‌Deputy Chief Minister D K Shivakumar: ಪಾಪು ಪ್ರಪಂಚದ ವಿಶ್ವಾಸ ಹೊತ್ತ ವಿಶ್ವೇಶ್ವರ ಭಟ್

ಮುದ್ರಣ ಮಾಧ್ಯಮಗಳ ಮೇಲೆ ಜನರಿಗೆ ವಿಶ್ವಾಸವಿದೆ. ಟಿವಿ, ಡಿಜಿಟಲ್ ಮಾಧ್ಯಮಗಳಲ್ಲಿ ಸುದ್ದಿಗಿಂತ ಹೆಚ್ಚಾಗಿ ವಿವಾದಗಳನ್ನೇ ರಂಜಿಸಲಾಗುತ್ತಿದೆ. ಆದರೆ ಕನ್ನಡ ಮುದ್ರಣ ಮಾಧ್ಯಮ ಈಗಲೂ ಜನರಿಗೆ ವಾಸ್ತವತೆ ಯನ್ನು ತೋರಿಸುವ ಪ್ರಯತ್ನ ಮುಂದುವರಿಸಿವೆ

DKShivakumar
Profile Ashok Nayak January 15, 2025

Source : Vishwavani Daily News Paper

ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

ವಿಭಿನ್ನ ಪ್ರಯತ್ನಗಳಿಂದಲೇ ಮುನ್ನೆಲೆಗೆ ಬಂದ ವಿಶ್ವೇಶ್ವರ್ ಭಟ್ ಅವರು ‘ವಿಶ್ವವಾಣಿ’ ಯನ್ನು ಕಳೆದ ಒಂಬತ್ತು ವರ್ಷಗಳಿಂದ ತಮ್ಮ ಮಾಲೀಕತ್ವದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಒಬ್ಬ ರಾಜಕಾರಣಿಯ ಜೀವನದಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗ ಎನ್ನುವ ಮೂರು ಆಧಾರಸ್ತಂಭಗಳನ್ನು ಕಾಯುವ, ಈ ಮೂರು ಆಧಾರಸ್ತಭಗಳು ತಪ್ಪು ಹೆಜ್ಜೆಯಿಡದಂತೆ ನೋಡುವ ಕೆಲಸ ಮಾಡುವ ಪತ್ರಿಕಾರಂಗವೂ ಸಂವಿಧಾನದ ನಾಲ್ಕನೇ ಸ್ತಂಭವೆಂದರೆ ತಪ್ಪಾಗುವುದಿಲ್ಲ.

ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಧ್ಯಮಗಳು ದೇಶ ಕಟ್ಟುವ ಕೆಲಸದಲ್ಲಿ ‘ಕೀ ರೋಲ್’ ನಿರ್ವಹಿಸುತ್ತವೆ ಎನ್ನುವುದು ನನ್ನ ನಂಬಿಕೆ. ಭಾರತದಲ್ಲಿ ಮಾಧ್ಯಮಗಳ ಪಾತ್ರ

ಸ್ವಾತಂತ್ರ್ಯಪೂರ್ವದಿಂದಲೇ ಕಾಣಸಿಗುತ್ತದೆ. ಆದರೆ ಕಾಲಾನುಕ್ರಮ ಎಲ್ಲ ಕ್ಷೇತ್ರಗಳೂ ಬದಲಾದಂತೆ

ಮಾಧ್ಯಮ ರಂಗವೂ ಬದಲಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿಯೂ ಮುದ್ರಣ ಮಾಧ್ಯಮಗಳ

ಮೇಲೆ ಜನರಿಗೆ ವಿಶ್ವಾಸವಿದೆ. ಟಿವಿ, ಡಿಜಿಟಲ್ ಮಾಧ್ಯಮಗಳಲ್ಲಿ ಸುದ್ದಿಗಿಂತ ಹೆಚ್ಚಾಗಿ ವಿವಾದ

ಗಳನ್ನೇ ರಂಜಿಸಲಾಗುತ್ತಿದೆ. ಆದರೆ ಕನ್ನಡ ಮುದ್ರಣ ಮಾಧ್ಯಮ ಈಗಲೂ ಜನರಿಗೆ ವಾಸ್ತವತೆ ಯನ್ನು ತೋರಿಸುವ ಪ್ರಯತ್ನ ಮುಂದುವರಿಸಿವೆ.

