Thursday, 19th September 2024

ನಿಲ್ಲಿಸಿದ್ದ ಕಾರಿನಲ್ಲಿ ಮಕ್ಕಳು ಉಸಿರುಗಟ್ಟಿ ಸಾವು

ತಿರುನೆಲ್ವೇಲಿ: ನಿಲ್ಲಿಸಿದ್ದ ಕಾರ್ ನೊಳಗೆ ಸಿಲುಕಿ ಮೂವರು ಮಕ್ಕಳು ಉಸಿರು ಗಟ್ಟಿ ಮೃತಪಟ್ಟಿದ್ದಾರೆ.

ಜೂನ್ 4 ರ ರಾತ್ರಿ ತಿರುನಲ್ವೇಲಿ ಜಿಲ್ಲೆಯ ಪನಗುಡಿ ಬಳಿಯ ಲೆಬ್ಬೈ ಕುಡಿಯಿ ರಿಪ್ಪು ಎಂಬಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಈ ದುರಂತ ಘಟನೆ ಸಂಭವಿಸಿದೆ.

ಮೂಲಗಳ ಪ್ರಕಾರ, ಲೆಬ್ಬಾಯಿ ಕುಡಿಯಿರಿಪ್ಪುವಿನ ಕೀಲತೇರುವಿನ ದಿನಗೂಲಿ ಕಾರ್ಮಿಕ ನಾಗರಾಜ್ ಅವರ ಮಕ್ಕಳಾದ ನಿತೀಶಾ(7), ನಿತೀಶ್ (5) ಮತ್ತು ಕೂಲಿ ಕಾರ್ಮಿಕ ಸುಧನ್ ಅವರ ಮಗ ಕಬಿಶಾಂತ್(4) ಮೃತಪಟ್ಟವರು.

ನಾಗರಾಜ್ ಸಹೋದರ ಮಣಿಕಂದನ್ ಅವರಿಗೆ ಸೇರಿದ ಕಾರ್ ಇದಾಗಿದ್ದು, ಕೆಲವು ದಿನಗಳ ಹಿಂದೆ ಮನೆ ಬಳಿ ನಿಲ್ಲಿಸಲಾಗಿತ್ತು. ಮಧ್ಯಾಹ್ನ ಊಟದ ನಂತರ ಮಕ್ಕಳು ಆಟವಾಡಲು ಮನೆಯಿಂದ ಹೊರಗೆ ಹೋಗಿ ಕಾರ್ ಹತ್ತಿಕೊಂಡಿದ್ದರು. ಮಕ್ಕಳು ನಾಪತ್ತೆ ಯಾಗಿರುವುದನ್ನು ಕಂಡು ಪೋಷಕರು ಹುಡುಕಾಟ ಆರಂಭಿಸಿದ್ದಾರೆ.

ಕಾರ್ ಬಳಿ ಮಕ್ಕಳು ಆಟವಾಡುತ್ತಿದ್ದುದನ್ನು ಕಂಡ ದಾರಿಹೋಕರೊಬ್ಬರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಕಾರ್ ಒಳಗೆ ಮೂವರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರು ವುದನ್ನು ಪೋಷಕರು ಪತ್ತೆ ಮಾಡಿದ್ದಾರೆ. ಕಾರಿನ ಬಾಗಿಲು ಮುರಿದು ಮಕ್ಕಳನ್ನು ಪನಗುಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬರುವಾಗಲೇ ಅವರು ಮೃತಪಟ್ಟಿದ್ದರು.

ತಿರುನಲ್ವೇಲಿ ಎಸ್ಪಿ ಪಿ.ಸರವಣನ್ ಮಾತನಾಡಿ, ಮೂರು ದಿನಗಳಿಂದ ಕಾರ್ ಅಲ್ಲೇ ನಿಲ್ಲಿಸಲಾಗಿದೆ. ಆಮ್ಲಜನಕ ಕೊರತೆ ಯಿಂದಾಗಿ ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ಪಣಗುಡಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.