World Havyaka Sammelana: 2ನೇ ದಿನ ಆಗಮಿಸಿದ ಎರಡನೇ ತಲೆಮಾರು
ಶನಿವಾರ ವಾಗಿದ್ದರಿಂದ ವಾರಾಂತ್ಯ ವರ್ಷದ ಕೊನೆಯ ರಜೆಯಲ್ಲಿ ನಮ್ಮವರ ನಮ್ಮವರೊಂದಿಗಿನ ಹವಿ ಸವಿಬಾಂಧವ್ಯಕ್ಕೆ ಯುವ ಪೀಳಿಗೆ ತಮ್ಮ ಉಪಸ್ಥಿತಿ ನೀಡಿ ತಮ್ಮವರ
Ashok Nayak
December 29, 2024
ವಿನುತಾ ಹೆಗಡೆ, ಶಿರಸಿ
ಗ್ರಾಮೀಣ ಭಾಗದ ಆಲೆಮನೆಯ ವೈಭವ
ಚಿಕ್ಕ ಮಕ್ಕಳಿಗೂ ಪ್ರದರ್ಶನವಾಯ್ತು ಹಳ್ಳಿ ಸೊಗಡಿನ ಅನಾವರಣ
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಬ್ರಾಹ್ಮಣ ಮಹಾಸಭಾ ವಿಶ್ವ ಹವ್ಯಕ ಸಮ್ಮೇಳನದ ಎರಡನೇ ದಿನವೂ ಯಶಸ್ವಿ ಯಾಗಿ ನೆರವೇರಿತು. ಶನಿವಾರ ವಾರದ ರಜೆಯ ಕಾರಣ ಕಾರ್ಯಕ್ರಮಕ್ಕೆ ಯುವ ಸಮುದಾಯ ಸಾಗರೋಪಾದಿಯಲ್ಲಿ ಆಗಮಿಸಿತ್ತು. ಅಣ್ಣಯ್ಯ ಅಕ್ಕಯ್ಯರ ದಿಬ್ಬಣದೊಂದಿಗೆ ಸಂಭ್ರಮವೋ ಸಂಭ್ರಮ.
ಒಂದೆಡೆ ವಿದ್ವತ್ ಪಡೆದ ವಿದ್ವಾಂಸರಿಗೆ ಹವ್ಯಕ ರತ್ನಗಳ ಪುರಸ್ಕಾರ ನಡೆಯುತ್ತಿದ್ದರೆ ಮೊಮ್ಮಕ್ಕಳಾದಿಯಾಗಿ ಸಂಭ್ರಮಿಸುತ್ತಿದ್ದರು. ನಿಜಕ್ಕೂ ಇಂತದ್ದೊಂದು ಸಮ್ಮೇಳನ ಹೇಗೆ ಸಂಬಂಧಗಳ ಒಂದುಗೂಡಿಸಬಲ್ಲದು ಎನ್ನುವುದಕ್ಕೆ ಸ್ಪಷ್ಟ ಚಿತ್ರಣ ವಿಟ್ಟಿತು. ಶನಿವಾರ ವಾಗಿದ್ದರಿಂದ ವಾರಾಂತ್ಯ ವರ್ಷದ ಕೊನೆಯ ರಜೆಯಲ್ಲಿ ನಮ್ಮವರ ನಮ್ಮವರೊಂದಿಗಿನ ಹವಿ ಸವಿಬಾಂಧವ್ಯಕ್ಕೆ ಯುವ ಪೀಳಿಗೆ ತಮ್ಮ ಉಪಸ್ಥಿತಿ ನೀಡಿ ತಮ್ಮವರ ಪ್ರೀತಿ ಆದರತೆ ತೆರೆದಿಟ್ಟಿತು. ಊಟದ ವಿಶೇಷವೇನು?: ಉತ್ತರ ಕನ್ನಡ ಜಿ ಶಿರಸಿಯ ಹಿಟ್ಟಿನ ಹೋಳಿಗೆ ಗುಳಬದನೆ ಪಲ್ಯ, ಹಾಲ್ಗುಂಬಳಕಾಯಿ ಪಾಯಸ, ಕಡೆದ ಮಜ್ಜಿಗೆ ಮುಂತಾದವು ಹವ್ಯಕರ ರಸದೂಟಕ್ಕೆ ಕರೆದಿತ್ತು.
