Hrithik Roshan: ಹೃತಿಕ್ ರೋಷನ್ ಕಹೋ ನಾ ಪ್ಯಾರ್ ಹೈ ಚಿತ್ರದ ಸಿದ್ದತೆಗಾಗಿ ತಯಾರಿ ನಡೆಸಿದ್ದ ಹಳೆಯ ಕೈ-ಬರಹದ ಪೋಸ್ಟ್ ವೈರಲ್
ಹೃತಿಕ್ ರೋಷನ್ ಅವರ ಹಿಟ್ ಚಿತ್ರ ಕಹೋ ನಾ ಪ್ಯಾರ್ ಹೈ ಚಿತ್ರ 25 ವರ್ಷಗಳನ್ನು ಪೂರೈಸಿದ್ದು ನಟ 27 ವರ್ಷಗಳ ಹಿಂದೆ ಚಿತ್ರಕ್ಕಾಗಿ ತಯಾರಿ ನಡೆಸಿದ ಸಂದರ್ಭದಲ್ಲಿ ಕೈ ಬರಹದಲ್ಲಿ ಬರೆದುಕೊಂಡಿರುವ ಟಿಪ್ಪಣಿಯನ್ನು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ
ನವದೆಹಲಿ,ಜ.16,3025: ಹೃತಿಕ್ ರೋಷನ್ (Hrithik Roshan) ಅವರ 2000 ಇಸವಿಯಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಸಿನಿಮಾ ಕಹೋ ನಾ ಪ್ಯಾರ್ ಹೇ’ ಚಿತ್ರ ಸೂಪರ್ ಹಿಟ್ ಕಂಡಿತ್ತು. ಇದೀಗ ಚಿತ್ರದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಕಹೋ ನಾ ಪ್ಯಾರ್ ಹೇ ಸಿನಿಮಾ ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಬಿಡುಗಡೆ ಕಂಡಿದೆ.
2000ನೇ ಸಾಲಿನ ಅತ್ಯಂತ ಯಶಸ್ವಿ ಬಾಲಿವುಡ್ ಸಿನಿಮಾ ಇದಾಗಿತ್ತು. ಇದೀಗ ಹೃತಿಕ್ ರೋಷನ್ ಕಹೋ ನಾ ಪ್ಯಾರ್ ಹೈ ಚಿತ್ರದ ತಯಾರಿಗಾಗಿ ಸಿದ್ದತೆ ಮಾಡಿಕೊಂಡಿದ್ದ 27 ವರ್ಷದ ಹಳೆಯ ಕೈಬರಹದ ನೆನಪನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈ, ಜನವರಿ 18, 2025: ಹೃತಿಕ್ ರೋಷನ್ ಅವರ ಹಿಟ್ ಚಿತ್ರ ಕಹೋ ನಾ ಪ್ಯಾರ್ ಹೈ ಚಿತ್ರ 25 ವರ್ಷಗಳನ್ನು ಪೂರೈಸಿದ್ದು ನಟ 27 ವರ್ಷಗಳ ಹಿಂದೆ ಚಿತ್ರಕ್ಕಾಗಿ ತಯಾರಿ ನಡೆಸಿದ ಸಂದರ್ಭದಲ್ಲಿ ಕೈ ಬರಹದಲ್ಲಿ ಬರೆದುಕೊಂಡಿರುವ ಟಿಪ್ಪಣಿಯನ್ನು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಈ ಮೂಲಕ ಹೃತಿಕ್ ಅವರು ಚಿತ್ರರಂಗದಲ್ಲಿ ತಮ್ಮ 25 ವರ್ಷಗಳ ಹಿಂದೆ ಕಳೆದ ಅನುಭವ ವನ್ನು ಹಂಚಿಕೊಂಡಿದ್ದಾರೆ. ಈ ನಂತರದಲ್ಲಿ ಏನೆಲ್ಲಾ ಬದಲಾಗಿದೆ ಎಂದು ಬರೆದು ಕೊಂಡಿದ್ದಾರೆ. 25 ವರ್ಷಗಳ ನಂತರವೂ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭಿಸುವಾಗ ಪ್ರತಿ ಬಾರಿ ಆತಂಕದಲ್ಲೇ ಇರುವುದನ್ನು ಪ್ರಸ್ತಾಪಿಸಿದ್ದಾರೆ.
