ಕಸ ವಿಲೇವಾರಿಗೆ ಗ್ಯಾಸಿಫಿಕೇಶನ್
ಕಸ ವಿಲೇವಾರಿಗೆ ಗ್ಯಾಸಿಫಿಕೇಶನ್
Vishwavani News
January 4, 2022
ಟೆಕ್ ಫ್ಯೂಚರ್
ವಸಂತ ಗ ಭಟ್
ಎಲ್ಲಾ ನಗರಗಳಲ್ಲಿ ತ್ಯಾಜ್ಯ ವಿಲೇವಾರಿಯು ಒಂದು ದೊಡ್ಡ ಸಮಸ್ಯೆ. ತ್ಯಾಜ್ಯವನ್ನು ನಾಶಪಡಿಸಲು ಗ್ಯಾಸಿಫಿಕೇಶನ್ ಎಂಬ ವಿಧಾನ ಭವಿಷ್ಯದಲ್ಲಿ ಎಲ್ಲೆಡೆ ಜಾರಿಗೆ ಬರಬೇಕಾದು ಅನಿವಾರ್ಯ.
ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ಎರಡು ಬಿಲಿಯನ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದು ೨೦೫೦ ರಲ್ಲಿ ಸುಮಾರು ೭೦ ಪ್ರತಿಶತ ಹೆಚ್ಚಾಗಲಿದೆ. ಬೆಂಗಳೂರಿನಿಂದ ಶ್ರೀಗರದವರೆಗೂ ಒಂದರಿಂದ ಹಿಂದೆ ಒಂದು ಲಾರಿಯ ತುಂಬಾ ತ್ಯಾಜ್ಯವನ್ನು ತುಂಬಿಸಿದರೆ ಎಷ್ಟು ತ್ಯಾಜ್ಯವಾಗುತ್ತದೋ ಅಷ್ಟು ತ್ಯಾಜ್ಯ ಪ್ರತಿದಿನ ಜಗತ್ತಿನಲ್ಲಿ ಉತ್ಪತ್ತಿಯಾಗಲಿದೆ.
ಒಂದು ಟನ್ ತ್ಯಾಜ್ಯವನ್ನು ಭೂಮಿಗೆ ಹಾಕಿದಾಗ ಸುಮಾರು ೬ ಟನ್ ಮಿಥನಾಲ್ ವಾತಾವರಣವನ್ನು ಸೇರು ತ್ತದೆ. ಮಿಥನಾಲ್, ಇಂಗಾಲಕ್ಕಿಂತ ೮೬ ಪ್ರತಿಶತ ಹೆಚ್ಚು ವಾತಾವರಣಕ್ಕೆ ಹಾನಿ ಮಾಡುತ್ತದೆ. ಇಂದು ಜಗತ್ತಿನ ಹೆಚ್ಚಿನ ನಗರಗಳಲ್ಲಿ ತ್ಯಾಜ್ಯಗಳನ್ನು ಭೂಮಿಯ ಮೇಲೆ ಒಂದೆಡೆ ಶೇಖರಿಸಿಡ ಲಾಗುತ್ತಿದೆ, ಮರುಬಳಕೆಯಾಗುವ ತ್ಯಾಜ್ಯ ಅತ್ಯಲ್ಪ. ಆದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ತ್ಯಾಜ್ಯ ನಿರ್ವಹಣೆ ಜಗತ್ತಿನ ಅತಿಮುಖ್ಯ ಸಮಸ್ಯೆಗಳಲ್ಲಿ ಒಂದಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಪರಿಹಾರ ಕಂಡು ಹಿಡಿಯಲು ಒಂದು ಹಳೆಯ ತಂತ್ರಜ್ಞಾನ ಹೊಸ ರೂಪವನ್ನು ಪಡೆದು ಬರುತ್ತಿದೆ. ಅದೇ ಗ್ಯಾಸಿಫಿಕೇಶನ್. ಜಗತ್ತಿನ ಶ್ರೀಮಂತರಾದ ಬಿಲ್ ಗೇಟ್ಸ, ಎಲಾನ್ ಮಸ್ಕ್, ರಿಚರ್ಡ್ ಬ್ರಾನ್ಸನ್‌ನಂತವರು ಸಹ ಈ ತಂತ್ರಜ್ಞಾನದಲ್ಲಿ ಬಂಡವಾಳ ಹೂಡಿಕೆ ಮಾಡಿ ದ್ದಾರೆ.
