Vegetables price down: ಈರುಳ್ಳಿ, ಆಲೂಗಡ್ಡೆ ದರದಲ್ಲಿ ಇಳಿಕೆ !
Vegetables price down: ಈರುಳ್ಳಿ, ಆಲೂಗಡ್ಡೆ ದರದಲ್ಲಿ ಇಳಿಕೆ !
Ashok Nayak
January 2, 2025
ಹೂವಪ್ಪ ಐ.ಎಚ್., ಬೆಂಗಳೂರು
ಅಲೂಗಡ್ಡೆ ದರ ಶೇ.30, ಈರುಳ್ಳಿ ದರದಲ್ಲಿ ಶೇ.40ರಷ್ಟು ಕುಸಿತ
ಅಕ್ಕಿ, ಟೊಮೇಟೊ ಬೆಳ್ಳುಳ್ಳಿ ಬೆಲೆ ಇಳಿಕೆ ಬೆನ್ನ ಈಗ ಜನಸಾಮಾನ್ಯರಿಗೆ ಈರುಳ್ಳಿ ಆಲೂಗಡ್ಡೆ ಇಳಿಕೆ ಗ್ರಾಹಕರಿಗೆಬಾರೀ ಖುಷಿ ತಂದಿದೆ. ಭಾರತದಲ್ಲಿ ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿ ಮಳೆಗೆ ಈರುಳ್ಳಿ ಬೆಲೆ ಕುಸಿತದಿಂದ ಬೆಲೆಗಗನಮುಖಿಯಾಗಿತ್ತು.
ಎಪಿಎಂಸಿಗೆ ಈರುಳ್ಳಿ ಆವಕ: ಸದ್ಯದ ಮಹಾರಾಷ್ಟ್ರದ ಸೊಪುರ ಸೇರಿ ರಾಜ್ಯದ ವಿಜಯಪುರ, ಕಲಬುರಗಿಜಿಯಲ್ಲಿ ಬೆಳೆದಿರುವ ಈರುಳ್ಳಿಯು ಬೆಂಗಳೂರು ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನಪ್ರಮಾಣದಲ್ಲಿ ಅವಕವಾಗುತ್ತಿದೆ. ಬೆಲೆ ಇಳಿಕೆಗೆ ಇದು ಪ್ರಮುಖಕಾರಣವಾಗಿದೆ. ಶನಿವಾರ 51175 ಚೀಲ (ಪ್ರತಿಚೀಲ 50 ಕೆ.ಜಿ) ಅವಕವಾಗಿತ್ತು. ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ನಿತ್ಯವೂ ಎಂಬಂತೆ ಹೆಚ್ಚುಕಡಿಮೆ 230 ಟ್ರಕ್‌ಗಳಲ್ಲಿ 48 ಸಾವಿರ ಚೀಲ ಈರುಳ್ಳಿ ಆವಕವಾಗುತ್ತಿತ್ತು ಈಗ ಸದ್ಯ ಸ್ವಲ್ಪ ಕಾರಣಾಂತರಗಳಿಂದಆವಕ ಕಡಿಮೆಯಾಗಿದ್ದು, ಇದು ಇನ್ನೊಂದು ವಾರದಲ್ಲಿ ಅಷ್ಟೇ ಪ್ರಮಾದಲ್ಲಿ ಆವಕ ಹೆಚ್ಚಾಗಲಿದೆ ಎನ್ನುತ್ತಾರೆಈರುಳ್ಳಿ ಸಗಟು ವರ್ತಕರು.
ಆಲೂಗಡ್ಡೆ ಬೆಲೆ ಇಳಿಕೆ: ಹಾಸನ ಕೋಲಾರ ಚಿಕ್ಕಬಳ್ಳಾಪುರ ಹೊಸ ಆಲೂಗಡ್ಡೆ ಮಾರುಕಟ್ಟೆಗೆ ಬಂದಿಳಿಯುತ್ತಿದೆ. ಜತೆಗೆ ಉತ್ತರಪ್ರದೇಶ, ಮಧ್ಯಪ್ರದೇಶ, ಆಗ್ರಾ ಆಲೂಗಡ್ಡೆ ಕೂಡಾ ಸರಬರಾಜಾಗುತ್ತಿದೆ. ಹೀಗಾಗಿ ಬೆಲೆ ಇದರಪರಿಣಾಮ ಆಲೂಗಡ್ಡೆ ಬೆಲೆ ಇಳಿಕೆಯಾಗಿದೆ. ಉತ್ತರಭಾರತದ ಕೃಷಿ ಮಾರುಕಟ್ಟೆಗಳಲ್ಲಿ ಆಲೂಗಡ್ಡೆ ದರವು ಕಳೆದ ತಿಂಗಳಿಂದಿಚೆಗೆ ಶೇ.30ರಷ್ಟು ಇಳಿಕೆಯಾಗಿದೆ. ಹೊಸ ಬೆಳೆಯು ಮಾರುಕಟ್ಟೆಗೆ ಬರುತ್ತಿದ್ದು, ದರ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಎಪಿಎಂಸಿ ಆಲೂಗಡ್ಡೆ ವ್ಯಾರಿಗಳು. ಉತ್ತರ ಭಾರತದ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 1600ರು.ಗಿಂತಲೂ ಕಡಿಮೆ ದರಕ್ಕೆ ಇಳಿದಿದೆ.