ಹೃತಿಕ್ ಪೋಸ್ಟ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. “ನಾನು ಬರೆದಿಕೊಂಡಿರುವ ಈ ಟಿಪ್ಪಣಿ 27 ವರ್ಷಗಳ ಹಿಂದಿನದು. ನನ್ನ ಮೊದಲ ಚಿತ್ರ ಕಹೋ ನಾ ಪ್ಯಾರ್ ಚಿತ್ರಕ್ಕೆ ನಟನಾಗಿ ತಯಾರಿ ನಡೆಸುತ್ತಿರುವಾಗ ನಾನು ಎಷ್ಟು ನರ್ವಸ್ ಆಗಿದ್ದೆ ಎಂಬುದು ತನಗೆ ನೆನಪಿದೆ. ಇವುಗಳನ್ನು ಹಂಚಿಕೊಳ್ಳಲು ನಾನು ಮುಜುಗರಪಡುತ್ತೇನೆ, ಆದರೆ ಉದ್ಯಮದಲ್ಲಿ 25 ವರ್ಷಗಳ ನಂತರ ನಾನು ಅದನ್ನು ನಿಭಾಯಿಸಬಲ್ಲೆ, ಅಂದಿನಿಂದ ಇಂದಿನವರೆಗೆ, ಏನು ಬದಲಾಗಿದೆ ಎಂದು ನಾನು ಈ ಟಿಪ್ಪಣಿ ನೋಡಿ ಅರ್ಥಮಾಡಿಕೊಂಡಿದ್ದೇನೆ. ಕಹೋ ನಾ ಪ್ಯಾರ್ ಹೈಯ 25 ನೇ ವರ್ಷ ಪೂರೈಸಿದೆ ಎಂದು ಬರೆದುಕೊಂಡಿದ್ದಾರೆ.
ಬಹಳಷ್ಟು ಜನರಿಗೆ ಸ್ಟಾರ್ ಆಗುವುದೇ ಖುಷಿ ಕೊಡುತ್ತದೆ. ಆದರೆ ನನಗೆ ನಟ ಎಂಬ ಪದವೇ ಹೆಚ್ಚು ಹೆಮ್ಮೆ ಯಾಗಿದೆ. ಇದು ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಹೀಗಾಗಿ ಸರಳವಾಗಿದ್ದು ಬಿಡುವುದನ್ನೇ ರೂಢಿಸಿ ಕೊಂಡಿದ್ದೇನೆ’ ಎಂದಿದ್ದಾರೆ ಹೃತಿಕ್.ಹೃತಿಕ್ ಕೈಬರಹದ ಈ ಟಿಪ್ಪಣಿ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Upcoming Movies: 2025ರಲ್ಲಿ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ; ತೆರೆಮೇಲೆ ಅಬ್ಬರಿಸೋಕೆ ರೆಡಿ ಆಗ್ತಿವೆ ಈ ಸಿನಿಮಾಗಳು!
ಒಬ್ಬ ನೆಟ್ಟಿಗ ವಾವ್ ಆ ದಿನಗಳ ನೆನಪು ನೋಡಲು ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ ನಿಮ್ಮ ಮೊದಲ ಸಿನಿಮಾಕ್ಕಾಗಿ ನೀವು ಎಷ್ಟು ಶ್ರಮಿಸಿದ್ದೀರಿ! ದೇವರು ಆಶೀರ್ವದಿಸಲಿ ಈ ಸಿದ್ಧತೆಯು ನಿಮ್ಮನ್ನು ಬಾಲಿವುಡ್‌ನಲ್ಲಿ ದೊಡ್ಡ ಸ್ಟಾರ್ ಆಗಿ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ.