Gas Cylinder @500 rupee: ಯಾವುದೇ ದಾಖಲಾತಿ ನೀಡದೆ ಕೇವಲ 500 ರೂಪಾಯಿ ನೀಡಿ ಪಡೆಯಿರಿ ಗ್ಯಾಸ್ ಸಿಲಿಂಡರ್
ಭಾರತ್ ಪೆಟ್ರೋಲಿಯಂ ಕಂಪನಿ ತೈಲ ಮಾರಾಟದ ಜತೆಗೆ ಎಲ್ಪಿಜಿ ಗ್ಯಾಸ್ ವಿತರಣೆ ಯಲ್ಲಿ ಕೂಡ ಗ್ರಾಹಕರ ಮನಸೂರೆಗೊಂಡಿರುವ ಕಂಪನಿಯಾಗಿದೆ.ಈವರೆಗೆ ೧೪ ೧೮ ಕೆ.ಜಿ ಸಿಲಿಂಡರ್ ಮಾತ್ರ ನೀಡುತ್ತಿದ್ದ ಕಂಪನಿ ಬದಲಾದ ಕಾಲಕ್ಕೆ ತಕ್ಕಂತೆ ೫ .ಕೆ.ಜಿ.ಸಿಲಿಂಡರ್ ಅನ್ನು ಮಾರು ಕಟ್ಟೆಗೆ ಪರಿಚಯಿಸಿದೆ
Source : Chikkaballapur Reporter
ಚಿಕ್ಕಬಳ್ಳಾಪುರ: ಭಾರತ್ ಪೆಟ್ರೋಲಿಯಂ ಕಂಪನಿ 5 ಕೆ.ಜಿಯ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಯಾವುದೇ ದಾಖಲಾತಿ ನೀಡದೆ ಕೇವಲ ೫೦೦ ರೂಪಾಯಿ ನೀಡಿ ಗ್ಯಾಸ್ ಸಿಲಿಂಡರ್ ಪಡೆಯಬಹುದು ಎಂದು ಭಾರತ್ ಪೆಟ್ರೋಲಿ ಯಂ ಕಂಪನಿಯ ಟೆರಿಟರಿ ಮೇನೇಜರ್ ಜಾವಿದ್ ದೇಸಾಯಿ ತಿಳಿಸಿದರು.
ನಗರದ ಗರ್ಲ್ಸ್ ಸ್ಕೂಲ್ ರಸ್ತೆಯಲ್ಲಿರುವ ವಿನಾಯಕ ಪ್ರಾವಿಷನ್ ಸ್ಟೋರ್ನಲ್ಲಿ ಶುಕ್ರವಾರ ೫ ಕೆ.ಜಿ.ಗ್ಯಾಸ್ ಸಿಲಿಂಡರ್ ಮಾರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ್ ಪೆಟ್ರೋಲಿಯಂ ಕಂಪನಿ ತೈಲ ಮಾರಾಟದ ಜತೆಗೆ ಎಲ್ಪಿಜಿ ಗ್ಯಾಸ್ ವಿತರಣೆ ಯಲ್ಲಿ ಕೂಡ ಗ್ರಾಹಕರ ಮನಸೂರೆಗೊಂಡಿರುವ ಕಂಪನಿಯಾಗಿದೆ.ಈವರೆಗೆ ೧೪ ೧೮ ಕೆ.ಜಿ ಸಿಲಿಂಡರ್ ಮಾತ್ರ ನೀಡುತ್ತಿದ್ದ ಕಂಪನಿ ಬದಲಾದ ಕಾಲಕ್ಕೆ ತಕ್ಕಂತೆ ೫ .ಕೆ.ಜಿ.ಸಿಲಿಂಡರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನಗರದ ಜನತೆ ಇದರ ಸದುಪಯೋಗ ಪಡಿಸಿ ಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕೆಂದು ಮನವಿ ಮಾಡಿದರು.
ಮಾರಾಟ ವ್ಯವಸ್ಥಾಪಕ ಅನಿಕೇತ್ ಬಾಬು ಮಾತನಾಡಿ ಭಾರತ್ ಪೆಟ್ರೋಲಿಯಂ ಕಂಪನಿ ಯ ೫ ಕೆ.ಜಿ ಸಿಲಿಂಡರ್ ನಿಮ್ಮ ಹತ್ತಿರದ ಪ್ರಾವಿಷನ್ ಸ್ಟೋರ್ಗಳಲ್ಲಿ ಕೂಡ ಇನ್ನುಮುಂದೆ ಮಾರಾಟಕ್ಕೆ ಲಭ್ಯವಾಗಲಿದೆ.ಚಿಕ್ಕಬಳ್ಳಾಪುರ ನಗರದಲ್ಲಿ ಮಹೇಶ್ವರಿ ಗ್ಯಾಸ್ ಏಜೆನ್ಸಿಯಲ್ಲಿ ಕೂಡ ಲಭ್ಯವಿರಲಿದೆ.ಬೇಕೆಂದಾಗ ಬಂದು ೫೦೦ ರೂಪಾಯಿ ನೀಡಿ ಸಿಲಿಂಡರ್ ಪಡೆದು ಕೊಳ್ಳಬಹುದು ಎಂದರು. ಈವೇ ಳೆ ಮಾಜಿ ಶಾಸಕ ಎಂ.ಶಿವಾನಂದ್, ರವಿ ಇತರರು ಇದ್ದರು.
ಇದನ್ನೂ ಓದಿ: Chikkabalapur Crime: ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