Road accident: ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿ; ಎಣ್ಣೆ ಬಾಟಲಿಗಾಗಿ ಮುಗಿಬಿದ್ದ ಸ್ಥಳೀಯರು!
Road accident: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಗೋಪಾಲಪುರದ ಕೆರೆಕೋಡಿ ಸಮೀಪ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ವಾಹನ ಉರುಳಿದಿದ್ದರಿಂದ ನೂರಾರು ಮದ್ಯದ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಾಸನದಿಂದ ಚಳ್ಳಕೆರೆಗೆ ಮದ್ಯದ ಬಾಕ್ಸ್ ಸಾಗಣೆ ವೇಳೆ ಅವಘಡ ನಡೆದಿದೆ.


ಚಿಕ್ಕನಾಯಕನಹಳ್ಳಿ: ತಾಲೂಕಿನ ಹಂದನಕೆರೆ ಹೋಬಳಿಯ ಗೋಪಾಲಪುರದ ಕೆರೆಕೋಡಿ ಸಮೀಪ ಮದ್ಯ ಸಾಗಿಸುತ್ತಿದ್ದ ವಾಹನ ಮಗುಚಿ ಬಿದ್ದಿದೆ. ಆಯತಪ್ಪಿ ಕೆಳಕ್ಕೆ ಉರುಳಿದ್ದರಿಂದ (Road accident) ವಾಹನದಲ್ಲಿದ್ದ ನೂರಾರು ಮದ್ಯದ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದನ್ನು ಗಮನಿಸಿದ ಸ್ಥಳೀಯರು ಮದ್ಯದ ಬಾಕ್ಸ್‌ಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಹಾಸನದಿಂದ ಚಳ್ಳಕೆರೆಗೆ ಮದ್ಯದ ಬಾಕ್ಸ್ ಸಾಗಣೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮದ್ಯದ ಬಾಕ್ಸ್‌ಗಳನ್ನು ಬೇರೆ ವಾಹನಕ್ಕೆ ವರ್ಗಾಯಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆಗೆ ನಿಖರ ಮತ್ತು ಸ್ಪಷ್ಟ ಮಾಹಿತಿ ಪಡೆಯಲು ಉಪ ಅಬಕಾರಿ ನಿರೀಕ್ಷಕಿ ಆಶಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಒಳ ಬರುವ ಕರೆಗಳು ನಿಷ್ಕ್ರಿಯಗೊಳಿಸಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ತನಿಖಾ ವರದಿಯ ನಂತರ ಮದ್ಯ ಅಬಕಾರಿ ಇಲಾಖೆಯದ್ದೋ ಅಥವಾ ಖಾಸಗಿಯದ್ದೊ ಸ್ಪಷ್ಟವಾಗಲಿದೆ.

ಜಾಸ್ತಿ ಚಾಟಿಂಗ್ ಮಾಡಬೇಡ ಎಂದಿದ್ದಕ್ಕೆ ಪತಿಗೇ ಚಾಕು ಇರಿದ ಪತ್ನಿ!
ವಿಜಯಪುರ: ಮೊಬೈಲ್‌ನಲ್ಲಿ ಅತಿಯಾಗಿ ಚಾಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬುದ್ಧಿವಾದ ಹೇಳಿದ ಗಂಡನಿಗೇ ಪತ್ನಿಯೊಬ್ಬಳು ಚಾಕುವಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ವಿಜಯಪುರ ನಗರದ ಆಲಕುಂಟೆ ನಗರದಲ್ಲಿ ಭಾನುವಾರ ನಡೆದಿದೆ. ತೇಜು ರಾಠೋಡ್ ಎಂಬಾಕೆ ತನ್ನ ಪತಿ ಅಜಿತ್ ರಾಠೋಡ್ ಗಾಢ ನಿದ್ರೆಯಲ್ಲಿದ್ದಾಗ ಕತ್ತಿಗೆ ಚಾಕುವಿನಿಂದ ಇರಿದಿದ್ದಾಳೆ. ಅಜಿತ್ ಕಿರುಚಿಕೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದ್ದು, ಕೂಡಲೇ ಅವರನ್ನು ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಜಿತ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತೇಜು ಸದಾ ಮೊಬೈಲ್‌ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದುದ್ದಕ್ಕೆ ಅಜಿತ್ ಬುದ್ಧಿವಾದ ಹೇಳಿದ್ದರು. ಇದು ತೇಜುಗೆ ಸಿಟ್ಟು ತಂದಿದ್ದು, ಆಕೆ ಈ ದುಸ್ಸಾಹಸಕ್ಕೆ ಕೈಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಆದರ್ಶನಗರ ಪೊಲೀಸರು ತೇಜು ರಾಠೋಡ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ; ಗುಂಡಿನ ದಾಳಿಗೆ ಓರ್ವ ನಾಗರಿಕ ಸಾವು