ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹಿಂದೆ ಸರಿಯುವ ಆದೇಶಕ್ಕೆ ಸಹಿ ಹಾಕಿದ ಟ್ರಂಪ್ ; WHO ಮೇಲಿನ ಪರಿಣಾಮವೇನು?

ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕ ನೂತನ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ನಂತರ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದಕ್ಕೆ ಸರಿಯುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದಾಗಲೂ ಈ ಆದೇಶವನ್ನು ಅವರು ಜಾರಿಗೊಳಿಸಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದಕ್ಕೆ ಸರಿದ ಅಮೆರಿಕ; ಮಹತ್ವದ ಆದೇಶಕ್ಕೆ ಟ್ರಂಪ್‌ ಸಹಿ

Donald Trump -

Vishakha Bhat
Vishakha Bhat Jan 21, 2025 10:54 AM

ವಾಷಿಂಗ್ಟನ್‌ : ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ಒಳಗೆ ಡೊನಾಲ್ಡ್‌ ಟ್ರಂಪ್‌ (Donald trump) ಕೆಲ ಮಹತ್ವದ ನಿರ್ಣಯಗಳಿಗೆ ಸಹಿ ಹಾಕಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಅಮೆರಿಕ ಅಧಿಕೃತವಾಗಿ ಹೊರ ನಡೆಯುವ ಆದೇಶಕ್ಕೆ ಟ್ರಂಪ್‌ ಸೋಮವಾರ ಸಹಿ ಹಾಕಿದ್ದಾರೆ. ಸದ್ಯ ಅವರು ಓವೆಲ್‌ನ ಆಫೀಸ್‌ನಲ್ಲಿ ಈ ಆದೇಶಕ್ಕೆ ಸಹಿ ಮಾಡಿರುವುದು ತಿಳಿದು ಬಂದಿದೆ. ಟ್ರಂಪ್‌ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದಾಗಲೂ ಕೊರೊನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿ ಅಧಿಕೃತವಾಗಿ WHOನಿಂದ ಹಿಂದೆ ಸರಿದಿದ್ದರು. ನಂತರ ಜೋ ಬೈಡನ್‌ ಅಧಿಕಾರವಧಿಯಲ್ಲಿ ಈ ಆದೇಶವನ್ನು ರದ್ದುಗೊಳಿಸಿದ್ದರು.



ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿದ್ದರು. ಅಂದಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ಮಾಹಿತಿ ರವಾನೆ ಮಾಡಿ, ಜುಲೈ 8, 2021 ರಿಂದ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಗುಳಿಯಲಿದೆ ಎಂದು ತಿಳಿಸಿತ್ತು. ಡಬ್ಲ್ಯೂ ಎಚ್ ಒ ಗೆ ಅಮೆರಿಕ ನೀಡುವ ಅನುದಾನವನ್ನು ನಾವು ನಿಲ್ಲಿಸುತ್ತೇವೆ ಎಂದು ಟ್ರಂಪ್ ಘೋಷಣೆ ಮಾಡಿದ್ದರು. ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಪ್ರತಿ ವರ್ಷ 300 ಕೋಟಿ ಅನುದಾನ ನೀಡುತ್ತಿದೆ. ಅಮೆರಿಕ 3 ಸಾವಿರ ಕೋಟಿ ಅನುದಾನ ನೀಡುತ್ತಿದೆ.

ಈ ಸುದ್ದಿಯನ್ನೂ ಓದಿ : Donald Trump : ಡೊನಾಲ್ಡ್‌ ಟ್ರಂಪ್‌ ಪದಗ್ರಹಣ;ಔತಣಕೂಟದಲ್ಲಿ ಪಾಲ್ಗೊಂಡ ಮುಖೇಶ್‌ ಅಂಬಾನಿ ದಂಪತಿ

ಅಮೆರಿಕದ ಈ ನಿರ್ಗಮನವು ವಿಶ್ವಾದ್ಯಂತ ಸಿಡುಬು ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಏಜೆನ್ಸಿಗೆ ತೀವ್ರ ಹೊಡೆತವನ್ನು ನೀಡುತ್ತದೆ. ಅಮೆರಿಕ HIV ಮತ್ತು ಪೋಲಿಯೊ ಕಾಲರಾ, ಡೆಂಗ್ಯೂ, ಪಾಕ್ಸ್ ಮತ್ತು ಮಾರ್ಬರ್ಗ್ ವೈರಸ್‌ನಂತಹ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಅನುದಾನವನ್ನು ನೀಡುತ್ತಿತ್ತು. ಇದೀಗ ಟ್ರಂಪ್‌ ಅವರ ಈ ನಿರ್ಧಾರ ವಿಶ್ವಸಂಸ್ಥೆಗೆ ದೊಡ್ಡ ಹೊಡೆತವನ್ನೇ ನೀಡಲಿದೆ.