ನೀವು ಬೇರೆಯವರ ಜತೆ ಕಾದಾಟಕ್ಕೆ ಬಿದ್ದರೆ ಅದರಿಂದ ಸೋಲಬಹುದು. ಒಂದು ವೇಳೆ ಗೆದ್ದರೂ ಅಲ್ಲಿಗೆ ಮುಗಿಯಿತು ಎಂಬು ದಿಲ್ಲ. ಅದರಿಂದ ದ್ವೇಷ ಬೆಳೆಯಬಹುದು. ಅದೇ ನೀವು ನಿಮ್ಮ ಜತೆ ಕಾದಾಟಕ್ಕೆ ಬಿದ್ದರೆ ನಿತ್ಯವೂ ಗೆಲ್ಲುತ್ತೀರಿ. ಯಾವತ್ತೂ ಜಗಳ, ಕಾದಾಟ, ಕದನ ನಮ್ಮ ಜತೆಗೆ ಇದ್ದರೆ ಒಳ್ಳೆಯದು.
ಅಧಿಕಾರ ಮತ್ತು ಹಣ ಜೀವನದ ಹಣ್ಣುಗಳಿದ್ದಂತೆ. ಕುಟುಂಬ ಮತ್ತು ಸ್ನೇಹಿತರು ಜೀವನದ ಬೇರುಗಳಿದ್ದಂತೆ. ಹಣ್ಣಿಲ್ಲದೇ ಬದುಕಬಹುದು. ಆದರೆ ಬೇರುಗಳಿಲ್ಲದೇ ನಿಂತುಕೊಳ್ಳಲಾರೆವು. ನಿಮ್ಮ ಆದ್ಯತೆಗಳೇನು ಎಂಬುದು...
ಸಮಸ್ಯೆಗಳನ್ನು ಸಂಕಷ್ಟ ಎಂದು ಭಾವಿಸುವ ಬದಲು, ಸವಾಲು ಎಂದು ಪರಿಗಣಿಸಿದರೆ ಅದನ್ನು ಎದುರಿಸಬಹುದು. ಹಲವರಿಗೆ ಸಂಕಷ್ಟಗಳು ಧೃತಿಗೆಡಿಸುತ್ತವೆ. ಸವಾಲುಗಳು ಪಂಥಾಹ್ವಾನವನ್ನು...
ಸಣ್ಣ ಇರುವೆ ಯಾರಿಗೇ ಕಚ್ಚಲಿ, ಕೊನೆಗೆ ಅದೇ ಸಾಯುತ್ತದೆ. ಜೇನ್ನೊಣವೂ ಹಾಗೇ. ಮತ್ತೊಬ್ಬರಿಗೆ ಕೆಡುಕು ಬಯಸುವವರು ತಮಗೇ ಹಾನಿ...
ನೀವು ಹೇಳುವ ಒಂದು ಸುಳ್ಳಿಗೆ ಸಾವಿರ ಸತ್ಯಗಳನ್ನು ಅಳಿಸಿ ಹಾಕುವ ಸಾಮರ್ಥ್ಯವಿದೆ. ಹೀಗಾಗಿ ಒಂದು ಸುಳ್ಳು ಹೇಳುವಾಗ ಹತ್ತು ಸಲ ಯೋಚಿಸಿ, ನಿಮ್ಮ ವ್ಯಕ್ತಿತ್ವಕ್ಕೆ ಮಾರಕವಾಗುತ್ತದೆಂದು ಅನಿಸಿದಾಗ,...
ನಿಮ್ಮ ಕನಸನ್ನು ನನಸು ಮಾಡದಿದ್ದರೆ ನಿಮ್ಮನ್ನು ನೀವು ಮೋಸ ಮಾಡಿಕೊಂಡಂತೆ. ನಿಮ್ಮ ಕನಸನ್ನು ಬೇರೆ ಯಾರೂ ಸಾಕಾರಗೊಳಿಸುವುದಿಲ್ಲ. ಅದನ್ನು ನೀವೇ...
ಯಾರಾದರೂ ತಮ್ಮ ಕಷ್ಟಗಳನ್ನು ಹೇಳಲಾರಂಭಿಸಿದರೆ, ಗಮನಕೊಟ್ಟು ಕೇಳುವ ಸಂಯಮ ತಂದುಕೊಳ್ಳಿ. ಎಷ್ಟೋ ಸಂದರ್ಭದಲ್ಲಿ ನಿಮ್ಮ ಮುಂದೆ ಹೇಳಿಕೊಂಡರೆ, ಅವರಿಗೆ ಸಮಾಧಾನ ಸಿಗುತ್ತದೆ. ಹಣದಿಂದಲೇ ಸಮಸ್ಯೆಯನ್ನು ಪರಿಹರಿಸ...
ಈ ಜಗತ್ತಿನಲ್ಲಿ ಸೋಲಿಗಿಂತ ಭಯ, ಆತಂಕಗಳು ಹೆಚ್ಚು ಕನಸುಗಳನ್ನು ಹೊಸಕಿ ಹಾಕಿವೆ. ನಾನು ಸೋಲುತ್ತೇನೆ ಎಂಬ ಭಯ ಎಂಥ ಕನಸನ್ನಾದರೂ ಮೊಳಕೆಯಲ್ಲೇ ಚಿವುಟಿ ಹಾಕಿಬಿಡುತ್ತದೆ. ನಮ್ಮೊಳಗಿನ ಭಯವನ್ನು...
ನಕಾರಾತ್ಮಕ ಧೋರಣೆಯುಳ್ಳ ಜನರಿಗೆ ಎಷ್ಟು ಕಡಿಮೆ ಪ್ರತಿಕ್ರಿಯೆ ಕೊಡುತ್ತೀರೋ, ನೀವು ಅಷ್ಟು ಹೆಚ್ಚು ನೆಮ್ಮದಿಯಿಂದ ಇರುತ್ತೀರಿ. ಅವರ ಧೋರಣೆಯಿಂದ ನಿಮ್ಮ ಮನಸ್ಸಿನ ಶಾಂತಿ, ನೆಮ್ಮದಿಯನ್ನು ಹಾಳು...
ನಿಮಗೆ ಯಾವುದಾದರೂ ಇಷ್ಟವಾಗಲಿಲ್ಲ ಅಂದರೆ, ಅದನ್ನು ಬದಲಿಸಲು ಪ್ರಯತ್ನಿಸಬೇಕು. ಒಂದು ವೇಳೆ ಅದನ್ನು ಬದಲಿಸಲು ಸಾಧ್ಯವಾಗದಿದ್ದರೆ, ನಿಮ್ಮ ಸ್ವಭಾವ, ಧೋರಣೆಯನ್ನು ಬದಲಿಸಿಕೊಳ್ಳಬೇಕು. ಬದಲಾವಣೆಗೆ ಮನಸ್ಸನ್ನು ಸದಾ ತೆರೆದಿಟ್ಟುಕೊಳ್ಳ...