ಬೆಂಗಳೂರು: ಪಂಜಾಬ್‌ನಲ್ಲಿ ಇತ್ತೀಚೆಗೆ ಪೊಲೀಸರು ಬಂಧಿಸಿ ಕರೆದೊಯ್ಯುತ್ತಿದ್ದ ಯುವಕನೊಬ್ಬ ಕೋರ್ಟ್ ಆವರಣದಲ್ಲಿ ನಗುತ್ತಾ, ಜನರ ಕಡೆಗೆ ಕೈ ಬೀಸಿ ಹೋಗುತ್ತಿರುವ ವಿಡಿಯೊವೊಂದು ವೈರಲ್ (Viral Video) ಆಗಿತ್ತು. ಆತನ ಕೃತ್ಯ ಕೋರ್ಟ್ ಆವರಣದಲ್ಲಿ ಕ್ಯಾಮೆರಾಗಳ ಕಣ್ಣಿಗೆ ಬಿದ್ದು ಎಲ್ಲೆಡೆ ಪಸರಿಸಿದ ಕಾರಣ ಅದು ಚರ್ಚೆಯ ವಿಷಯವಾಯಿತು. ಆರಂಭದಲ್ಲಿ ವಿಷಯವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ತೆಗೆದುಕೊಂಡಿತ್ತು. ಆರೋಪಿ ಯುವಕನ ಬಗ್ಗೆ ಕೋಪವೂ ವ್ಯಕ್ತಗೊಂಡಿತು. ಆದರೆ, ನೈಜ ವಿಷಯ ತಿಳಿದ ಬಳಿಕ ಅಭಿಪ್ರಾಯಗಳು ಭಿನ್ನಗೊಂಡವು.
ಬಂಧಿತ ಯುವಕ ಹೆಸರು ಲವ್‌ಪ್ರೀತ್ ಸಿಂಗ್. ಆತ ಜೈಲು ಸೇರಿದ್ದು ಕೊಲೆ ಕೇಸ್‌ನಲ್ಲಿ. ಆದಾಗ್ಯೂ ಆತ ನಗುತ್ತಲೇ ಹೋಗಿದ್ದುಯಾಕೆ ಎಂಬುದೇ ಇಂಟ್ರೆಸ್ಟಿಂಗ್. ಲವ್ ಪ್ರೀತ್‌ನ ಸಹೋದರಿಯನ್ನು 2015ರಲ್ಲಿ ಓಂಕಾರ್ ಸಿಂಗ್ ಎಂಬಾತ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಜೈಲು ಸೇರಿ ಶಿಕ್ಷೆ ಮೊಟುಕುಗೊಂಡ ಬಳಿಕ ಆತ ಆರಾಮವಾಗಿ ಓಡಾಡಿಕೊಂಡಿದ್ದ. ಇದರಿಂದ ಕೋಪಗೊಂಡ ಲವ್‌ಪ್ರೀತ್ ಸಿಂಗ್ ಆತನನ್ನು ತನ್ನ ಸಹಚರರ ಜತೆ ಸೇರಿಕೊಂಡು ಕೊಲೆ ಮಾಡಿ ಇದೀಗ ಜೈಲು ಸೇರಿದ್ದಾರೆ. ಹೀಗಾಗಿ ಪೊಲೀಸರು ಅರೆಸ್ಟ್ ಮಾಡಿರುವ ಹೊರತಾಗಿಯೂ ನಗುನಗುತ್ತಾ ಕೋರ್ಟ್‌ಗೆ ಬಂದಿದ್ದಾನೆ. ಜನರತ್ತ ಕೈ ಬೀಸಿ ಸೇಡು ತೀರಿಸಿಕೊಂಡಿದ್ದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾನೆ.
ಲವ್ ಪ್ರೀತ್‌ನನ್ನು ಪಂಜಾಬ್‌ನ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಪೊಲೀಸರು ಕರೆ ತರುತ್ತಿದ್ದಾಗ ಆತ ಕ್ಯಾಮೆರಾಗಳತ್ತ ನೋಡಿ ನಗುತ್ತಾ ಕೈಬಿಸಿಕೊಂಡು ಹೆಮ್ಮೆಯಿಂದ ಹೆಜ್ಜೆ ಹಾಕಿದ್ದ. ಪೊಲೀಸ್ ಕಸ್ಟಡಿಯಲ್ಲಿರುವ ಯುವಕನ ವರ್ತನೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಯುವಕ ಲವ್‌ಪ್ರೀತ್ ಸಿಂಗ್ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಪಂಜಾಬ್‌ನ ಕಪುರ್ತಲಾದಲ್ಲಿ ಓಂಕಾರ್ ಸಿಂಗ್ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿ ಕೊಲೆ ಮಾಡಿದ್ದ . ಘಟನೆ ಬಳಿಕ ಲವ್‌ಪ್ರೀತ್ ಸಿಂಗ್ ಸ್ನೇಹಿತನನ್ನು ಬಂಧಿಸಲಾಗಿತ್ತು. ಆದರೆ ಲವ್‌ಪ್ರೀತ್ ಸಿಂಗ್ ತಲೆಮರೆಸಿಕೊಂಡಿದ್ದ.
2015ರಲ್ಲಿ ಲವ್ ಪ್ರೀತ್ ಸಿಂಗ್ ಸಹೋದರಿಯನ್ನು ಅತ್ಯಾಚಾರ ಮಾಡಿ ಕೊಂಡ ಓಂಕಾರ್ ಸಿಂಗ್ ಬಂಧನಕ್ಕೆ ಒಳಗಾಗಿದ್ದ ಆತನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ನಡುವೆ ಲವ್‌ಪ್ರೀತ್ ತಂದೆ ಮೃತಪಟ್ಟಿದ್ದರು. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಓಂಕಾರ್ ಸಿಂಗ್ ಶಿಕ್ಷೆಯ ಅವಧಿ ಮುಗಿದು ಬಿಡುಗಡೆಗೊಂಡಿದ್ದ. ಕೋಪಗೊಂಡ ಲವ್‌ಪ್ರೀತ್ ಸಿಂಗ್ ಹೊಂಚು ಹಾಕಿ ಓಂಕಾರ್ ಸಿಂಗ್ ಮೇಲೆ ದಾಳಿ ಮಾಡಿದ್ದ.
अपनी बहन के रेपिस्टों को तुरंत सजा देने वाला भाई… 👉🔥📸#जस्टिस#rap #punishingrapist #RapistBJP #resign pic.twitter.com/7lbBKz73mi
— Radheshyam Kurmi (@Radheshyam13132) September 12, 2024
ಆಗಸ್ಟ್ 28ರಂದು ವಿಷನ್‌ಪುರ ಜಟ್ಟಾ ಗ್ರಾಮದ ಬಳಿ ಓಂಕಾರ್ ಸಿಂಗ್ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಲವ್‌ಪ್ರೀತ್‌ನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರುತ್ತಿದ್ದಾಗ ತನ್ನ ಕಾರ್ಯದ ಬಗ್ಗೆ ಯಾವುದೇ ಬೇಸರ, ಮುಜುಗರವಿಲ್ಲದೆ ನಗುತ್ತಾ ಕೈಬೀಸಿದ್ದಾನೆ.
MLA Munirathna: ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸ್ ಕಸ್ಟಡಿಗೆ
ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಲವ್‌ಪ್ರೀತ್‌ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ತನಿಖೆ ಮುಂದುವರಿದಿದ್ದು, ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಕಲೆಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.