ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

Profile Vishwavani News Mar 15, 2021 4:43 PM
ಹೊಳಲು: ಸಾಲಬಾದೆ ತಾಳಲಾರದೆ ಪೂಜಾರ ಹುಚ್ಚೀರಪ್ಪ ತಂದೆ ಸಣ್ಣವೀರಪ್ಪ (61) ಎಂಬ ರೈತನೋರ್ವ ತನ್ನ ಜಮೀನಿ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಳಲು ಗ್ರಾಮದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಮೃತ ರೈತನಿಗೆ 3.79 ಜಮೀನು ಇದ್ದು, ಮುಂಗಾರು ಬೆಳೆಯಾಗಿ ಕಬ್ಬು ಬೆಳೆದಿದ್ದನು. ಇದಕ್ಕಾಗಿ ಹೊಳಲು ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 2.46,000ಲಕ್ಷ ಹಾಗೂ 50.000 ಸಾವಿರ ಹೈನು ಗಾರಿಕೆ ಸಾಲದ ಜೊತೆಗೆ ಹೊರಗಡೆ 5,ಲಕ್ಷ ಕೈಗಡ ಸಾಲ ಪಡೆದಿ ದ್ದನು. ಆದರೆ ಬೆಳೆಯು ಹದಕ್ಕೆ ಬಂದಾಗ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾದ ಪರಿಣಾಮ ನಿರೀಕ್ಷೆಯಂತೆ ಬೆಳೆ ಬಾರದಿರುವ ಕಾರಣ ಸಾಲಬಾಧೆ ಹೆಚ್ಚಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಮೂಲಗಳಿಂದ ದೂರು ಸಲ್ಲಿಕೆಯಾಗಿದೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮವಾರ ಮದ್ಯಾಹ್ನ ಸ್ವಗ್ರಾಮ ಹೊಳಲಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತ ರೈತ ಹಲವು ವರ್ಷಗಳಿಂದ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿಯ ಅರ್ಚಕರಾಗಿದ್ದರು.