MP Dr K Sudhakar: ತಾಲ್ಲೂಕಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಸಂಸದ ಡಾ. ಕೆ.ಸುಧಾಕರ್‌ಗೆ ಕೃಷ್ಣ ಮನವಿ

ಕೇಂದ್ರ ಸರ್ಕಾರದ “ದಿಲ್ಲಿಯಿಂದ-ಹಳ್ಳಿಗೆ” ಯೋಜನೆಯಡಿಯಲ್ಲಿ ಚೇಳೂರು ತಾಲ್ಲೂಕು ಚಾಕವೇಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ “ಗುಮ್ಮನಾಯಕನ

Profile Ashok Nayak December 3, 2024
ಬಾಗೇಪಲ್ಲಿ : ಬೃಹತ್ ಶಿಲಾಯುಗದ ಜಡಮಡುಗು ಅಕ್ಕಮ್ಮಬೆಟ್ಟ ಹಾಗೂ ಅವಿಭಜಿತ ಕೋಲಾರ ಜಿಲ್ಲೆಯ “ಹಾಳುಹಂಪೆ” ಎಂದೇ ಹೆಸರಾ ಗಿರುವ ಬಾಗೇಪಲ್ಲಿ ತಾಲ್ಲೂಕಿನ ಗುಮ್ಮನಾಯಕನ ಪಾಳ್ಯವನ್ನು ಅಭಿವೃದ್ಧಿಪಡಿಸಿ, ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಲೋಕಸಭಾ ಸದಸ್ಯ ಡಾ|| ಕೆ.ಸುಧಾಕರ್ ರವರಲ್ಲಿ ಹಿರಿಯ ಪತ್ರಕರ್ತ, ಲೇಖಕ ಹಾಗೂ ಸಂಶೋಧಕ ಬಿ.ಆರ್.ಕೃಷ್ಣ ಮನವಿಸಿದರು. ಅವರು ಕೇಂದ್ರ ಸರ್ಕಾರದ “ದಿಲ್ಲಿಯಿಂದ-ಹಳ್ಳಿಗೆ” ಯೋಜನೆಯಡಿಯಲ್ಲಿ ಚೇಳೂರು ತಾಲ್ಲೂಕು ಚಾಕವೇಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ “ಗುಮ್ಮನಾಯಕನ ಪಾಳ್ಯದ ಪಾಳೇಗಾರರು”, “ಬಾಗೇಪಲ್ಲಿ ತಾಲ್ಲೂಕಿನ ಪ್ರಾಗೈತಿಹಾಸಿಕ ನೆಲೆಗಳು” ಹಾಗೂ “ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ಸಂಸ್ಕೃತಿ ಲೇಪಾಕ್ಷಿ” ಕೃತಿಗಳನ್ನು ಲೋಕಸಭಾ ಸದಸ್ಯರಿಗೆ ನೀಡಿ, ಗಮನ ಸೆಳೆದರು. ಆನಂತರ ಸಂಸದರಿಗೆ ಮಾಹಿತಿ ನೀಡುತ್ತಾ, ಈ ಭಾಗಕ್ಕೆ ೫೦೦೦  ವರ್ಷಗಳ ಇತಿಹಾಸವಿದೆ, ಇಲ್ಲಿ ಆದಿಮಾನವ ನಡೆದಾಡಿರುವ ಕುರುಹುಗಳು ಕಂಡುಬರುತ್ತವೆ, ಬೃಹತ್ ಶಿಲಾಯುಗದ ನೆಲೆಯಾದ ಜಡಮಡುಗು ಅಕ್ಕಮ್ಮಬೆಟ್ಟ, ಸೂಕ್ಷ್ಮ ಶಿಲಾಯುಗದ ನೆಲೆಯಾದ ಜಡಮಡುಗು ನದಿ, ಮಸಾಲ ಮಡುಗು, ನವಿಲುಗುಟ್ಟ ಇತ್ಯಾದಿ ಸ್ಥಳಗಳನ್ನು