ಯಾವುದೇ ಒಂದು ಮಾಧ್ಯಮ ಆಡಳಿತಾರೂಢ ಪಕ್ಷಗಳ ವಕ್ತಾರಿಕೆ ಮಾಡದೇ, ‘ಕಾಯಂ’ ಪ್ರತಿಪಕ್ಷ ಸ್ಥಾನದಲ್ಲಿ ಕೂತು ಸರಕಾರಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ನಾಲ್ಕು ಆಧಾರ

ಸ್ತಂಭಗಳು. ಇಡೀ ದೇಶದಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗ ಎರಡೂ ಎದುರು ಬದುರಾಗಿರು ವುದು, ಅವೆರಡರ ಮಧ್ಯೆ ಪ್ರೆಸ್‌ಕ್ಲಬ್ ಇರುವುದು ಬೆಂಗಳೂರಿನಲ್ಲಿ ಮಾತ್ರ.

ಕಾರ್ಯಾಂಗವು ಇದಕ್ಕೆ ಸಮೀಪದಲ್ಲಿದೆ. ಆದ್ದರಿಂದ ಎಲ್ಲವನ್ನೂ ಮಾಧ್ಯಮಗಳು ಸಮೀಪದಿಂದ

ನೋಡಬಹುದು. ಯಾರೋ ಒಬ್ಬ ವ್ಯಕ್ತಿಯನ್ನು ಉತ್ಕೃಷ್ಟಕ್ಕೆ ತೆಗೆದುಕೊಂಡು ಹೋಗುವ ಅಥವಾ

ಕೆಳಗೆ ಬೀಳಿಸುವ ಕೆಲಸ ಒಂದು ಸುದ್ದಿಯಿಂದಾಗುತ್ತದೆ. ಆದ್ದರಿಂದ ಯಾವುದೇ ಮಾಧ್ಯಮ ಪ್ರತಿ ಅಂಶ ಬರೆಯುವಾಗಲೂ ಎಚ್ಚರಿಕೆಯ ಹೆಜ್ಜೆ ಇಡಬೇಕು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತವಿಂದು ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ

ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವೇ ಮೂಲ. ಭಾರತದ ಮಾಧ್ಯಮ ಇತಿಹಾಸ ದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಮಹತ್ವವಿದೆ. ಕರ್ನಾಟಕದ ಮೊದಲ ಪತ್ರಿಕೆಯಾಗಿರುವ ‘ಮಂಗಳೂರು ಸಮಾಚಾರ’ದಿಂದ ಇಂದಿನ ಆಧುನಿಕ ಡಿಜಿಟಲ್ ಮಾಧ್ಯಮದವರೆಗೆ ಪತ್ರಿಕಾರಂಗದಲ್ಲಿರುವವರು ಆಳುವವರು ತಪ್ಪು ಮಾಡಿದಾಗ ‘ಎಚ್ಚರಿಸುವ’ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತಿದ್ದಾರೆ.

ಇಂತಹ ಭವ್ಯ ಇತಿಹಾಸವಿರುವ ಕನ್ನಡ ಪತ್ರಿಕಾ ರಂಗದಲ್ಲಿ, ವಿಶಿಷ್ಟ, ವಿಭಿನ್ನವಾಗಿ ಕಾಣಿಸುವುದು

ಕನ್ನಡದ ಅಸ್ಮಿತೆಯಾಗಿದ್ದ ಪಾಟೀಲ್ ಪುಟ್ಟಪ್ಪ ಎಂದರೆ ತಪ್ಪಾಗುವುದಿಲ್ಲ. ಕ್ಯಾಲಿಫೋರ್ನಿಯಾದಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡಿ ಭಾರತಕ್ಕೆ ವಾಪಸಾಗಿದ್ದರು. ವಿದೇಶದಲ್ಲಿ ಅಭ್ಯಾಸ ಮಾಡಿದ್ದ ಪಾಟೀಲ್ ಪುಟ್ಟಪ್ಪ ಅವರು ಮನಸ್ಸು ಮಾಡಿದ್ದರೆ ಯಾವುದೋ ಒಂದು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯಲ್ಲಿ ಕಾರ್ಯಾರಂಭ ಮಾಡಬಹುದಾಗಿತ್ತು. ಆದರೆ ಅದನ್ನು ಮಾಡದೇ, ತಮ್ಮ ವಿಚಾರಧಾರೆಗಳನ್ನು ಜನರಿಗೆ ಮುಕ್ತ ರೀತಿಯಲ್ಲಿ ತಲುಪಿಸುವ ನಿಟ್ಟಿನಲ್ಲಿ ತಮ್ಮದೇ ಸಂಪಾದಕತ್ವದಲ್ಲಿ ಹತ್ತಾರು ಪತ್ರಿಕೆಗಳನ್ನು ಆರಂಭಿಸಿದರು.

