Mysore News: 13ನೇ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ
ತ್ರಿವೇಣಿ ಸಂಗಮದ ನದಿ ಮದ್ಯ ಭಾಗದಲ್ಲಿರುವ ನಡುಹೊಳೆ ಬಸಪ್ಪನ ಮುಂಭಾಗ ಪೂಜೆ ಸಲ್ಲಿಕೆ ಯಾಯಿತು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮ ನಾಥೇಶ್ವರ ಸ್ವಾಮೀಜಿ, ಕಾಗಿನೆಲೆ ಕನಕಗುರು ಮಠದ ನಿರಂಜನಾನಂದ ಪುರಿ ಸ್ವಾಮೀಜಿ, ಕೈಲಾಸ ನಂದ ಮಠದ ಜಯೇಂದ್ರ ಪುರಿ ಗಳಿಂದ ವಿವಿಧ ಮಂತ್ರಘೋಷಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿತು.


ಮೈಸೂರು: ದಕ್ಷಿಣ ಪ್ರಯಾಗ' ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 13ನೇ ಕುಂಭಮೇಳಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ದೊರೆಯಿತು. ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದ್ದು ಧ್ವಜಾರೋಹಣದ ಮೂಲಕ ಕುಂಭಮೇಳಕ್ಕೆ ಧಾರ್ಮಿಕ ಮುಖಂಡರು ಚಾಲನೆ ನೀಡಿದರು. ತ್ರಿವೇಣಿ ಸಂಗಮದ ನದಿ ಮದ್ಯ ಭಾಗದಲ್ಲಿರುವ ನಡುಹೊಳೆ ಬಸಪ್ಪನ ಮುಂಭಾಗ ಪೂಜೆ ಸಲ್ಲಿಕೆಯಾಯಿತು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮ ನಾಥೇಶ್ವರ ಸ್ವಾಮೀಜಿ, ಕಾಗಿನೆಲೆ ಕನಕಗುರು ಮಠದ ನಿರಂಜನಾನಂದ ಪುರಿ ಸ್ವಾಮೀಜಿ, ಕೈಲಾಸ ನಂದ ಮಠದ ಜಯೇಂದ್ರ ಪುರಿ ಗಳಿಂದ ವಿವಿಧ ಮಂತ್ರಘೋಷಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿತು.
ಇದನ್ನೂ ಓದಿ: Mysore News: ಮೈಸೂರು ಮಹಾರಾಣಿ ಕಾಲೇಜಿನ ಗೋಡೆ ಕುಸಿದು ಓರ್ವ ಸಾವು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪವಿಭಾಗಾಧಿಕಾರಿ ರಕ್ಷಿತ್ ಸೇರಿ ಹಲವರ ಉಪಸ್ಥಿತಿದರು.