Thursday, 19th September 2024

ವಿವಾದಾತ್ಮಕ ಹೇಳಿಕೆ ನೀಡಿದ್ದ ಜಾಕ್ ಮಾ ನಾಪತ್ತೆ

ಬೀಜಿಂಗ್: ಚೀನಾದ ಕೋಟ್ಯಧಿಪತಿ ಉದ್ಯಮಿ ಜಾಕ್ ಮಾ ಎರಡು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಆಫ್ರಿಕಾದ ಬಿಸಿನೆಸ್ ಹೀರೋಸ್ ಎಂಬ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗುತ್ತಿದ್ದ ಜಾಕ್ ಅವರು ಈ ಬಾರಿ ಗೈರಾಗಿದ್ದಾರೆ. ಆಫ್ರಿಕಾದ ಉದ್ಯಮಿಗಳನ್ನು ಪ್ರೋತ್ಸಾಹಿಸಿ 1.5 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತ ನೀಡುವ ಶೋ ಇದಾಗಿದೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಜಾಕ್ ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಬಾರಿ ಜಾಕ್ ಬದಲಿಗೆ ಬೇರೊಬ್ಬ ಅಧಿಕಾರಿಯನ್ನು ಆಲಿಬಾಬಾ ಸಂಸ್ಥೆ ಕಳಿಸಿತ್ತು.

ಅಕ್ಟೋಬರ್ 24ರಂದು ಚೀನಾ ಸರ್ಕಾರದ ನೀತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಾಕ್ ಅವರಿಗೆ ಕಿರುಕುಳ ಹೆಚ್ಚಾಗಿತ್ತು. ಅಕ್ಟೋಬರ್ 10ರಂದು ಕೊನೆಯ ಬಾರಿಗೆ ಟ್ವೀಟ್ ಮಾಡಿರುವ ಜಾಕ್ ಅವರು ಕೊಡುಗೈ ದಾನಿಯಾಗಿ ಕೂಡಾ ಗುರುತಿಸಿಕೊಂಡಿ ದ್ದಾರೆ.

ಕೊವಿಡ್ 19 ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಮಾಸ್ಕ್ ವಿತರಣೆಗಾಗಿ ಯುರೋಪ್, ಯುಎಸ್ ಗಳಲ್ಲಿ ನೆರವು ನೀಡಿದ್ದರು.

Leave a Reply

Your email address will not be published. Required fields are marked *