1947ರಲ್ಲಿ ವಿಶಾಲ ಕರ್ನಾಟಕ, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ, 1956ರಲ್ಲಿ ಸಂಗಮ ಮಾಸಿಕ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರೀ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದರು. ಈ ಎಲ್ಲ ಪತ್ರಿಕೆಗಳಿಗೆ ಕಿರೀಟವಿತ್ತಂತೆ 1959ರಲ್ಲಿ ‘ವಿಶ್ವವಾಣಿ’ ದಿನಪತ್ರಿಕೆ ಆರಂಭಿಸಿದ್ದರು. ಕರ್ನಾಟಕ ಏಕೀಕರಣ, ಗೋಕಾಕ ಚಳವಳಿ ಸೇರಿದಂತೆ ಕನ್ನಡದ ಭಾಷೆ-ಗಡಿ-ನೀರು ವಿಷಯದಲ್ಲಿ ನಿರ್ಭೀತಿಯಿಂದ ತಮ್ಮ ಹರಿತ ಲೇಖನಿಯ ಮೂಲಕ ರಾಜ್ಯವನ್ನು ಆಳುವ ಸರಕಾರ ಹಾಗೂ ಜನರನ್ನು ಎಚ್ಚರಿಸುವ ಕೆಲಸವನ್ನು ದಶಕಗಳ ಕಾಲ ನಿರಂತರವಾಗಿ ಮಾಡಿಕೊಂಡು ಬಂದಿದ್ದರು. ಇಂತಹ ಶ್ರೇಷ್ಠ ಇತಿಹಾಸ ಹೊಂದಿರುವ ‘ವಿಶ್ವವಾಣಿ’ ಕೇವಲ ಹುಬ್ಬಳ್ಳಿ ಆಸುಪಾಸಿಗೆ ಸೀಮಿತವಾಗಿತ್ತು.

ಇದನ್ನು ರಾಜ್ಯಕ್ಕೆ, ರಾಷ್ಟ್ರಕ್ಕೆ ವಿಸ್ತರಿಸಿದ್ದು 2016ರ ಬಳಿಕ. ಪಾಪು ಅವರು ತಮ್ಮ ಪತ್ರಿಕೆಯನ್ನು ‘ಅರ್ಹ’ರಿಗೆ ನೀಡಬೇಕು ಎನ್ನುವ ಹುಡುಕಾಟದಲ್ಲಿದ್ದಾಗ ಅವರಿಗೆ ಕಂಡದ್ದು ವಿಶ್ವೇಶ್ವರ ಭಟ್. ದಶಕಗಳ ಕಾಲ ‘ವಿಜಯ ಕರ್ನಾಟಕ’, ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಸಂಪಾದಕರಾಗಿ ಪತ್ರಿಕೆ ಮುನ್ನಡೆ ಸಿರುವ ವಿಶ್ವೇಶ್ವರ ಭಟ್ ಅವರಿಗೆ ತಮ್ಮ ನೆಚ್ಚಿನ ಪ್ರಪಂಚವಾಗಿದ್ದ ‘ವಿಶ್ವವಾಣಿ’ ಕೊಟ್ಟು ಮುನ್ನಡೆ ಸುವಂತೆ ಹೇಳಿದ್ದರು.

ಪತ್ರಿಕೋದ್ಯಮದಲ್ಲಿ ವಿಭಿನ್ನ ಪ್ರಯತ್ನಗಳಿಂದಲೇ ಮುನ್ನೆಲೆಗೆ ಬಂದ ವಿಶ್ವೇಶ್ವರ ಭಟ್ ಅವರು ‘ವಿಶ್ವವಾಣಿ’ಯನ್ನು ಕಳೆದ ಒಂಬತ್ತು ವರ್ಷಗಳಿಂದ ತಮ್ಮ ಮಾಲೀಕತ್ವದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪಾಪು ಅವರ ಸಂಪಾದಕತ್ವದಲ್ಲಿ ‘ವಿಶ್ವವಾಣಿ’ ಐದು ದಶಕಗಳ ಕಾಲ ಪಳಗಿತ್ತು.

