Saturday, 23rd November 2024

ಹಳಿ ತಪ್ಪಿದ ‘ಜನ ಶತಾಬ್ದಿ ಎಕ್ಸ್ ಪ್ರೆಸ್’ ರೈಲು

ಚೆನ್ನೈ: ಚೆನ್ನೈನಲ್ಲಿ ‘ಜನ ಶತಾಬ್ದಿ ಎಕ್ಸ್‌ಪ್ರೆಸ್’ ರೈಲು ಅಪಘಾತಕ್ಕೀಡಾಗಿದೆ. ಚೆನ್ನೈ ಬೇಸಿನ್ ಬ್ರಿಡ್ಜ್ ವರ್ಕ್‌ಶಾಪ್ ಬಳಿ ಜನ ಶತಾಬ್ದಿ ಎಕ್ಸ್‌ಪ್ರೆಸ್‌ನ 2 ಬೋಗಿಗಳು ಹಳಿ ತಪ್ಪಿದ್ದು, ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ವಿಜಯವಾಡದಿಂದ ಜನ ಶತಾಬ್ದಿ ಎಕ್ಸ್‌ಪ್ರೆಸ್ ಚೆನ್ನೈ ಪುರಟ್ಚಿ ತಲೈವರ್ ಡಾ. ಎಂಜಿಆರ್​ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದಿತ್ತು. ಗುರುವಾರ ಮಧ್ಯರಾತ್ರಿ 12 ಗಂಟೆಗೆ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಬೇಸಿನ್ ಬ್ರಿಡ್ಜ್ ವರ್ಕ್ ಶಾಪ್​​ಗೆ ತೆರಳಿತ್ತು.

ನಂತರ ವರ್ಕ್ ಶಾಪ್ ಬಳಿ ಬರುವಾಗ ಅನಿರೀಕ್ಷಿತವಾಗಿ ರೈಲಿನ 2 ಬೋಗಿಗಳು ಹಳಿ ತಪ್ಪಿದೆ ಎಂದು ತಿಳಿದು ಬಂದಿದೆ. ಸುಮಾರು 2 ಗಂಟೆಗಳ ಬಳಿಕ ರೈಲ್ವೆ ಸಿಬ್ಬಂದಿ ನೆರವಿನಿಂದ ಎರಡೂ ಬೋಗಿಗಳನ್ನು ಟ್ರಾಕ್​ಗೆ ತರಲಾ ಯಿತು. ಘಟನೆಯ ಕುರಿತು ರೈಲ್ವೆ ರಕ್ಷಣಾ ಪಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿ ದ್ದಾರೆ.

ಇದಕ್ಕೂ ಮೊದಲು ತಮಿಳುನಾಡಿನ ನೀಲಗಿರಿ ಮೌಂಟೇನ್ ರೈಲು ಕೂನೂರ್ ರೈಲು ನಿಲ್ದಾಣದಿಂದ ಹೊರಟ ಕೆಲವೇ ಮೀಟರ್‌ಗಳ ನಂತರ ಹಳಿ ತಪ್ಪಿದ್ದು, ಪ್ರಯಾಣಿಕರಲ್ಲಿ ನಡುಕ ಹುಟ್ಟಿಸಿತ್ತು. “ರೈಲು ಕೂನೂರಿನಿಂದ ಹೊರಟು ಮೆಟ್ಟುಪಾಳ್ಯಂ ಕಡೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿತ್ತು. ರೈಲಿನ ನಾಲ್ಕನೇ ಬೋಗಿ ಹಳಿಯಿಂದ ಹೊರ ಬಂದಿತ್ತು.

ಇಂಜಿನಿಯರ್‌ಗಳು ತಕ್ಷಣವೇ ರೈಲನ್ನು ನಿಲ್ಲಿಸಿದರು. 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು.