟ್ಟಿಹೊಳಿ ಅವರು ಬಂದಾಗ ಹೆದರಲಿಲ್ಲ. ಹಾಗೇ ನೋಡಿದರೆ, ಈಗಾಗಲೇ ಇವರೆಲ್ಲಯಾವೆಲ್ಲ ಶಬ್ದ ಬಳಕೆ ಮಾಡಿದ್ದಾರೆ ಎನ್ನುವುದು ಬಹಿರಂಗವಾಗಿದೆ. ಈ ಶಬ್ದಗಳನ್ನು ನೋಡಿದರೆ, ರವಿ ಹಾಗೇ ಮಾತಾಡಿದ ಎಂದು ಹೇಳುವ ನೈತಿಕತೆಯೇ ಉಳಿದುಕೊಂಡಿಲ್ಲ. ಬೆಂಬಲಿಗರು ಹಲ್ಲೆ ಬಂದಾಗ ಏನನಿಸಿತು? ನನ್ನ ಮೇಲೆ ಹಲ್ಲೆ ಮಾಡಲು ಬಂದರಲ್ಲ ಸದ್ದಾಂ ಎನ್ನುವ ವ್ಯಕ್ತಿ ಚನ್ನರಾಜ್ ಹಟ್ಟಿಹೊಳಿ ಆಪ್ತಸಹಾಯ. ಇನ್ನೊಬ್ಬ ಸಂಗನಗೌಡ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ. ಅವರೊಂದಿಗೆ ಆರೆಂಟು ಜನ. ಅವರಿಗೆ ಪಾಸ್ ಕೊಟ್ಟಿದ್ದು ಯಾರು? ಒಳಗೆ ಬಿಟ್ಟವರು ಯಾರು? ಅವರನ್ನು ವಶಕ್ಕೆ ಪಡೆದಿದ್ದರೂ ಅವರನ್ನು ಬಿಡಿಸಿದ್ದು ಯಾರು? ಎಲ್ಲಿನ್ಯಾಯಯುತವಾಗಿ ನಡೆದುಕೊಂಡಿದ್ದಾರೆ. ಈ ಎಲ್ಲವನ್ನು ರಾಜಕೀಯವಾಗಿ ಮಾಡಿ, ಈಗ ಧರ್ಮಸ್ಥಳಕ್ಕೆ ಬನ್ನಿ ಅಂದರೆ ಅವರ ಆತ್ಮಸಾಕ್ಷಿಗೆ ಅನುಗುಣವಾಗಿ ಅವರು ನಡೆದುಕೊಂಡಿದ್ದಾರೆಯೇ? ರಾತ್ರಿಯಿಡೀ ಸುತ್ತಾಡಿಸಿದ್ದು ಏಕೆ? ಬೀದಿಯಲ್ಲಿ ರಕ್ಷಣೆ ಕೊಡಲು ಆಗುವುದಿಲ್ಲವೆಂದು ಠಾಣೆಗೆ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ ಠಾಣೆಯಲ್ಲಿ ರಕ್ಷಣೆ ಕೊಡಲು ಆಗುವುದಿಲ್ಲವೆಂದು ಬೀದಿಗೆ ಕರೆದುಕೊಂಡು ಬರಲಾಯಿತು ಎಂದು ಎಡ ಮಾರ್ಟಿನ್ ಹೇಳಿದ್ದಾರೆ. ಈ ಹೇಳಿಕೆಗೆ ಬಗ್ಗೆ ಸಂಶೋಧನೆ ನಡೆಸಬೇಕಿದೆ. ನನ್ನನ್ನು ಅಕ್ರಮವಾಗಿ ಬಂಧಿಸಿದ ಬಳಿಕ ಪೊಲೀಸ್ ಠಾಣೆಗೆ ಕರೆದು ಕೊಂಡು ಹೋಗುವ ಬದಲು ರಾತ್ರಿಯಿಡೀ ಸುತ್ತಾಡಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ಸುರಕ್ಷತೆ ನೀಡದ ವರು ರಸ್ತೆಯಲ್ಲಿ, ಕಬ್ಬಿನ ಗದ್ದೆಯಲ್ಲಿ, ಕಲ್ಲಿನ ಕ್ವಾರಿಯಲ್ಲಿ ಹೇಗೆ ರಕ್ಷಣೆ ಕೊಡುತ್ತಾರೆ? ಅಂದು ಪೊಲೀಸರು ಐಪಿಸಿ ಅನ್ವಯ ಕಾರ್ಯನಿರ್ವಹಿಸದೇ ಕಾಂಗ್ರೆಸ್ ಪೊಲೀಸ್ ಕಾನೂನಿನಂತೆ ಕೆಲಸ ಮಾಡಿದ್ದಾರೆ. ರಾತ್ರಿಯಿಡೀ ಸುತ್ತಾಡಿಸಿದಾಗ ಸುರಕ್ಷತೆ ಇತ್ತೇ? ಇಲ್ಲ. ಇಡೀ ರಾತ್ರಿ ಕೇವಲ ಆರು ಪೊಲೀಸರು, ಎರಡು ವಾಹನಗಳೊಂದಿಗೆ ಸುತ್ತಾಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಗಳು ಪ್ರಕಟಿಸಿವೆ. ನೂರಾರು ಪೊಲೀಸರನ್ನು ಇಟ್ಟುಕೊಂಡು ರಕ್ಷಣೆ ಕೊಡಲಾಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದವರು, ಆರು ಪೊಲೀಸರನ್ನು ಇಟ್ಟುಕೊಂಡು ಕಬ್ಬಿನ ಗದ್ದೆ, ಕಲ್ಲಿನ ಕ್ವಾರಿ, ಕಾಡಿನ ದಾರಿಗೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈಗಲೂ ಫೋನ್ ಟ್ಯಾಪ್ ಆಗುತ್ತಿದೆಯೇ? ಈ ಹಂತದಲ್ಲಿಯೂ ನನ್ನ ಫೋನ್ ಕದ್ದಾಲಿಕೆಯಾಗುತ್ತಿದೆ ಎನ್ನುವುದು ಪೊಲೀಸ್ ಇಲಾಖೆಯಿಂದಲೇ ಸಿಕ್ಕಿರುವ ಮಾಹಿತಿ. ಆದರೆ ಆರಂಭದಲ್ಲಿ ಕೆಲವರ ಬೆಂಬಲಿಗರಿಂದ ಬರುತ್ತಿದ್ದ ಕೊಲೆ ಬೆದರಿಕೆ ಈಗ ನಿಂತಿದೆ. * ಘಟನೆ ನಡೆದ ಕ್ಷಣದಿಂದ ಈವರೆಗೆ ಸರಣಿಯಾಗಿ ಕಾನೂನು ಉಲ್ಲಂಘನೆ ಮಾಡಿ ಈಗ ಸಾಚಾ ಎಂದರೆ ಯಾರು ನಂಬುತ್ತಾರೆ? ನನಗಾದ ಅನ್ಯಾಯ ಇನ್ನೊಬ್ಬರಿಗೆ ಆಗಬಾರದು ಎನ್ನುವ ಕಾರಣಕ್ಕೆ ಹೋರಾಡುತ್ತೇವೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ಕೇಳುತ್ತಿದ್ದೇನೆ. ಸಿ.ಟಿ. ರವಿ ವಿಧಾನಪರಿಷತ್ ಸದಸ್ಯ ಇದನ್ನೂ ಓದಿ: Ranjith H Ashwath Column: ದೂರುಗಳು ರಾಜಕೀಯ ಅಸ್ತ್ರವಾಗದಿರಲಿ
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