ಆದರೆ ವಿಶ್ವೇಶ್ವರ ಭಟ್ ಅವರ ಮಾಲೀಕತ್ವದಲ್ಲಿ ಹೊಸರೂಪ, ವಿನೂತನ ರೀತಿಯಲ್ಲಿ ರಾಜ್ಯಾ ದ್ಯಂತ ಪ್ರಸಾರವಾಗುತ್ತ, ಇದೀಗ ಒಂಬತ್ತು ವರ್ಷ ತುಂಬಿ 10ನೇ ವರ್ಷಕ್ಕೆ ಕಾಲಿರಿಸಿದೆ.

ವೈಯಕ್ತಿಕವಾಗಿ ನಮ್ಮಿಬ್ಬರ ರಾಜಕೀಯ ನಿಲುವುಗಳು, ಸೈದ್ಧಾಂತಿಕ ಬದ್ಧತೆಗಳು ಸಂಪೂರ್ಣ ಭಿನ್ನ ಎನ್ನುವುದು ನಮ್ಮಿಬ್ಬರಿಗೂ ಗೊತ್ತಿದೆ. ಈ ಬಗ್ಗೆ ಇಬ್ಬರಲ್ಲೂ ಸ್ಪಷ್ಟತೆಯಿದೆ. ಪ್ರಯೋಗಶೀಲತೆಯೇ

ಕಳೆದ ಎರಡೂವರೆ ದಶಕದಿಂದ ನಾನಾ ಪತ್ರಿಕೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ವಿಶ್ವೇಶ್ವರ್ ಭಟ್ ಅವರನ್ನು ನೋಡಿದ್ದೇನೆ. ಎಷ್ಟೇ ಒತ್ತಡವಿದ್ದರೂ, ಯಾವುದೇ ಲಾಬಿಗೂ ಮಣಿಯದೇ, ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿಹಿಡಿಯುವ, ಸರಿಪಡಿಸಿಕೊಳ್ಳುವಂತೆ ಎಚ್ಚರಿಸುವ ಹಾಗೂ ಪ್ರತಿಪಕ್ಷಗಳು ಎಡವಿದಾಗ ಅವನ್ನೂ ಬಿಡದೇ ತಿವಿಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇದೇ ರೀತಿ ಉತ್ತಮ ಕೆಲಸ ಮಾಡಿದಾಗ ಬೆನ್ನು ತಟ್ಟಿರುವುದನ್ನೂ ನೋಡಿದ್ದೇನೆ. ಇತರೆ ಪತ್ರಿಕೆಗಳಿಗಿಂತ ‘ವಿಶ್ವವಾಣಿ’ ವಿಭಿನ್ನವಾಗಿ ನಿಲ್ಲುವುದು ಪತ್ರಿಕೆಯಲ್ಲಿರುವ ಸಂಪಾದಕೀಯ

ಪುಟಗಳಿಂದ. ವಿಶ್ವೇಶ್ವರ ಭಟ್ ಅವರ ಸಾರಥ್ಯದಲ್ಲಿ ವಿಶ್ವವಾಣಿ ಪತ್ರಿಕೆಯಾಗಿ ರಾಜ್ಯಾದ್ಯಂತ ಹೆಸರು ಮಾಡಿತ್ತು. ಆದರೆ ಪತ್ರಿಕೋದ್ಯಮದ ಇಂದಿನ ಅಗತ್ಯತೆ ಹಾಗೂ ಡಿಜಿಟಲೀಕರಣದ ಸ್ಪರ್ಶ ನೀಡಲು ಮುಂದಾದ ಭಟ್ಟರು, ವಿಶ್ವವಾಣಿ ಡಿಜಿಟಲ್ ಟಿವಿ, ವಿಶ್ವವಾಣಿ ಕ್ಲಬ್‌ಹೌಸ್ ಮೂಲಕ ಮತ್ತಷ್ಟು ಜನರನ್ನು ಮುಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ.