ನವೆಂಬರ್ ಕೊನೆಯಲ್ಲಿ ಕ್ವಿಂಟಲ್ ಗೆ 2200-2500 ರು.ನಷ್ಟಿತ್ತು. ಡಿಸೆಂಬರ್ ಎರಡನೇ ವಾರದಲ್ಲಿ 1550 ರು.ನಿಂದ 1750 ರು.ಗೆ ಇಳಿದಿದೆ. ಬೆಂಗಳೂರಿನಲ್ಲಿಯೂ ಕಳೆದೊಂದು ವಾರದಲ್ಲಿ ಆಲೂಗಡ್ಡೆ ದರ ಇಳಿಕೆಯಾಗಿದೆ. ಈ ಹಿಂದಿನ ಬೆಳೆಗೆ ಹೋಲಿಸಿದರೆ ಕೆಜಿಗೆ ಹೆಚ್ಚುಕಡಿಮೆ 8-10 ರು.ನಷ್ಟು ಇಳಿಕೆಯಾಗಿದೆ. ಮುಂದಿನ ಫೆಬ್ರವರಿ, ಮಾರ್ಚ್‌ಗೆ ಕೋಲಾರ ಜಿಲ್ಲೆಯ ಆಲೂಗಡ್ಡೆ ಪೂರೈಕೆ ಹೆಚ್ಚಾಗಲಿದೆ ಈ ಹಿನ್ನೆಲೆ ಇನ್ನಷ್ಟು ಬೆಲೆ ಇಳಿಕೆಯಾಗಲಿದೆ ಎಂದು ಬೆಂಗಳೂರು ಎಪಿಎಂಸಿ ಆಲೂಗಡ್ಡೆ ವರ್ತಕರು ಹೇಳುತ್ತಾರೆ.
ಮತ್ತಷ್ಟು ಬೆಲೆ ಇಳಿಕೆ ನಿರೀಕ್ಷೆಮುಂಗಾರಿನಲ್ಲಿ ತಡವಾಗಿ ಬಿತ್ತನೆ ಮಾಡಿರುವ ಹಾಗೂ ಹಿಂಗಾರಿನಲ್ಲಿ ಬಿತ್ತನೆ ಆಗಿರುವ ಈರುಳ್ಳಿಯ ಕಟಾವುಜನವರಿ ಎರಡನೇ ವಾರದಿಂದ ಆರಂಭವಾಗಲಿದೆ. ಚಿತ್ರದುರ್ಗ, ದಾವಣಗೆರೆ ಕಲಬುರಗಿ, ವಿಜಾಪುರ ಈರುಳ್ಳಿಯ ಕಟಾವು ಇನ್ನೇನು ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಈರುಳ್ಳಿ ಬೆಲೆ ಇಳಿಕೆಯಾಗಲಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳು. ಮುಂಗಾರು ಅವಧಿಯಲ್ಲಿ ಎಕರೆಗೆ 12 ಟನ್ನಂತೆ 1 ಲಕ್ಷಕ್ಕೂ ಹೆಚ್ಚು ಹೆಕ್ಟೆರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಅತಿವೃಷ್ಟಿ ಮಳೆ ಹಿನ್ನೆಲೆಯಲ್ಲಿ ಈ ವರ್ಷ ಇದರಲ್ಲಿ ಶೇ.40 ರಷ್ಟು ಇಳಿಕೆಯಾಗಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳು.
*
ಸದ್ಯ ಕಾರಣಾಂತರಗಳಿಂದ ಈರುಳ್ಳಿ ಆವಕ ಕಡಿಮೆಯಾಗಿದ್ದು, ಇದು ತಾತ್ಕಾಲಿಕ ಇನ್ನೊಂದು ವಾರದಲ್ಲಿ ಅಷ್ಟೇ ಪ್ರಮಾದಲ್ಲಿ ಆವಕ ಹೆಚ್ಚಾಗಲಿದೆ ಬೆಲೆ ಇನ್ನೂ ಇಳಿಕೆಯಾಗಲಿದೆ
-ರವಿಶಂಕರ ಬಿ. ಬೆಂಗಳೂರು ಎಪಿಎಂಸಿ ಈರುಳ್ಳಿ ಆಲೂಗಡ್ಡೆ ಸಗಟು ವರ್ತಕರ ಸಂಘದ ಕಾರ್ಯದರ್ಶಿ
ಇದನ್ನೂ ಓದಿ: Vegetables price rise: ತರಕಾರಿ ದರದ ಮೇಲೂ ಮಳೆ ಆರ್ಭಟ