Aamir Khan: ಆಮಿರ್ ಖಾನ್ ಭಿಕಾರಿಯಂತೆ ಮುಂಬೈನ ಬೀದಿ ಬೀದಿ ಅಲೆಯುತ್ತಿದ್ದಾರಾ? ವೈರಲಾಗ್ತಿರೋ ಈ ವಿಡಿಯೊದ ಅಸಲಿಯತ್ತೇನು?
Aamir Khan: ಮುಂಬೈನ ಬೀದಿಗಳಲ್ಲಿ ಆದಿಮಾನವನಂತೆ ಅಲೆದಾಡಿದ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ಎಂದು ಹೇಳಲಾಗಿತ್ತು. ಈತನನ್ನು ಮಾನಸಿಕ ಅಸ್ವಸ್ಥ, ಭಿಕ್ಷುಕ, ಎಂದು ಭಾವಿಸಿ ಫೇಮಸ್ ನಟನನ್ನೇ ಯಾರು ಗುರು ತಿಸಿಲ್ಲ ಎಂಬ ಸುದ್ದಿ ಸಹ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ ಪಟ್ಟೆ ಹರಿದಾಡಿತ್ತು. ಆದರೆ ಇದೀಗ ಈ ವಿಡಿಯೊ ಹಿಂದಿನ ಅಸಲಿ ಸತ್ಯಾಂಶ ಹೊರಬಿದ್ದಿದೆ.

Aamir khan

ಮುಂಬೈ: ಇತ್ತೀಚೆಗಷ್ಟೇ ಮುಂಬೈನ ಬೀದಿಯಲ್ಲಿ ಬೀದಿ ಭಿಕಾರಿಯ ವೇಷದಲ್ಲಿ ವ್ಯಕ್ತಿಯೊಬ್ಬ ತಿರುಗಾಡಿದ ದೃಶ್ಯವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆದರಿದ ಗಡ್ಡ, ಮೈ ತುಂಬ ಮಣ್ಣು, ಕೊಳೆಯಾದ ಬಟ್ಟೆ ಧರಿಸಿ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ. ಮುಂಬೈನ ಬೀದಿಗಳಲ್ಲಿ ಆದಿಮಾನವನಂತೆ ಅಲೆದಾಡಿದ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ (Aamir Khan) ಎಂದು ಹೇಳಲಾಗಿತ್ತು. ಈತನನ್ನು ಮಾನಸಿಕ ಅಸ್ವಸ್ಥ, ಭಿಕ್ಷುಕ ಎಂದು ಭಾವಿಸಿ ಫೇಮಸ್ ನಟನನ್ನೇ ಯಾರು ಗುರುತಿಸಿಲ್ಲ ಎಂಬ ಸುದ್ದಿ ಸಹ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು. ಆದರೆ ಇದೀಗ ಈ ವಿಡಿಯೊ ಹಿಂದಿನ ಅಸಲಿ ಸತ್ಯಾಂಶ ಹೊರಬಿದ್ದಿದೆ. ಈ ಮೂಲಕ ಇದು ಅಮಿರ್ ಖಾನ್ ಹೌದೋ ಅಲ್ಲವೋ ಎಂಬ ಗೊಂದಲಗಳಿಗೆ ಉತ್ತರ ಸಿಕ್ಕಿದೆ.
ಬೀದಿ ಭಿಕಾರಿಯಂತಿರುವ ವ್ಯಕ್ತಿಯೊಬ್ಬ ಮುಂಬೈನ ಬೀದಿ ಬದಿಯಲ್ಲಿ ಪಾನಿಪುರಿ ಸವಿಯುತ್ತ, ಮರದ ಗಾಡಿ ತಳ್ಳುತ್ತಾ ಸಾರ್ವಜನಿಕ ಪ್ರದೇಶದಲ್ಲಿ ಓಡಾಡುತ್ತಿದ್ದ.ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಆ ವ್ಯಕ್ತಿ ಬೇರೆ ಯಾರೂ ಅಲ್ಲ. ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್, ನಟ ಸಿನಿಮಾ ಪಾತ್ರಕ್ಕಾಗಿ ಈ ಲುಕ್‌ನಲ್ಲಿ ಓಡಾಡುವ ಮೂಲಕ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಅಸಲಿಗೆ ಅಮಿರ್ ಖಾನ್‌ಗೂ ಈ ವ್ಯಕ್ತಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬುದು ಖಾತರಿಯಾಗಿದೆ.