ನಗರದಲ್ಲಿರುವರನ್ನು, ಗ್ರಾಮೀಣ ಭಾಗದಿಂದ ಹೋದವರ ನಾಲಿಗೆ ಚಪ್ಪರಿಸುವಂತೆ ಮಾಡಿದ್ದು ಇನ್ನು ಪಾಕ ಶಾಲೆಯಲ್ಲಿಯೂ ಹವ್ಯಕರು ಕಿಕ್ಕಿರಿದು ತುಂಬಿದ್ದರು ತಮಗೆ ಬೇಕು ಎಂದರೆ ಯಾರು ಕೂಡ ದುಡ್ಡಿನ ಮುಖ ನೋಡುವವರಲ್ಲ ಬೇಕಿದ್ದನ್ನು ತಿಂದು ತೇಗುವವರು. ಸುರುದು ಉಣ್ಣಬೇಕು, ಗೊರೆದು ನಿದ್ದೆ ಮಾಡಬೇಕು ಆಗಲೇ ಅದು ಹವ್ಯಕತ್ವ ಊಟ ಎನಿಸುವುದು ಎನ್ನುವ ಮಾತೂ ಇದೆ.
ಹಾಗೆಯೇ ಯುವಸಮುದಾಯ ತಮಗೆ ಬೇಕಿದ್ದನ್ನು ತಿನ್ನಲು ಆ ಶಾಲೆಯಲ್ಲೂ ಧಾವಿಸಿ ರುಚಿಯಾದ ಊರಿನ ಶೈಲಿಯ ಹವ್ಯಕ ಅಡುಗೆಯನ್ನು ಅಸ್ವಾದಿಸಿದರು. ಇನ್ನೊಂಡೆಯ ವೇದಿಕೆಯಲ್ಲಿ ಸಂಗೀತ ನೃತ್ಯ ಸಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದವು ಅಲ್ಲಿಯೂ ಕೂಡ ಚಪ್ಪಾಳೆ ಸದ್ದು ಮೊಳಗುತ್ತಿತ್ತು. ಸ್ವಲ್ಪ ಮಟ್ಟಿಗೆ ಯುವ ಪೀಳಿಗೆಯವರು ಹವ್ಯಕ ಭಾಷೆಯ ಜೊತೆಗೆ ನಗರ ಭಾಷೆಯನ್ನು ಸೇರಿಸಿಕೊಂಡು ಮಾತನಾಡುತ್ತಿರುವುದು ಕಂಡುಬಂದರೂ ಹವ್ಯಕ ಭಾಷೆ ಮಾಸಿದಂತೆ ಕಂಡಿರಲಿಲ್ಲ ಆ ಮೇಲಿನ್ ಮನೆ ಅಣ್ಣ ಬಂದಿನೊ, ಎನ್ ಕ್ಲಾಸ್ಮೆಂಟ್‌ನ ಸತೀಶ ಹೇಳುವ ಬಂದಿನೊ ಎನ್ನುತ್ತ ಮಾತನಾಡುತ್ತ ಪ್ರೀತಿಯಿಂದಎಲ್ಲರನ್ನು ಅವರವರೆ ಪರಿಚಯಿಸಿಕೊಳ್ಳುತ್ತಿರುವ ಯುವ ಜನತೆ ಉತ್ಸಾಹದ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಆಲೆಮನೆ ಹಬ್ಬ ಆರಂಭವಾಗುತ್ತದೆ ಎಲ್ಲ ಹವ್ಯಕರಿಗೆ ಒಂದು ರೀತಿಯ ಸಡಗರ ಮತ್ತು ಸಂಭ್ರಮ. ಈ ಗ್ರಾಮೀಣ ಪ್ರದೇಶದ ಆಲೆಮನೆಯನ್ನೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿರ್ಮಿಸಲಾಗಿತ್ತು.