ಹಳೆಯ ತಾಂತ್ರಜ್ಞಾನ
ವಿವಿಧ ಸಂಸ್ಥೆಗಳು ಗ್ಯಾಸಿಫಿಕೇಶನ್ ಅನ್ನು ಬೇರೆ ಬೇರೆ ರೀತಿಯಲ್ಲಿ ಮಾಡಿದರೂ ತಂತ್ರಜ್ಞಾನದ ಮೂಲ ಸಾರ ಒಂದೇ. ತ್ಯಾಜ್ಯವನ್ನು ಸುಡದೆ ಆಮ್ಲಜನಕ ಮತ್ತು ಆವಿಯಿರುವ ಕೋಣೆಯೊಳಗೆ ಹಾಕಿ ತಾಜ್ಯದಿಂದ ಅನಿಲ ಗಳು ಹೊರಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಅನಿಲಗಳು ಹೈಡ್ರೋಜನ್, ಈತನಲ್, ಮಿತನಾಲ್ ಅನ್ನು ಹೊಂದಿರುತ್ತದೆ. ಇದನ್ನು ತಣಿಸಿ ಅನಿಲ ಅಥವಾ ದ್ರವರೂಪದಲ್ಲಿ ಶೇಖರಿಸಿಡಲಾಗುತ್ತದೆ. ಅವಶ್ಯಕತೆಯ ಆಧಾರದ ಮೇಲೆ ಇದನ್ನು ಬಳಸಿಕೊಳ್ಳಲಾಗುತ್ತದೆ.
ಗ್ಯಾಸಿಫಿಕೇಶನ್ ವಿಧಾನದ ಮೂಲಕ ಒಂದಿಷ್ಟು ತ್ಯಾಜ್ಯವನ್ನು ಅನಿಲವಾಗಿ ಪರಿವರ್ತಿಸುವುದು ಸಾಧ್ಯವಿಲ್ಲ. ಅಂತಹ ತ್ಯಾಜ್ಯವನ್ನು ಕಲ್ಲುಗಳಾಗಿ ರೂಪಿಸಿ ಅದನ್ನು ಕಟ್ಟಡ ಮತ್ತು ರಸ್ತೆಯನ್ನು ನಿರ್ಮಾಣ ಮಾಡುವಲ್ಲಿ ಬಳಸಬಹುದಾಗಿದೆ. ಗ್ಯಾಸಿಫಿಕೇಶನ್ ಹೊಸ ತಂತ್ರಜ್ಞಾನವಲ್ಲ. ೧೮ ನೇ
ಶತಮಾನದ ಕಂಡು ಹಿಡಿದ ಈ ತಂತ್ರಜ್ಞಾನ ಜರ್ಮನಿ, ಅಮೆರಿಕ ಮೊದಲಾದ ದೇಶಗಳಲ್ಲಿ ಬಳಕೆಯಲ್ಲಿತ್ತು. ಆದರೆ ಗ್ಯಾಸಿಫಿಕೇಶನ್ ನಿಂದ ಉತ್ಪಾದನೆ ಯಾದ ವಿದ್ಯುತ್, ಪೆಟ್ರೋಲಿಯಂ ದುಬಾರಿಯಾದ ಕಾರಣ ಅದನ್ನು ವ್ಯವಹಾರಿಕವಾಗಿ ದೀರ್ಘಕಾಲ ನಡೆಸುವುದು ಸಾಧ್ಯವಾಗಲಿಲ್ಲ. ಹಾಗಾಗಿ ಕ್ರಮೇಣ ಎಲ್ಲ ಸಂಸ್ಥೆಗಳು ನಷ್ಟ ಅನುಭವಿಸಿ, ಈ ವ್ಯಾಪಾರವನ್ನು ಸ್ಥಗಿತಗೊಳಿಸಬೇಕಾಯಿತು.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸರಕಾರಗಳಿಗೆ ತ್ಯಾಜ್ಯ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ ಕಾರಣ ತ್ಯಾಜ್ಯವನ್ನು ವಾತಾವರಣಕ್ಕೆ ಯಾವುದೇ ಹಾನಿ ಮಾಡದೆ ಸಂಸ್ಕರಿಸುವ ಕಾರ್ಖಾನೆಗಳಿಗೆ ವಿಶೇಷ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಆ ಕಾರಣದಿಂದ ಅಮೆರಿಕ, ಯುರೋಪ್, ಕೆನಡದಲ್ಲಿ ಗ್ಯಾಸಿಫಿಕೇಶನ್‌ನಿಂದ ತ್ಯಾಜ್ಯ ವನ್ನು ಸಂಸ್ಕರಿಸುವ ಸಾಕಷ್ಟು ಸಂಸ್ಥೆಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ.