ಉಲ್ಲೇಖ ಮಾಡಿ, ಇವುಗಳನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಅಭಿವೃದ್ಧಿ ಪಡಿಸಬೇಕು ಎಂದು ಗಮನ ಸೆಳೆದರು. ಜಡಮಡುಗು ಅಕ್ಕಮ್ಮ ಬೆಟ್ಟದ ಬೃಹತ್ ಶಿಲಾಯುಗದ ಅನೇಕ ಕುರುಹುಗಳು ಕಂಡುಬ0ದಿದ್ದು, ಇಡೀ ದಕ್ಷಿಣ ಭಾರತದಲ್ಲೇ ಎಲ್ಲಿಯೂ ಕಂಡುಬರದAತಹ ಅಪರೂಪವಾದ ಕಲ್ಗೋರಿಗಳನ್ನು ಹೊಂದಿದೆ. ಅದೇ ರೀತಿಯಲ್ಲಿ ಬಂಡೆ ವರ್ಣಚಿತ್ರಗಳು, ಕುಟ್ಟುಚಿತ್ರಗಳು, ಆರಾಧನೆಗೆ ಒಳಪಟ್ಟಿರುವ ಆದಿಮಾನವನ ಶಿಲಾಯುಧಗಳು ದೊರೆತಿರುವುದು ಪುಷ್ಠಿ ನೀಡಿವೆ. ಈ ಸ್ಥಳ ಇತಿಹಾಸ ಪೂರ್ವಕಾಲಕ್ಕೆ ಸೇರಿದ್ದು ಬೆಟ್ಟಕ್ಕೆ ಉತ್ತಮವಾದ ರಸ್ತೆ, ಕುಡಿಯುವ ನೀರು, ಇತ್ಯಾದಿಗಳನ್ನು ಅನುಷ್ಠಾನ ಮಾಡಬೇಕು ಅದರಂತೆ ಇತಿಹಾಸ ಕಾಲಕ್ಕೆ ಸಂಬAಧಿಸಿವೆ ಎಂಬುದನ್ನು ಸಂಸದರಿಗೆ ಮನವರಿಕೆ ಮಾಡಿಕೊಟ್ಟರು. ಗುಮ್ಮನಾಯಕನ ಪಾಳ್ಯವು ಮಹತ್ತರ ಸ್ಥಾನವನ್ನು ಹೊಂದಿದ್ದು, ಗುಮ್ಮನಾಯಕನಪಾಳ್ಯದ ಪಾಳೇಗಾರರು ಈ ಭಾಗದಲ್ಲಿ ಅನೇಕ ಕೆರೆ ಕುಂಟೆ ಕಾಲುವೆಗಳನ್ನು ನಿರ್ಮಿಸಿ ನೀರಾವರಿ ವ್ಯವಸ್ಥೆಗೆ  ನೀಡಿರುವ ಕೊಡುಗೆ ಅಪಾರವಾಗಿದೆ, ತೆರಿಗೆ ಪದ್ಧತಿ, ನ್ಯಾಯಾಡಳಿತ ಪದ್ಧತಿ, ಇತ್ಯಾದಿಗಳನ್ನು ಯಾವುದೇ ಸಾಮ್ರಾಟ್‌ರಿಗೂ ಕಡಿಮೆಯಾಗದ ರೀತಿಯಲ್ಲಿ ಅಳವಡಿಸಿಕೊಂಡು ಆಡಳಿತ ನಡೆಸಿರುವ ಹಗ್ಗಳಿಕೆಯಿದೆ, ಅದರಂತೆ ಈ ಪಾಳೇ ಗಾರರು ಕಲಾ ಜಗತ್ತಿಗೆ ನೀಡಿರುವ ಕೊಡುಗೆ ಅಪಾರ.ಪಾಳ್ಯದ ವ್ಯಾಪ್ತಿಯಲ್ಲಿ ಅನೇಕ ಗುಡಿಗೋಪುರಗಳನ್ನು, ವಿದ್ಯಾಕ್ಷೇತ್ರಗಳನ್ನು, ವೈದ್ಯಶಾಲೆ, ಕಲಾಶಾಲೆ ಇತ್ಯಾದಿಗಳನ್ನು ನೀಡಿದ್ದಾರೆ. ಒಟ್ಟಾರೆ ಈ ಭಾಗಕ್ಕೆ ಪಾಳೇಗಾರರು ನೀಡಿರುವ ಕೊಡುಗೆ ಸ್ಮರಣೀಯವಾಗಿದೆ. ಈ ಭಾಗದ ಎಲ್ಲಾ ಇತಿಹಾಸವನ್ನು ಈ ಕೃತಿಗಳು ಒಳಗೊಂಡಿದ್ದು, ದಯವಿಟ್ಟು ಓದಬೇಕೆಂದು ಮನವಿ ಮಾಡಿದರು.ಈ ಹಿಂದೆ ದಿವಂಗತ ಜಿ.ವಿ.