ವಿಷಯ ತಜ್ಞರು, ಹಿರಿಯ ರಾಜಕಾರಣಿಗಳು ಸೇರಿದಂತೆ ರಾಷ್ಟ್ರೀಯ ನಾಯಕರ ಅಂಕಣ, ಸಂದರ್ಶನ ಗಳನ್ನು ನಿರಂತರವಾಗಿ ಪ್ರಕಟಿಸುತ್ತಿರುವುದು ಶ್ಲಾಘನೀಯ. ಪತ್ರಿಕಾ ರಂಗ ಹಾಗೂ ರಾಜಕಾರಣ ಒಂದನ್ನೊಂದು ಬಿಟ್ಟಿರಲಾಗದ ನಂಟನ್ನು ಹೊಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಮಾಧ್ಯಮದವರನ್ನು ಬಿಟ್ಟು ನಮ್ಮ ಬದುಕಿಲ್ಲ. ಮಾಧ್ಯಮಗಳೇ ನನಗೆ ‘ಕನಕಪುರದ ಬಂಡೆ’ ಎಂದು ಬಿರುದು ಕೊಟ್ಟಿವೆ. ಬಳಿಕ ‘ಟ್ರಬಲ್ ಶೂಟರ್’ ಎಂಬ ಹೆಸರು ಕೊಟ್ಟಿದ್ದೀರಿ. ಇದೆಲ್ಲದರ

ಸೃಷ್ಟಿಕರ್ತರು ಮಾಧ್ಯಮದವರೇ ಆಗಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲವೂ ಮಾಧ್ಯಮದವರೇ ಆಗಿರುತ್ತಾರೆ. ಆದ್ದರಿಂದ ಈ ಹಿಂದೆ ಒಮ್ಮೆ ಹೇಳಿ ದಂತೆ, ‘ತೆಗಳುವವರು ನೀವೇ, ಹೋಗಳುವವರೂ ನೀವೇ. ಮೇಲೆ ಕೂರಿಸುವವರೂ ನೀವೇ, ಕೆಳಗೆ ಬೀಳಿಸುವವರೂ ನೀವೇ. ನೀವು ಏನಾದರೂ ಮಾಡಿ, ಆದರೆ ಸತ್ಯವನ್ನುಬರೆಯಿರಿ’. ಇತ್ತೀಚಿನ ದಿನದಲ್ಲಿ ಪತ್ರಿಕೋದ್ಯಮವೂ ಉದ್ಯಮಿಗಳ ಕೈಗೆ ಸಿಗುತ್ತಿರುವುದು

ದುರಂತದ ವಿಷಯ. ವ್ಯಾಪಾರಸ್ಥರ ಕೈಗೆ ಪತ್ರಿಕೋದ್ಯಮ ಸಿಕ್ಕಿ ಸತ್ಯ ಮುಚ್ಚುವ ಪರಿಸ್ಥಿತಿ ಬರುವುದು ಬೇಡ. ಈ ರೀತಿಯಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಾಯ. ಇಂತಹ ಪರಿಸ್ಥಿತಿ ಯಲ್ಲಿಯೂ ಪತ್ರಕರ್ತರೇ ಆಗಿರುವ ವಿಶ್ವೇಶ್ವರ್ ಭಟ್ ಅವರ ಸಂಪಾದಕತ್ವ ಹಾಗೂ ಮಾಲೀಕತ್ವ ದಲ್ಲಿ ಒಂಬತ್ತನೇ ವರ್ಷ ಪೂರೈಸಿ 10ನೇ ವರ್ಷಕ್ಕೆ ‘ವಿಶ್ವವಾಣಿ’ ಕಾಲಿಡುತ್ತಿದೆ. ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಇಡೀ ‘ವಿಶ್ವವಾಣಿ’ ಬಳಗಕ್ಕೆ ಶುಭಾಶಯ. ವಿಶೇಷವಾಗಿ ವಿಶ್ವೇಶ್ವರ್ ಭಟ್ ಅವರಿಗೆ ವಿಶ್ವಾಸಪೂರ್ವಕ ಶುಭಾಶಯ.

ಇದನ್ನೂ ಓದಿ: ಡ್ರೋಣ್ ಮೂಲಕ ಶಸ್ತ್ರಾಸ್ತ್ರ ಸಾಗಣೆ...

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