ಪ್ಲಾಸ್ಮಾ ತಂತ್ರಜ್ಞಾನ
ಮೊದಲನೆಯದಾಗಿ ಬಿಲ್ ಗೇಟ್ಸ ಹೂಡಿಕೆ ಮಾಡಿರುವ ಸಿಯೆರ ಎನರ್ಜಿ ಸಂಸ್ಥೆ ಅಮೆರಿಕದಲ್ಲಿ ತನ್ನ ಮೊದಲ ಸಂಸ್ಕರಣ ಕೇಂದ್ರವನ್ನು ಸ್ಥಾಪಿಸಿದ್ದು ದಿನಕ್ಕೆ ೫೦ ಟನ್ ನಷ್ಟು ತ್ಯಾಜ್ಯವನ್ನು ಸಂಸ್ಕರಿಸುವ ಶಕ್ತಿಯನ್ನು ಹೊಂದಿದೆ. ಇದು ಗ್ಯಾಸಿಫಿಕೇಶನ್ ನಲ್ಲಿ ಪುರಾತನ ಮಾದರಿಯ ಸಿಲೆಂಡರ್ ಆಕಾರದ ದೈತ್ಯ ಕನ್ ಟೇನರ್ ಬಳಸುತ್ತಿದ್ದು ಆಮ್ಲಜನಕ ಮತ್ತು ಆವಿಯ ಮೂಲಕ ತ್ಯಾಜ್ಯದಿಂದ ಅನಿಲಗಳನ್ನು ಬೇರ್ಪಡಿಸಲಿದೆ. ಪ್ಲಾಸ್ಕೋ ಕನ್ವರ್ಶನ್ ಟೆಕ್ನಾಲಜೀಸ್ ಎನ್ನುವ ೨೦೦೫ ರಲ್ಲಿ ಆರಂಭವಾದ ಇನ್ನೊಂದು ಸಂಸ್ಥೆ ಕೂಡ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದು ದಿನಕ್ಕೆ ೧೩೦ ಟನ್ ನಷ್ಟು ತ್ಯಾಜ್ಯವನ್ನು ಸಂಸ್ಕರಿಸುವ ಶಕ್ತಿಯನ್ನು ಹೊಂದಿದ್ದು, ಗ್ಯಾಸಿಫಿಕೇಶನ್‌ಗಾಗಿ ಇದು ಪ್ಲಾಸ್ಮಾ ತಂತ್ರಜ್ಞಾನವನ್ನು ಬಳಸುತ್ತದೆ.