ಯಂತ್ರಗಳು ವಿನೂತನ ಯಂತ್ರಗಳು ಬಂದು ಕಬ್ಬನ್ನು ಅರೆಯುವ ಈ ಕಾಲಘಟ್ಟದಲ್ಲಿ ಹಿಂದಿನ ಕಾಲದಲ್ಲಿ ಎತ್ತು ಕೋಣಗಳನ್ನು ಜೋಡಿಸಿಕೊಂಡು, ನೊಗವಿಟ್ಟು ಆ ಕಾಲದ ಅದೇ ರೀತಿಯ ಕೋಣನ ಕಟ್ಟಿ ಕಬ್ಬರೆಯುವ ಆಲೆಮನೆ ಅರಮನೆ ಮೈದಾನದಲ್ಲಿತ್ತು.
ಹೀಗೆ ಹತ್ತಾರು ರೀತಿಯಲ್ಲಿ ಹಾಲು ಮತ್ತು ಬೆಲ್ಲವನ್ನು ತಯಾರಿಸಿ ಹವ್ಯಕ ಶೈಲಿಯ ತಿಂಡಿ ತಿನಿಸು ಅತ್ಯಂತ ರುಚಿಕರವಾಗಿ ಮಾಡಲಾಗಿತ್ತು ಚಿಕ್ಕ ಚಿಕ್ಕ ಮಕ್ಕಳು ಹಳೆಯ ಕಾಲದ ಆಲೆಮನೆಯನ್ನು ಕಂಡು ಸಂತಸ ಪಟ್ಟರು ನಿಜಕ್ಕೂ ಇಂಥದ್ದೊಂದು ಅದ್ಭುತ ಕಾರ್ಯ ಮಾಡಲು ಸಾಕಷ್ಟು ಶ್ರಮವೇ ಬೇಕಿತ್ತು ಅಲ್ಲಿಯ ಕಬ್ಬನ್ನು ಅರೆದು ಅಲ್ಲಿಯೇ ಕಬ್ಬನ್ನು ಕಬ್ಬಿನ ಹಾಲನ್ನು ಕಾಯಿಸಿ ಬೆಲ್ಲವನ್ನು ಕೂಡ ತಯಾರಿಸಲಾಗಿತ್ತು ಅನೇಕರಿಗೆ ಬೆಲ್ಲ ಹೇಗೆ ತಯಾರಿಸಲಾಗುತ್ತದೆ ಎಂಬುದರ ಅರಿವು ಇಲ್ಲ ವಾಗಿದ್ದು ಆದರೆ ಅಂತಹದೊಂದು ಪ್ರತ್ಯಕ್ಷಗೆ ಕೂಡ ಇಲ್ಲಿ ಅದ್ಭುತವಾಗಿ ನಡೆದಿದೆ.
ಅಮೃತ ಘಳಿಗೆ ಅನುಭವಮೂರನೇ ಹವ್ಯಕ ವಿಶ್ವ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿ ಪಡೆದದ್ದು ನನ್ನ ಪಾಲಿಗೆ ಆನಂದದ ಕ್ಷಣ. ಎರಡು ಕಾರಣಗಳಿಗಾಗಿ ಅದೊಂದು ಅಮೃತ ಘಳಿಗೆ. ಮೊದಲ ಕಾರಣ ಏನೆಂದರೆ, ಅತಿ ಸ್ವಲ್ಪ ಕಾಲಗಳ ಸಾಧನೆಗೆ ಗೌರವ ಸಿಕ್ಕಿದ್ದು. ಎರಡನೆಯ ಕಾರಣ, ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀಧರ್ ನನ್ನನ್ನು ಸನ್ಮಾನಿಸಿದ್ದು. ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು…..ಎಂಬ ’ಅಮೃತ ಘಳಿಗೆ’ ಚಲನಚಿತ್ರದ ಹಾಡಿನ ಮೂಲಕ ಉತ್ತಮ ಸಂದೇಶವನ್ನು ನೀಡಿದವರು ನಟ ಶ್ರೀಧರ್ ಅಂಥವರಿಂದ ಸನ್ಮಾನಕ್ಕೊಳಗಾಗಿದ್ದು, ಪ್ರೋತ್ಸಾಹ ಮತ್ತು ಬೆಂಬಲ ನನ್ನ ಜೀವನದಲ್ಲಿ ಮರೆಯಲಾಗದ್ದು ಎನ್ನುತ್ತಾರೆ ಹವ್ಯಕ ಸಾಧಕ ರತ್ನ ಪ್ರಶಸ್ತಿ ಪಡೆದ ಶಿವಾನಂದ ಪಂಡಿತ್.
ಇಂದು ಸಮ್ಮೇಳನಕ್ಕೆ ತೆರೆನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನವುಭಾನುವಾರ ತೆರೆ ಕಾಣಲಿದೆ. ಹವ್ಯಕರ ಹಬ್ಬಕ್ಕೆ ಎರಡೂ ದಿನ ಕಿಕ್ಕಿರಿದ ಸಂಖ್ಯೆಯಲ್ಲಿ ಸೇರಿದ್ದ ಸಮುದಾಯದ ಜನತಮ್ಮ ವಿಶಿಷ್ಟ ಸಂಸ್ಕೃತಿಯ ಅನಾವರಣಕ್ಕೆ ಸಾಕ್ಷಿಯಾದರು. ಅಖಿಲ ಹವ್ಯಕ ಮಹಾಸಭಾದಿಂದ ಆಯೋಜಿಸ ಲಾಗಿರುವ ಈ ಹಬ್ಬಕ್ಕೆ ಎಲ್ಲ ಸಮುದಾಯದವರಿಗೂ ಆಹ್ವಾನ ನೀಡಿದ್ದು ಹವ್ಯಕರ ಆರೋಗ್ಯಪೂರ್ಣ ಭೋಜನ, ತಿಂಡಿ, ತಿನಿಸು ಸವಿಯಲು ಹಾಗೂ ಪ್ರತಿಭೆ, ಕಲೆ, ಸಂಸ್ಕೃತಿ ವೀಕ್ಷಿಸಲು ವಿವಿಧ ಸಮುದಾಯಗಳ ಗಣ್ಯರು, ಜನರೂಪಾಲ್ಗೊಂಡಿದ್ದು ವಿಶೇಷವಾಗಿತ್ತು.ತಮ್ಮ ಸಮುದಾಯದ ಹಬ್ಬಕ್ಕೆ ಬೆಂಗಳೂರು ಮಾತ್ರವಲ್ಲದೆ ಶಿರಸಿ, ಸಿದ್ದಾಪುರ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮೊದಲಾದ ಭಾಗಗಳಿಂದ ಹವ್ಯಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ದಿನವಿಡೀ ಪಾಲ್ಗೊಂಡರು. ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ, ಅದಕ್ಕೆಸ್ವಾಮೀಜಿಗಳು ಹಾಗೂ ಗಣ್ಯರಿಂದ ಪರಿಹಾರಾತ್ಮಕ ಸಲಹೆಗಳು ಹರಿದುಬಂದವು.
ಇದನ್ನೂ ಓದಿ: Vinutha Hegde Column: ಜಗತ್ತಿನ ಮೊದಲ ಹಸಿರು ನ್ಯಾನೋ ಔಷಧದ ಅವಿಷ್ಕಾರ