Koppal Breaking: ನನಗೆ ಪ್ರಶಸ್ತಿ ನೀಡುವಂತೆ, ಬೇರೊಂದು ಮಠದ ಜೊತೆಗೆ ಹೋಲಿಕೆ ಮಾಡಿ ಜಾಲತಾಣದಲ್ಲಿ ಪೋಸ್ಟ್ ಹಾಕಬೇಡಿ: ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಮನವಿ
ರೈಲ್ವೇ ನಿಲ್ದಾಣ ಸೇರಿ ಯಾವುದೇ ಸಂಸ್ಥೆಗೆ ಗವಿಸಿದ್ದೇಶ್ವರನ ಹೆಸರು ಇಡುವಂತೆ ಅಭಿಯಾ ನ ಮಾಡುವುದು. ಮತ್ತೊಂದು ಸಂಘ ಬೇಡ ಎನ್ನುವುದು. ಇವೆಲ್ಲ ನನಗೆ ಬೇಡ. ಗವಿಸಿದ್ದೇಶ್ವರ ನಿಮ್ಮ ಉಸಿರಿನಲ್ಲಿ ಇರುವಾಗ ಹೆಸರು ಏಕೆ ಎಂದು ಶ್ರೀಮಠದ ಭಕ್ತರನ್ನು ಗವಿಶ್ರೀ ಪ್ರಶ್ನಿಸುವಾಗ ಕಂಠ ತುಂಬಿ ಗದ್ಗದಿತರಾಗಿದ್ದರು
Source : Koppal Reporter
ಕೊಪ್ಪಳ: ಯಾವುದೇ ಸಂಸ್ಥೆಗೆ ಹೆಸರಿಡುವಂತೆ, ನನಗೆ ಪ್ರಶಸ್ತಿ ನೀಡುವಂತೆ ಹಾಗೂ ಬೇರೊಂದು ಮಠದ ಜೊತೆಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಬೇಡಿ ಎಂದು ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿದರು.
ನಗರದ ಗವಿಮಠದ ಕೈಲಾಸ ಮಂಟಪದ ವೇದಿಕೆಯಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಅನಿರೀಕ್ಷಿತವಾಗಿ ಮಾತನಾಡಿದರು.
ರೈಲ್ವೇ ನಿಲ್ದಾಣ ಸೇರಿ ಯಾವುದೇ ಸಂಸ್ಥೆಗೆ ಗವಿಸಿದ್ದೇಶ್ವರನ ಹೆಸರು ಇಡುವಂತೆ ಅಭಿಯಾ ನ ಮಾಡುವುದು. ಮತ್ತೊಂದು ಸಂಘ ಬೇಡ ಎನ್ನುವುದು. ಇವೆಲ್ಲ ನನಗೆ ಬೇಡ. ಗವಿಸಿದ್ದೇ ಶ್ವರ ನಿಮ್ಮ ಉಸಿರಿನಲ್ಲಿ ಇರುವಾಗ ಹೆಸರು ಏಕೆ ಎಂದು ಶ್ರೀಮಠದ ಭಕ್ತರನ್ನು ಗವಿಶ್ರೀ ಪ್ರಶ್ನಿಸುವಾಗ ಕಂಠ ತುಂಬಿ ಗದ್ಗದಿತರಾಗಿದ್ದರು.
ನಾನು ಇಡೀ ನಾಡಿನ ಶರಣರ ಪಾದದ ಧೂಳಾಗಿ ಬದುಕಬೇಕು ಎಂದುಕೊಂಡವನು. ಅದಕ್ಕಾಗಿ ಗವಿಮಠವನ್ನು ಇನ್ನೊಂದು ಮಠದ ಜೊತೆಗೆ, ಶ್ರೀಮಠದ ಸ್ವಾಮೀಜಿಯನ್ನು ಮತ್ತೊಂದು ಮಠದ ಶ್ರೀಗಳ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ ಇದನ್ನು ಯಾವುದೇ ಭಕ್ತರು ಮಾಡಬಾರದು ಎಂದು ಭಾವುಕರಾಗಿ ತಾಕೀತು ಮಾಡಿದರು.
ಬರುವ ಪ್ರಶಸ್ತಿ ತಿರಸ್ಕರಿಸುವ ಅರ್ಹತೆ ನನಗೆ ಇಲ್ಲ. ಬೇಡ ಎನ್ನುವ ವಿನಂಭ್ರತೆ ಮಾತ್ರ ಇದೆ. ಅದಕ್ಕಾಗಿ ನನಗೆ ಆ ಪ್ರಶಸ್ತಿ, ಈ ಪ್ರಶಸ್ತಿ ನೀಡಬೇಕು ಎಂದು ಸಮಾಜಿಕ ಜಾಲ ತಾಣದಲ್ಲಿ ಅಭಿಯಾನವನ್ನು ಯಾರೂ ಮಾಡಬಾರದು. ಇನ್ನು ನನ್ನನ್ನು ಯಾವುದೇ ಜಾತಿ- ಧರ್ಮ ದ ಗೋಜಿಗೆ ಎಳೆದು ತರಬೇಡಿ. ಎಲ್ಲರನ್ನೂ ಪ್ರೀತಿಸುವುದು ಮತ್ತು ಎಲ್ಲರಿಗೂ ಸೇವೆ ಮಾಡುವುದೇ ನನ್ನ ಧರ್ಮದ ಪರಿಭಾಷೆ. ಅದಕ್ಕಾಗಿ ಜಾತಿ- ಧರ್ಮದ ವಿಚಾರದಲ್ಲಿ ನನ್ನನ್ನು ಎಳೆದು ತರಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದರು.
*
ಶ್ರೀಮಠ, ಮಠದ ಯಾವುದೇ ಸಂಸ್ಥೆಯಲ್ಲಿ ನನ್ನ ಫೋಟೊ ಇಲ್ಲ. ಬದಲಾಗಿ ಮಠದಲ್ಲಿ ಶಿವಶಾಂತವೀರ ಸ್ವಾಮೀಜಿಗಳ ಫೋಟೊ ಇದೆ. ಮನೆಯಲ್ಲಿ ಮಾಲೀಕರ ಫೋಟೊ ಇರು ವಂತೆ ಅವರ ಫೋಟೊ ಇದೆ. ನಾನು ಕೇವಲ ಮನೆಯ ಆಳು ಮಗನಂತೆ. ಇರುವಷ್ಟು ದಿನ ಸೇವೆ ಮಾಡಿಕೊಂಡು ಇರುತ್ತೇನೆ.
- ಗವಿಸಿದ್ದೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ
ಇದನ್ನೂ ಓದಿ: Koppal News: ತುಂಗಭದ್ರಾ ನದಿಯಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ಇಸ್ರೇಲ್ ಪ್ರವಾಸಿಗ