ಇಲ್ಲಿಯವರೆಗೂ ಸುಮಾರು ೪೦೭ ಮಿಲಿಯನ್ ಡಾಲರ್‌ನಷ್ಟು ಹೂಡಿಕೆ ಪಡೆದಿರುವ ಸಂಸ್ಥೆ ಇನ್ನೂ ಪೂರ್ಣ ಯಶಸ್ಸು ಸಾಧಿಸಿಲ್ಲ. ೨೦೦೦ ದಲ್ಲಿ ಆರಂಭವಾದ ಎನರ್ಕನ್, ಕೆನಡ ಮೂಲದ ಗ್ಯಾಸಿಫಿಕೇಶನ್ ಸಂಸ್ಥೆ. ಇದು ಸಹ ಗ್ಯಾಸಿಫಿಕೇಶನ್‌ಗಾಗಿ ಸಿಯೆರ ಎನರ್ಜಿ ರೀತಿಯ ತಂತ್ರಜ್ಞಾನವನ್ನೇ ಬಳಸುತ್ತಿದ್ದು ಆಮ್ಲಜನಕ ಮತ್ತು ಆವಿಯ ಜೊತೆಗೆ ಇದು ಬಿಸಿ ಮರಳನ್ನು ಸಹ ಬಳಸುತ್ತಿದೆ. ದಿನಕ್ಕೆ ೩೦೦ ಟನ್ ತ್ಯಾಜ್ಯವನ್ನು ಸಂಸ್ಕರಿಸುವ ಶಕ್ತಿ ಹೊಂದಿರುವ ಒಂದು ಪ್ಲಾಂಟ್ ಅನ್ನು ಹೊಂದಿರುವ ಸಂಸ್ಥೆ ಸುಮಾರು ಅರ್ಧ ಮಿಲಿಯನ್ ಜನ ಬದುಕುವ ಒಂದು ಊರಿನ ಎಲ್ಲ ತ್ಯಾಜ್ಯವನ್ನು ಸಂಸ್ಕರಿಸಲು ಶಕ್ತಿವಾಗಿದೆ. ಒಟ್ಟಾರೆ ೬೧೬.೫ ಮಿಲಿಯನ್ ಹೂಡಿಕೆ ಪಡೆದಿರುವ ಸಂಸ್ಥೆ ಸದ್ಯದ ಅಮೆರಿಕ ಮತ್ತು ಯುರೋಪ್‌ನಲ್ಲಿ ತನ್ನ ಶಾಖೆಗಳನ್ನು ಆರಂಭಿಸಲು ಸಿದ್ಧಗೊಳ್ಳುತ್ತಿದೆ.
ಸರಕಾರದಿಂದ ಪ್ರೋತ್ಸಾಹ
ಗ್ಯಾಸಿಫಿಕೇಶನ್ ಮುನ್ನಲೆಗೆ ಬರಲು ಇನ್ನೊಂದು ಮುಖ್ಯ ಕಾರಣವಿದೆ. ಅದು ತ್ಯಾಜ್ಯವನ್ನು ಸರಕಾರದಿಂದ ಪಡೆಯುವ ಕಾರಣಕ್ಕೆ ಹೆಚ್ಚಿನ ಮುಂದು ವರೆದ ದೇಶಗಳು ಗ್ಯಾಸಿಫಿಕೇಶನ್ ಸಂಸ್ಥೆಗಳಿಗೆ ಒಂದು ಕೆಜಿ ಗೆ ಇಂತಿಷ್ಟು ಎಂದು ಹಣವನ್ನು ನೀಡುತ್ತವೆ, ಜತೆಗೆ ತ್ಯಾಜ್ಯವನ್ನು ಸಂಸ್ಕರಿಸುವ ಕಾರಣದಿಂದ ಸಹ ಸಂಸ್ಥೆ ಲಾಭವನ್ನುಗಳಿಸುತ್ತದೆ. ಕಚ್ಚಾ ವಸ್ತುಗಳಿಗೆ ಯಾವುದೇ ಹಣ ಪಾವತಿಸುವ ಅವಶ್ಯಕತೆ ಇಲ್ಲದ ಕಾರಣ ಗ್ಯಾಸಿಫಿಕೇಶನ್ ಹೆಚ್ಚಿನ ಸಂಸ್ಥೆಗಳಿಗೆ ಲಾಭದಾಯಕವಾಗಿದೆ.