ಶ್ರೀರಾಮರೆಡ್ಡಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ನನ್ನ ಮನವಿಗೆ ಸ್ಪಂಧಿಸಿ, ಪಾಳ್ಯಕ್ಕೆ ಸುಗಮವಾದ ರಸ್ತೆ ವ್ಯವಸ್ಥೆ, ಪ್ರಪ್ರಥಮವಾಗಿ ಬಸ್ ಸಂಪರ್ಕ, ಬಾಲವನ, ಅತಿಥಿಗೃಹ, ದೋಣಿ ವಿಹಾರ ಕೇಂದ್ರ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಿ, ಈ ಚಾರಿತ್ರಾ ತ್ಮಕ ಸ್ಥಳಕ್ಕೆ ಒಂದಷ್ಷು ಮೆರುಗು ನೀಡಿದ್ದರು. ಆನಂತರದ ದಿನಗಳಲ್ಲಿ ಜಿಲ್ಲಾಧಿಕಾರಿ ಅನಿರುದ್ಧಶ್ರವಣ್ ರವರು ಭೇಟಿ ನೀಡಿ, ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ಕೋಟೆಗೆ ಕಾಯಕಲ್ಪ, ಮತ್ತಿತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರು. ಮ್ಯೂಸಿಯಂ, ಕಲ್ಯಾಣಿಗಳಲ್ಲಿ ಹೂಳು ಎತ್ತುವುದು, ದೇವಾಲಯಗಳ ಜೀರ್ಣೋದ್ಧಾರ, ಕೋಟೆಯ ಬಳಿ ಕಾರಂಜಿ ಇತ್ಯಾದಿಗಳ ಅನುಷ್ಠಾನ ಮಾಡುವ ಯೋಜನೆ ರೂಪಿಸುತ್ತಿರುವ ಸಂದರ್ಭದಲ್ಲಿ ಅನಿರುದ್ಧಶ್ರವಣ್ ವರ್ಗಾವಣೆ ಆಗಿ, ಕೆಲಸಗಳು ನನೆಗುದಿಗೆ ಬಿದ್ದಿವೆ. ಆದ್ದರಿಂದ ತಾವು ಇತ್ತಾ ಗಮನಹರಿಸಿ ಈ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿ ಪಡಿಸಿದರೆ ಚಿತ್ರದುರ್ಗದಂತೆ ಒಂದು ಸುಂದರ ಪ್ರವಾಸಿ ತಾಣವಾಗುತ್ತದೆ ಜೊತೆಗೆ ಈ ಭಾಗದ ಒಂದಷ್ಷು ಜನತೆಗೆ ಬದುಕುವ ದಾರಿ ಸಿಗುತ್ತದೆ ಎಂದು ಮನವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಹರಿನಾಥರೆಡ್ಡಿ, ಕೋನಪರೆಡ್ಡಿ, ಗುಜ್ಜೇಪಲ್ಲಿ ಸುಧಾಕರ್‌ರೆಡ್ಡಿ, ಪ್ರೊ||ಕೆ.ಟಿ.ವೀರಾಂಜನೇಯ, ಜಿಂಕಪಲ್ಲಿ ಚಂದ್ರಶೇಖರರೆಡ್ಡಿ, ಪೆಟ್ರೋಲ್‌ಬಂಕ್ ಕೃಷ್ಣಾರೆಡ್ಡಿ ಮತ್ತಿತರೆ ಮುಖಂಡರು, ಪಂಚಾಯಿತಿ ವ್ಯಾಪ್ತಿಯ ಮುಖಂಡರು ನಾಗರೀಕರು ಹಾಜರಿದ್ದರು.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