ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಿರುಕುಳ ತಾಳಲಾರದೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಆತ್ಮಹತ್ಯೆ ಯತ್ನ

ಕಿರುಕುಳ ತಾಳಲಾರದೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಆತ್ಮಹತ್ಯೆ ಯತ್ನ

Profile Vishwavani News Mar 15, 2021 10:56 AM
ಪಾವಗಡ: ಮೆಟ್ಟಿಲು ಹಾಕುವ ವಿಷಯದಲ್ಲಿ ಆರ್.ಓಬಯ್ಯ, ರಾಜಣ್ಣ, ಮಂಜುಳಾ ಎಂಬುವರ ಕಿರುಕುಳ ಸಹಿಸದೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮನನೊಂದು ವಿಷ ಸೇವಿಸಿದ ಘಟನೆ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಸಂಭವಿಸಿದೆ. ಇದೇ ವೇಳೆ ಮಾಜಿ ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ ಅವರ ಪತಿ ಹೇಳುವ ಪ್ರಕಾರ ಮನೆಯ ಪಕ್ಕದಲ್ಲಿ ಮೆಟ್ಟಿಲು ಹಾಕುವ ವಿಷಯಕ್ಕೆ ಆರ್.ಜಿ.ಓಬಯ್ಯ, ರಾಜಣ್ಣ, ಮಂಜುಳಾ ಎಂಬುವರು ಬಹಳಷ್ಟು ತೊಂದರೆ ನೀಡುತ್ತಿದ್ದರು. ಇದೇ ವಿಷಯಕ್ಕೆ ಮಧ್ಯಾಹ್ನ ಮನೆ ಯೊಳಗೆ ಹೋಗಿ ವಿಷ ಸೇವೆಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ನಾವು ಯಾರಿಗೂ ತೊಂದರೆ ಇಲ್ಲದೆ ರೀತಿಯಲ್ಲಿ ಮೆಟ್ಟಿಲು ಹಾಕಿರುವುದನ್ನು ಹೊಡೆದು ಹಾಕುತ್ತಿದ್ದಾರೆ. ನಂತರ ಆರ್.ಜಿ.ಓಬಯ್ಯ ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಎಫ್ ಐ ಆರ್ ದಾಖಲು ಮಾಡಬೇಕು ಎಂಬುದಾಗಿ ಒತ್ತಡ ಹೆರುತ್ತಿರುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮನನೊಂದ ಪತ್ನಿ ವಿಷ ಸೇವಿಸಿದ್ದಾಳೆ. ನಂತರ ತಕ್ಷಣವೇ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರೆ ಎಂದು ತಿಳಿಸಿ ದ್ದಾರೆ. ಇವರ ಮೂರು ಜನರ ಮೇಲೆ ಆರಸೀಕೆರೆ ಠಾಣೆಯಲ್ಲಿ ದೂರು ಸಲ್ಲಿಸುತ್ತಿದ್ದೇವೆ ಎಂದು ಪತಿ ಓಬಳೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.