ಭಾರತದಲ್ಲಿ ಇಂದಿಗೂ ತ್ಯಾಜ್ಯ ಸಂಸ್ಕರಣೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದ ಕಾರಣ ಗ್ಯಾಸಿಫಿಕೇಶನ್ ಅಷ್ಟು ಮುನ್ನಲೆ ಬಂದಿಲ್ಲ. ಭವಿಷ್ಯದಲ್ಲಿ ಇತರ ದೇಶಗಳ ರೀತಿಯಲ್ಲಿ ಭಾರತವು ಸಹ ಹೇರಳ ತ್ಯಾಜ್ಯದ ಸಮಸ್ಯೆಗೆ ಒಳಗಾಗುವುದರಲ್ಲಿ ಸಂಶಯವಿಲ್ಲ. ಆದ ಕಾರಣ ಸರಕಾರಗಳು ಆದಷ್ಟು ಬೇಗ ಈ ತರಹದ ಯೋಜನೆಗಳಿಗೆ ಉತ್ತೇಜನ ಕೊಡಬೇಕಾಗುವುದು ಅನಿವಾರ್ಯ.
ತ್ಯಾಜ್ಯ ಸುಡುವುದು
ತ್ಯಾಜ್ಯ ನಾಶಪಡಿಸಲು ಇಂದು ಹೆಚ್ಚಿನ ಮುಂದುವರಿದ ದೇಶಗಲ ಮಹಾನಗರಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ಸರಳ ಪರಿಹಾರ, ತ್ಯಾಜ್ಯವನ್ನು ಸುಟ್ಟು ವಿದ್ಯುತ್ ಉತ್ಪಾದಿಸು ವುದು. ಇದು ಕಲ್ಲಿದ್ದಲನ್ನು ಸುಟ್ಟು ವಿದ್ಯುತ್ ಉತ್ಪಾದಿಸುವ ಕಾರ್ಖಾನೆಯ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ನಗರದ ತ್ಯಾಜ್ಯವನ್ನು ಸುಟ್ಟು ಅದರಿಂದ ಉತ್ಪತ್ತಿಯಾದ ಶಾಖದ ಮೂಲಕ ನೀರು ಅಥವಾ ಇತರ ದ್ರಾವಣವನ್ನು ಕಾಯಿಸಿ ಅದರಿಂದ ಉತ್ಪತ್ತಿಯಾದ ಆವಿಯ ಮೂಲಕ ಟರ್ಬೈನ್ ಅನ್ನು ತಿರುಗಿಸುವ ಮೂಲಕ ವಿದ್ಯುತ್ ಅನ್ನು ಉತ್ಪಾದಿಸುವುದು. ಈ ವಿಧಾನದ ಮುಖ್ಯ ಸಮಸ್ಯೆಯೆಂದರೆ ತ್ಯಾಜ್ಯವನ್ನು ಸುಡು ವಾಗ ಸಾಕಷ್ಟು ಹಾನಿಕಾರಕ ಅನಿಲಗಳು ವಾತಾವರಣವನ್ನು ಸೇರುತ್ತವೆ ಮತ್ತು ಅದರಿಂದ ಮಾನವ ಮತ್ತು ಇತರ ಜೀವಿಗಳಿಗೆ ಸಾಕಷ್ಟು ಹಾನಿಯಾಗು ತ್ತದೆ.
ಅಷ್ಟೇ ಅಲ್ಲದೆ ನಗರದ ತ್ಯಾಜ್ಯಗಳು ವಿವಿಧ ರೀತಿಯ ವಸ್ತುಗಳನ್ನು ಹೊಂದಿರುವುದರಿಂದ ಪ್ರತಿದಿನ ಇಂತಿಷ್ಟೆ ಎಂದು ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಜಗತ್ತಿನ ಹಲವು ಸಂಸ್ಥೆಗಳು ಗ್ಯಾಸಿಫಿಕೇಶನ್ ತಂತ್ರಜ್ಞಾನವನ್ನು ಬಳಸುತ್ತಿವೆ.