Mysore News: ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ- ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್
ಜಿಲ್ಲಾ ಬ್ಯಾಂಕ್ ವಾರು ಯಾವ ಯಾವ ಬ್ಯಾಂಕ್ ಗಳು ಕೃಷಿಗೆ, ಶಿಕ್ಷಣಕ್ಕೆ, ವಸತಿಗಳಿಗೆ, ವಯ ಕ್ತಿಕ ಲೋನ್ ಗಳ ಹಾಗೂ ಇನ್ನಿತರ ಲೋನ್ಗಳನ್ನೂ ಕೊಡಿಸುವುದರ ಮೂಲಕ ಬ್ಯಾಂಕುಗಳು ಎಷ್ಟು ಗುರಿ ತಲುಪಿದೆ ಎಂಬುದನ್ನು ವಿವಿಧ ಜಿಲ್ಲಾ ಬ್ಯಾಂಕ್ ವಾರರು ಶೇಕಾದವರು ಗಳಲ್ಲಿ ಮಾಹಿತಿ ಪಡೆದರು


ಮೈಸೂರು: ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಸೈಬರ್ ಕ್ರೈಂ ನಂತಹ ಕೃತ್ಯಗಳ ಬಗ್ಗೆ ಪ್ರತಿಯೊಂದು ಬ್ಯಾಂಕ್ ಗಳು ಗಮನ ವಹಿಸಬೇಕು ಎಂದು ಮೈಸೂರು ಮತ್ತು ಕೊಡಗು ಕ್ರೇತ್ರದ ಲೋಕಸಭಾ ಸದಸ್ಯರಾದ ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಹೇಳಿದರು. ಇಂದು ಜಿಲ್ಲಾ ಪಂಚಾ ಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಿಸಿಸಿ ಹಾಗೂ ಡಿಎಲ್ ಆರ್ ಸಿ ಪ್ರಗತಿ ಪರಿಶೀ ಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಂದು ಬ್ಯಾಂಕ್ಗಳು ಪ್ರತಿ ಜಿಲ್ಲೆ ಗಳಲ್ಲಿ ಕ್ಯಾಂಪೇನ್ ಗಳನ್ನು ನಡೆಸಬೇಕು. ಹೊಸ ಹೊಸ ಯೋಜನೆಗಳ ಮೂಲಕ ಸಾರ್ವ ಜನಿಕರ ಕನಸುಗಳಿಗೆ ಜೀವವನ್ನು ತುಂಬಬೇಕು ಎಂದು ಹೇಳಿದರು.
ಹೆಚ್ಚು ಸಮಯವನ್ನು ಬ್ಯಾಂಕ್ ವ್ಯವಹಾರಗಳನ್ನು ನೀಡುವುದರ ಮೂಲಕ ಹೆಚ್ಚು ಅಂಕಿ ಸಂಖ್ಯೆಗಳ ಡೇಟಾವನ್ನೂ ಸಂಗ್ರಹ ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದನ್ನೂ ಓದಿ: Mysore News: 13ನೇ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ
ಜಿಲ್ಲಾ ಬ್ಯಾಂಕ್ ವಾರು ಯಾವ ಯಾವ ಬ್ಯಾಂಕ್ ಗಳು ಕೃಷಿಗೆ, ಶಿಕ್ಷಣಕ್ಕೆ, ವಸತಿಗಳಿಗೆ, ವಯ ಕ್ತಿಕ ಲೋನ್ ಗಳ ಹಾಗೂ ಇನ್ನಿತರ ಲೋನ್ಗಳನ್ನೂ ಕೊಡಿಸುವುದರ ಮೂಲಕ ಬ್ಯಾಂಕ್ಗಳು ಎಷ್ಟು ಗುರಿ ತಲುಪಿದೆ ಎಂಬುದನ್ನು ವಿವಿಧ ಜಿಲ್ಲಾ ಬ್ಯಾಂಕ್ ವಾರರು ಶೇಕಾದವರು ಗಳಲ್ಲಿ ಮಾಹಿತಿ ಪಡೆದರು.
ಶಿಕ್ಷಣ ಸಾಲಗಳ ಅಡಿಯಲ್ಲಿ ಕಾರ್ಯಕ್ಷಮತೆಯ ಬಗ್ಗೆ, ಹಣಕಾಸು ಸೇರ್ಪಡೆಯ ಯೋಜನೆ (FIP) ಮತ್ತು ಜನ ಸುರಕ್ಷಾ ಯೋಜನೆಗಳ ಅಡಿಯಲ್ಲಿ ಪ್ರಗತಿ ಪರಿಶೀಲನೆ ನಡೆಸುವುದರ ಬಗ್ಗೆ, ಜಿಲ್ಲೆಗಾಗಿ ಸಂಭಾವ್ಯ ಲಿಂಕ್ಡ್ ಯೋಜನೆಯನ್ನು ಪ್ರಾರಂಭಿಸುವುದರ ಬಗ್ಗೆ ಸಭೆ ಯಲ್ಲಿ ಚರ್ಚೆ ಮಾಡಲಾಯಿತು.
ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತರೆಡ್ಡಿ, ಲೀಡ್ ಬ್ಯಾಂಕ್ ಮ್ಯಾನೇಜರ್ ನಾಗೇಶ್ ವಿ. ಎನ್, ವಿವಿಧ ಬ್ಯಾಂಕ್ ಗಳ ಮ್ಯಾನೇಜರ್ ಗಳು ಹಾಗೂ ಸದಸ್ಯರು ಉಪಸ್ಥಿತ ರಿದ್ದರು.