ವೈರಲಾಗಿರೋ ವಿಡಿಯೊ ಇಲ್ಲಿದೆ
To Ye Caveman Amir Khan Tha BC 😲😲
— POSITIVE FAN (@imashishsrrk) January 29, 2025
But Why ? pic.twitter.com/fRgDB6cEhr
ಬಾಲಿವುಡ್ ನಟ ಅಮಿರ್ ಖಾನ್ ಈ ಹಿಂದೆ ದಂಗಲ್, ಗಜಿನಿ ಮತ್ತು ಲಾಲ್ ಸಿಂಗ್ ಚಡ್ಡಾ ಮುಂತಾದ ಚಿತ್ರಗಳ ಪಾತ್ರ ಕ್ಕಾಗಿ ತಮ್ಮ ದೇಹವನ್ನು ತೀವ್ರವಾಗಿ ಪರಿವರ್ತಿಸಿದ್ದರು. ಇತ್ತೀಚಿನ ಒಂದು ಕೂಲ್ ಡ್ರಿಂಕ್ಸ್ ಜಾಹೀರಾತಿನಲ್ಲಿ ಕೂಡ ಆಮಿರ್ ಖಾನ್ ಅವರನ್ನು ಇದೇ ಲುಕ್‌ನಲ್ಲಿ ತೋರಿಸಲಾಗಿತ್ತು. ಹೀಗಾಗಿ ಇದು ಯಾವುದೋ ಸಿನಿಮಾದಲ್ಲಿ ಅಥವಾ ಜಾಹೀರಾತಿನಲ್ಲಿ ಅಭ್ಯಾಸ ಮಾಡಲು ಮುಂಬೈ ಬೀದಿ ಬದಿಯಲ್ಲಿ ಭಿಕಾರಿಯಂತೆ ಅಲೆಯುತ್ತಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಬೇರೊಬ್ಬ ವ್ಯಕ್ತಿಯ ವಿಡಿಯೊವನ್ನು ಆಮಿರ್ ಖಾನ್ ಎಂದು ಬಿಂಬಿಸಿ ವೈರಲ್ ಮಾಡಲಾಗಿತ್ತು. ಆದರೆ ನಟ ಆಮಿರ್ ಖಾನ್ ಅವರ ಆಪ್ತ ಮೂಲಗಳು ತಿಳಿಸುವ ಪ್ರಕಾರ ಮುಂಬೈ ಬೀದಿ ಬೀದಿಯಲ್ಲಿ ಅಲೆಯುತ್ತಿರುವ ವ್ಯಕ್ತಿ ಅಮಿರ್ ಖಾನ್ ಅಲ್ಲ. ದಯವಿಟ್ಟು ಇಂತಹ ಸುಳ್ಳು ಸುದ್ದಿ ಹರಡದಿರಿ ಎಂದು ತಿಳಿಸಿದೆ. ಈ ಮೂಲಕ ವೈರಲ್ ಆದ ವಿಡಿಯೊ ದಲ್ಲಿ ಇರುವುದು ಆಮಿರ್ ಖಾನ್ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಇದನ್ನು ಓದಿ: Vaamana Movie: ವಾಮನ ನೋಡಿ ರಾಜಹುಲಿ ಸಿನಿಮಾ ನೆನಪಿಸಿಕೊಂಡ ಚಿಕ್ಕಣ್ಣ
ಲಗಾನ್ , 3 ಈಡಿಯಟ್ಸ್ , ದಂಗಲ್ ಮತ್ತು ಗಜನಿಯಂತಹ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ಅಮೀರ್ ಖಾನ್ ಸದ್ಯ ಸಿತಾರೆ ಜಮೀನ್ ಪರ್' ಮತ್ತು 'ಲಾಹೋರ್ 1947 ಚಿತ್ರದ ತಯಾರಿಯಲ್ಲಿ ಇದ್ದಾರೆ. ನಟ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ಸಿನಿಮಾರಂಗಕ್ಕೆ ಪ್ರವೇಶಿಸುತ್ತಿದ್ದು ಲವ್ ಯಾಪ ಎನ್ನುವ ಸಿನೆಮಾದಲ್ಲಿ ನಟಿಸಲಿದ್ದಾರೆ. ಬಾಲಿವುಡ್‌ನಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದ ಅಮೀರ್ ಅವರ ಹೊಸ ಬ್ಲಾಕ್‌ಬಸ್ಟರ್ ಸಿನಿಮಾಕ್ಕಾಗಿ ಸಾಕಷ್ಟು ಅಭಿಮಾನಿಗಳು ಕಾತುರರಾಗಿದ್ದಾರೆ.