Donald Trump: ಈ ಬಾರಿ ಕುಲ್ಫಿ ಅಲ್ಲ, ಖೀರ್ ಮಾರಿದ ‘ಪಾಕಿಸ್ತಾನದ ಡೊನಾಲ್ಡ್ ಟ್ರಂಪ್'
Donald Trump: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೇ ಹೋಲುವ ಪಾಕಿಸ್ತಾನದ ಪಂಜಾಬ್ನ ಸಾಹಿವಾಲ್ ಜಿಲ್ಲೆಯ ಚಾಚಾ ಬಗ್ಗಾ ಈ ಹಿಂದೆ ಜನರಿಗೆ ಕುಲ್ಫಿ ಮಾರಾಟ ಮಾಡುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಇದೀಗ ಅವರು ಬೀದಿಯಲ್ಲಿ ಗ್ರಾಹಕರಿಗೆ ರೈಸ್ ಪುಡ್ಡಿಂಗ್ ನೀಡುತ್ತಿರುವ ಹೊಸ ವಿಡಿಯೊವೊಂದು ಸದ್ದು ಮಾಡುತ್ತಿದೆ.
Source : Free press jounal
ಇಸ್ಲಾಮಾಬಾದ್, ಜ. 17, 2025: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಹೋಲುವ ವ್ಯಕ್ತಿಯೊಬ್ಬರು ಪಾಕಿಸ್ತಾನದ ಪಂಜಾಬ್ನ ಸಾಹಿವಾಲ್ ಜಿಲ್ಲೆಯಲ್ಲಿ ಐಸ್‌ಕ್ರೀಮ್ ಮಾರಾಟ ಮಾಡುತ್ತ ಸುದ್ದಿಯಲ್ಲಿಯಲ್ಲಿದ್ದಾರೆ. ಇವರು ಕುಲ್ಫಿ ಮಾರಾಟ ಮಾಡುತ್ತಿದ್ದ ವಿಡಿಯೊ 2021ರಲ್ಲಿ ವೈರಲ್ ಆಗಿತ್ತು. ಈ ಬಾರಿ ಅವರು ಗ್ರಾಹಕರಿಗೆ ಅಕ್ಕಿ ಪುಡ್ಡಿಂಗ್ (ರೈಸ್ ಫುಡ್ಡಿಂಗ್) ಮಾರುತ್ತಿರುವ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.
Pakistan has its own Donald Trump
— NEXTA (@nexta_tv) January 14, 2025
Locals love taking selfies with Salem Bagga, a singing pudding vendor. They believe the man looks exactly like the future U.S. President Trump.
Bagga has capitalized on this resemblance and turned it into a brand, naming his rice pudding,… pic.twitter.com/t8ICZzeZFu
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೋಲುವ ಅವರನ್ನು ಜನರು ‘ಪಾಕಿಸ್ತಾನದ ಡೊನಾಲ್ಡ್ ಟ್ರಂಪ್' ಎಂದೇ ಕರೆಯುತ್ತಾರೆ. ಅಲ್ಲದೇ ಅವರ ನಿಜವಾದ ಹೆಸರು ಸಲೀಮ್ ಬಗ್ಗಾ ಆಗಿದ್ದರು ಕೂಡ ಅಲ್ಲಿನ ಜನರು ಅವರನ್ನು ಪ್ರೀತಿಯಿಂದ "ಚಾಚಾ ಬಗ್ಗಾ" ಎಂದು ಸಂಬೋಧಿಸುತ್ತಾರೆ. ಅವರಿಗೆ ಈಗ 53 ವರ್ಷ. ಅಲ್ಬಿನಿಸಂನಿಂದ ಬಳಲುತ್ತಿದ್ದ ಕಾರಣ ಅವರ ಕೂದಲು ವಿಶಿಷ್ಟವಾದ ಹೊಂಬಣ್ಣವನ್ನು ಹೊಂದಿದೆ. ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಅವರ ವಿಲಕ್ಷಣ ಹೋಲಿಕೆ ಅವರಿಗೆ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ತಂದಿದೆ.
ಕಪ್ಪು ಜಾಕೆಟ್ ಮತ್ತು ಒಳಗೆ ದೇಸಿ ಕುರ್ತಾ ಧರಿಸಿ ಡೊನಾಲ್ಡ್ ಟ್ರಂಪ್ ಅವರಂತೆಯೇ ಕಾಣುವ 53 ವರ್ಷದ ಸಲೀಮ್ ಬಗ್ಗಾ ಅವರು ತಮ್ಮ ಮರದ ಗಾಡಿಯನ್ನು ಪಾಕಿಸ್ತಾನದ ಬೀದಿಗಳಲ್ಲಿ ತಳ್ಳಿ ಜನರಿಗೆ ರುಚಿಕರವಾದ ಖೀರ್ ಮಾರಾಟ ಮಾಡುತ್ತಾರೆ.
ಈ ಸುದ್ದಿಯನ್ನೂ ಓದಿ:Salman Khan: ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ 6.35ಲಕ್ಷ ರೂ. ಬಟ್ಟೆ ಖರೀದಿ ಮಾಡಿ ವಿತರಿಸಿದ ಅಭಿಮಾನಿ! ವಿಡಿಯೊ ವೈರಲ್
Wah. Qulfi walay bhai, Kya baat ha کھاۓ بغیر مزا آ گیا pic.twitter.com/YJeimzhboJ
— Shehzad Roy (@ShehzadRoy) June 10, 2021
ಈ ಹಿಂದೆ ಅವರು ಇದೇ ಶೈಲಿಯಲ್ಲಿ ಕುಲ್ಫಿ ಮಾರಾಟ ಮಾಡಿದ್ದಕ್ಕಾಗಿ ವೈರಲ್ ಆದರೆ, ಈ ಬಾರಿ ಖೀರ್ ಮಾರಾಟ ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ.