ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಜ್ಯದಲ್ಲೇ 2ನೇ ಅತಿ ಎತ್ತರದ 'ನಂದಿ' ವಿಗ್ರಹದ ಲೋಕಾರ್ಪಣೆ

ರಾಜ್ಯದಲ್ಲೇ 2ನೇ ಅತಿ ಎತ್ತರದ 'ನಂದಿ' ವಿಗ್ರಹದ ಲೋಕಾರ್ಪಣೆ

ರಾಜ್ಯದಲ್ಲೇ 2ನೇ ಅತಿ ಎತ್ತರದ 'ನಂದಿ' ವಿಗ್ರಹದ ಲೋಕಾರ್ಪಣೆ

Profile Vishwavani News Mar 11, 2021 4:04 PM
ರಾಮದುರ್ಗ: ಬೆಳಗಾವಿ ಜಿಲ್ಲೆಯ ಮುಳ್ಳೂರು ಗುಡ್ಡದಲ್ಲಿ ಸ್ಥಾಪಿಸಿರುವ ದೇಶದಲ್ಲೆ ಅತಿ ಎತ್ತರದ 'ನಂದಿ' ವಿಗ್ರಹದ ಲೋಕಾ ರ್ಪಣೆ ಕಾರ್ಯಕ್ರಮ ಮಹಾಶಿವರಾತ್ರಿ ದಿನ ವಿಜೃಂಭಣೆಯಿಂದ ನೆರವೇರಿತು. 2ನೇ ಅತಿ ಎತ್ತರದ್ದು ಎನ್ನಲಾದ 78 ಅಡಿ ಎತ್ತರದ ಶಿವನ (ರಾಮೇಶ್ವರ) ಮೂರ್ತಿ ಮುಂಭಾಗದಲ್ಲಿ ನಂದಿ (ಬಸವಣ್ಣ) ಮೂರ್ತಿ ಸ್ಥಾಪಿಸಿ, ಗುಡ್ಡವನ್ನು ಆಕರ್ಷಕಗೊಳಿಸಲಾಗಿದೆ. '22 ಅಡಿ ಎತ್ತರ, 32 ಅಡಿ ಉದ್ದ ಹಾಗೂ 14 ಅಡಿ ಅಗಲದ ಈ ಮೂರ್ತಿ ಸಿದ್ಧಪಡಿಸಲು ಎರಡು ವರ್ಷ ತಗುಲಿದೆ. ಇದು ದೇಶದಲ್ಲೇ ಅತಿ ಎತ್ತರದ ಮೂರ್ತಿಯಾಗಿದೆ' ಎಂದು ಮಾಜಿ ಶಾಸಕ ಅಶೋಕ ಪಟ್ಟಣ ತಿಳಿಸಿದರು.