Salman Khan: ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ 6.35ಲಕ್ಷ ರೂ. ಬಟ್ಟೆ ಖರೀದಿ ಮಾಡಿ ವಿತರಿಸಿದ ಅಭಿಮಾನಿ! ವಿಡಿಯೊ ವೈರಲ್
Salman Khan: ರಾಜಸ್ಥಾನದ ಜುಮ್ರುವಿನ ಕುಲದೀಪ್ ಸಿಂಗ್ ಕಸ್ವಾಯ್ ಎಂಬ ಅಭಿಮಾನಿ ಸಲ್ಮಾನ್ ಅವರ ಹುಟ್ಟುಹಬ್ಬದಂದು 6.35 ಲಕ್ಷ ರೂಪಾಯಿಗಳ ಶಾಪಿಂಗ್ ಮಾಡಿ ಅಗತ್ಯವಿರುವವರಿಗೆ ಬಟ್ಟೆಗಳನ್ನು ವಿತರಣೆ ಮಾಡಿದ್ದಾರೆ.
Pushpa Kumari
December 31, 2024
ಜೈಪುರ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಆಪ್ತ ಬಳಗದಲ್ಲ ಬರ್ತ್ ಡೇ ಸೆಲೆಬ್ರೇಶನ್ ಜೋರಾಗಿಯೇ ಇತ್ತು. ರಾಜಸ್ಥಾನದ ಅಭಿಮಾನಿಯೊಬ್ಬರು ಖಾನ್ ಅವರ ಬ್ರಾಂಡ್ ಬೀಯಿಂಗ್ ಹ್ಯೂಮನ್‌ನಿಂದ 6.35 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಅಗತ್ಯವಿರುವವರಿಗೆ ವಿತರಣೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ರಾಜಸ್ಥಾನದ ಜುಮ್ರುವಿನ ಕುಲದೀಪ್ ಸಿಂಗ್ ಕಸ್ವಾಯ್ ಎಂಬ ಅಭಿಮಾನಿ ಸಲ್ಮಾನ್ ಅವರ ಹುಟ್ಟುಹಬ್ಬದಂದು 6.35 ಲಕ್ಷ ರೂಪಾಯಿಗಳ ಶಾಪಿಂಗ್ ಮಾಡಿ ಅಗತ್ಯವಿರುವವರಿಗೆ ಬಟ್ಟೆಗಳನ್ನು ವಿತರಣೆ ಮಾಡಿದ್ದಾರೆ. ಬಡವರಿಗೆ ಬೀಯಿಂಗ್ ಹ್ಯೂಮನ್ ಬಟ್ಟೆಯ ಪ್ಯಾಕೇಜ್‌ಗಳನ್ನು ಹಸ್ತಾಂತರಿಸುವ ವಿಡಿಯೊ ಇದೀಗ ಬಹಳಷ್ಟು ವೈರಲ್ ಆಗುತ್ತಿದ್ದು ಇವರ ಈ ಕಾರ್ಯಕ್ಕೆ ಸಲ್ಮಾನ್ ಖಾನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram A post shared by Instant Bollywood (@instantbollywood)
ಈ ಬಗ್ಗೆ ಮಾತನಾಡಿದ ಸಲ್ಲು ಅಭಿಮಾನಿ ಬೀಯಿಂಗ್ ಹ್ಯೂಮನ್ ಎನ್‌ಜಿಒ ಆಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ದೃಷ್ಟಿಯಿಂದ ಹೆಚ್ಚಿನ ಜನರಿಗೆ ನೆರವಾಗಿದ್ದು ಇಂತಹ ಕೆಲಸಗಳಿಗೆ ಬೆಂಬಲಿಸಬೇಕು. ನಾವು ಇಲ್ಲಿಂದ ಯಾವುದೇ ವಸ್ತು ಖರೀದಿಸಿದಾಗ ನಮ್ಮ ಹಣವು ಒಳ್ಳೆಯ ಕಾರ್ಯಗಳಿಗೆ ನೆರವಾಗುತ್ತೆ. ಇತರರಿಗೆ ಸಹಾಯ ಮಾಡುವುದರಲ್ಲಿ ತನಗೆ ಖುಷಿ ಇದೆ ಎಂದು ಅಭಿಮಾನಿ ಸಂತಸ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಹುಟ್ಟುಹಬ್ಬದ ಪ್ತಯುಕ್ತ ಮುಂಬರುವ ಚಿತ್ರದ ಸಿಕಂದರ್‌ನ ಬಹು ನಿರೀಕ್ಷಿತ ಟೀಸರ್ ಬಿಡುಗಡೆಯಾಗಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಸಲ್ಮಾನ್ ಖಾನ್, ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು. ಸಿಕಂದರ್ ಟೀಸರ್ ಅನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಎಆರ್ ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ಸಿಕಂದರ್ ಈದ್ 2025 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Heavy Snowfall: ಭಾರೀ ಹಿಮಪಾತ; 5,000 ಪ್ರವಾಸಿಗರ ರಕ್ಷಣೆ