Kannada Pradhikara: ಅಧಿನಿಯಮ ಅನುಷ್ಠಾನ: ಕನ್ನಡ ಪ್ರಾಧಿಕಾರಕ್ಕೆ ಅವಕಾಶ ಕಲ್ಪಿಸಿ
Kannada Pradhikara: ಅಧಿನಿಯಮ ಅನುಷ್ಠಾನ: ಕನ್ನಡ ಪ್ರಾಧಿಕಾರಕ್ಕೆ ಅವಕಾಶ ಕಲ್ಪಿಸಿ
Ashok Nayak
December 23, 2024
ಲೋಕೇಶ ಬಾಬು
ಸಮಾನಾಂತರ ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ ಜಯರಾಮರಾಜೇ ಅರಸ್ ಆಗ್ರಹ
ನ್ಯಾಯಾಂಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಲಹೆ
ಸಮನ್ವಯ ವೇದಿಕೆ -೧(ಮಂಡ್ಯ): ರಾಜ್ಯ ಮಟ್ಟದ ಸಮನ್ವಯ ಸಮಿತಿಗೆ ತಿದ್ದುಪಡಿ ಮಾಡಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿನಿಯಮ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಬೇಕು. ಸರಕಾರ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ಚಿಂತಕ ಬಿ.ಆರ್.ಜಯರಾಮ ರಾಜೇ ಅರಸ್ ಆಗ್ರಹಿಸಿದರು.
ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಸಮಾನಾಂತರ ವೇದಿಕೆ ಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ -2022 : ಪರಿಣಾ ಮಕಾರಿ ಅನುಷ್ಠಾನ ಕುರಿತಾದಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರಕಾರಿ ಕೆಲಸಕ್ಕೆ ಕನ್ನಡ ಉತ್ತೀರ್ಣ ಕಡ್ಡಾಯವಾಗಲಿ: ಸ್ವತಂತ್ರ ಸಮಿತಿಗೆ ತಜ್ಞರು, ಕಾನೂನು ಅಽಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ರಚಿಸಬೇಕು. ಅದರ ನಿರ್ವಹಣೆ ಸರಕಾರ ಮಾಡಬೇಕು.ಅಧಿನಿಯಮ ಬಂದ ಮೇಲೆ ಕನ್ನಡ ಭಾಷೆ ಅನುಷ್ಠಾನ ಮಾಡದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ಇದೆ. ಅಧಿನಿಯಮ ಪರಿಣಾಮಕಾರಿಯಾಗಿ ಕೆಲಸ ಮಾಡ ಬೇಕಾದರೆ ಪ್ರತ್ಯೇಕವಾದ ಅವಕಾಶ ಮಾಡಿ ಕೊಡಬೇಕು ಎಂದು ಅರಸ್ ಸಲಹೆ ಮಾಡಿದರು.
ತಾಯಿಯಷ್ಟೇ ಕನ್ನಡವನ್ನು ಪ್ರೀತಿಸಿಭಾಷೆ ಅನುಷ್ಠಾನಕ್ಕಾಗಿ ಕನಿಷ್ಟ ಶಿಕ್ಷೆ ಈಗ ಬಂದಿದೆ. ಅದು ಆಗದಿದ್ದರೆ ಕೆಲ ಸಂಸ್ಥೆಗಳು ಕನ್ನಡಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಾರೆ. ಕನ್ನಡದ ಬಗ್ಗೆ ಅಸಡ್ಡೆ ಜಾಸ್ತಿ ಆಗಲಿದೆ. ತಾಯಿಯಷ್ಟೇ ಕನ್ನಡವನ್ನುಪ್ರೀತಿಸಬೇಕು. ನಮ್ಮೆಲ್ಲರ ಪರಭಾಷಾ ಭ್ರಮೆಯಿಂದಾಗಿ ಕನ್ನಡ ಸೊರಗುತ್ತಿದೆ. ನಮ್ಮ ಭಾಷೆ ಬೇರೆ ಭಾಷೆಗಿಂತ ಕಡಿಮೆ ಇಲ್ಲ. ಕನ್ನಡದ ಬಗ್ಗೆ ಕೀಳರಿಮೆ ಬೇಡ. ಕನ್ನಡ ನಾಡಿನಲ್ಲಿ ಹುಟ್ಟಿದವರು ಭಾಗ್ಯಶಾಲಿಗಳು. ಬೇರೆ ರಾಜ್ಯ, ದೇಶಗಮನಿಸಿದರೆ ಕರ್ನಾಟಕದಲ್ಲಿ ನೆಮ್ಮದಿ ಇದೆ. ಕನ್ನಡ ಕಲಿತವರಿಗೆ ಉದ್ಯೋಗ ಸಿಗಲಿ. ಕನಿಷ್ಠ ಕೆಳಮಟ್ಟದದರೂ ಉದ್ಯೋಗ ಸಿಗಲಿ. ಜಮೀನು, ನೀರು, ವಿದ್ಯುತ್ತನ್ನು ಪ್ರತಿಷ್ಠಿತ ಕಂಪನಿಗಳಿಗೆ ನೀಡಿದವರು ನಾವು. ಅದಕ್ಕಾಗಿ ಈಅಽನಿಯಮ ಮಾಡಲಾಗಿದೆ ಎಂದು ನ್ಯಾ.ನಿಜಗಣ್ಣವರ್ ಹೇಳಿದರು.