ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Global Achievers Award Function at Georgia: ಜಾರ್ಜಿಯಾದ ಟಿಬಿಲಿಸಿಯಲ್ಲಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಸಮಾರಂಭ ಇಂದು

ಕನ್ನಡ ಪತ್ರಿಕೋದ್ಯಮದಲ್ಲಿ ಮೊದಲ ಬಾರಿಗೆ ವಿಶ್ವವಾಣಿಯ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಈ ಬಾರಿ ಜಾರ್ಜಿಯಾದಲ್ಲಿ ಆಯೋಜಿಸಲಾಗಿದ್ದು, ಸೋಮವಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯ ಲಿದೆ. ವಿಶ್ವವಾಣಿ ಗ್ಲೋಬಲ್ ಫಾರಂ ಜಾರ್ಜಿಯಾದ ರಾಜಧಾನಿ ಟಿಬಿಲಿಸಿಯ ಪುಲ್‌ಮ್ಯಾನ್ ಟಿಬಿಲಿಸಿ ಆಕ್ಸಿಸ್ ಟವರ್‌ನಲ್ಲಿ ಕರ್ನಾಟಕದ ಅಪರೂಪದ ಸಾಧಕರಿಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿಸಲಾಗುತ್ತಿದೆ

ಜಾರ್ಜಿಯಾದ ಟಿಬಿಲಿಸಿಯಲ್ಲಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಸಮಾರಂಭ ಇಂದು

Profile Ashok Nayak May 19, 2025 1:11 PM

ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಮೊದಲ ಬಾರಿಗೆ ವಿಶ್ವವಾಣಿಯ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಈ ಬಾರಿ ಜಾರ್ಜಿಯಾದಲ್ಲಿ ಆಯೋಜಿಸಲಾಗಿದ್ದು, ಸೋಮವಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ವಿಶ್ವವಾಣಿ ಗ್ಲೋಬಲ್ ಫಾರಂ ಜಾರ್ಜಿಯಾದ ರಾಜಧಾನಿ ಟಿಬಿಲಿಸಿಯ ಪುಲ್‌ಮ್ಯಾನ್ ಟಿಬಿಲಿಸಿ ಆಕ್ಸಿಸ್ ಟವರ್‌ನಲ್ಲಿ ಕರ್ನಾಟಕದ ಅಪರೂಪದ ಸಾಧಕರಿಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಬೈಲಹೊಂಗಲ ಮುಕುಟ ಮೂರು ಸಾವಿರಮಠದ ಶ್ರೀ ನೀಲಕಂಠ ಮಹಾ ಸ್ವಾಮೀಜಿ, ಜಾರ್ಜಿಯಾ ಸಂಸದ ಇರಾಕ್ಲಿ ಮೆಜುರ್ನಿಶ್ವಿಲಿ, ಜಾರ್ಜಿಯಾದ ನಟ ನಿಕೊಲೊಜ್ ತ್ಸುಲುಕಿಡ್ಜಿ, ಸಿಡಿಪಿಎಫ್ ಸಂಘಟನೆ ಸ್ಥಾಪಕ ಅಧ್ಯಕ್ಷ ದರ್ಪಣ್ ಪ್ರಶೇರ್, ಜಾರ್ಜಿಯಾದ ಲೇಖಕ ಜಿಯೋರ್ಜಿ‌ ಕೆಕೆಲಿಡ್ಜಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Vishweshwar Bhat Column: ಜಗತ್ತಿನ ಮುಂದೆ ವಿಚಿತ್ರ ಮನವಿ ಇಟ್ಟಿದ್ದ ಜಪಾನ್‌ ಪ್ರಧಾನಿ !

ಕಾರ್ಯಕ್ರಮದಲ್ಲಿ ಒಟ್ಟು 14 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಅಪರೂಪದ ಸಾಧಕರನ್ನು ಗುರುತಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವುದು, ಎರಡೂ ದೇಶಗಳ ಮೈತ್ರಿ, ಪರಸ್ಪರ ಸಾಂಸ್ಕೃತಿಕ ವಿನಿಮಯ ಹಾಗೂ ಸಂಸ್ಕೃತಿ ಪರಿಚಯ ಈ ಕಾರ್ಯಕ್ರಮದ ಆಶಯ.

ಕಳೆದ ವರ್ಷದಿಂದ ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷ್ಯಾ, ಮಾರಿಷಸ್, ಮಾಲ್ಡೀವ್ಸ್, ಜಪಾನ್, ಒಮಾನ್ ರಷ್ಯಾ ದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸಲಾಗಿದೆ. ಇಂಥ ವಿಶಿಷ್ಟ ಸಾಂಸ್ಕೃತಿಕ ಸಮ್ಮಿಲನ ಈ ಬಾರಿ ಜಾರ್ಜಿಯಾದ ಟಿಬಿಲಿಸಿಯಲ್ಲಿ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರು

ಮಂಜುನಾಥ್ ಮಕ್ಕಳಗೇರಿ, ಮಮತಾ, ರೇಖಾ ಭಟ್, ಬಿ.ಸಿ.ಜಯಪ್ರಸಾದ್, ಹನುಮೇಗೌಡ ಬಿ.ಆರ್., ಆತ್ಮ ಹಿರೇಮಠ್, ಸುಕುಮಾರ್ ಶೆಟ್ಟಿ, ಭಾವನಾ ಬೆಳೆಗೆರೆ, ಡಾ.ಗಂಗಾಧರ ಸಜ್ಜನ್, ಮಧುಕೇಶ್ವರ ಜನಕ ಹೆಗಡೆ, ಹನುಮಂತ ರಾವ್, ಯಜ್ಞಾನಾರಾಯಣ ಕಮ್ಮಾಜೆ, ಅನಿತಾ ರಾಘವೇಂದ್ರ ಹೆಗಡೆ ಹಾಗೂ ಪ್ರವೀಣ್ ಶೆಟ್ಟಿ