ಶ್ರೇಯಸ್ ಅಯ್ಯರ್ ನಾಯಕತ್ವದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಎಬಿ ಡಿ ವಿಲಿಯರ್ಸ್!
ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಸಾರಥ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮೂರನೇ ಬಾರಿ ಟ್ರೋಫಿ ಗೆದ್ದುಕೊಟ್ಟಿದ್ದರು. ಮುಂಬರುವ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದು, ಈ ಕುರಿತು ಎಬಿ ಡಿ ವಿಲಿಯರ್ಸ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ನವದೆಹಲಿ: ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ (Shreys Iyer) ಅವರ ನಾಯಕತ್ವವನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ (Abd Villers)ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಬಲಗೈ ಆಟಗಾರನಿಗೆ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ 26.75 ಕೋಟಿ ರೂ ನೀಡಿ ಖರೀದಿಸಿದ ಪಂಜಾಬ್ ಫ್ರಾಂಚೈಸಿ ನಾಯಕತ್ವವದ ಹೊಣೆ ನೀಡಿ ಚೊಚ್ಚಲ ಟ್ರೋಫಿ ಹುಡುಕಾಟಕ್ಕೆ ಮುಂದಾಗಿದೆ.
"ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮೂರನೇ ಟ್ರೋಫಿ ಗೆದ್ದುಕೊಟ್ಟ ಶ್ರೇಯಸ್ ಅಯ್ಯರ್ ಯಶಸ್ವಿ ನಾಯಕರಾಗಿದ್ದಾರೆ. ಒತ್ತಡ ನಿವಾರಿಸಿ ತಂಡವನ್ನು ಹೇಗೆ ಮುಂದುವರಿಸಬೇಕೆಂದು ಅವರಿಗೆ ತಿಳಿದಿದೆ. ಕೋಲ್ಕತ್ತಾ ಫ್ರಾಂಚೈಸಿ ಅವರನ್ನು ಕಳೆದುಕೊಂಡು ದೊಡ್ಡ ತಪ್ಪು ಮಾಡಿದೆ," ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Champions Trophy: ರೋಹಿತ್ ಜತೆಗೆ ಮತ್ತೊರ್ವ ಓಪನರ್ ಆರಿಸಿದ ಸೆಹ್ವಾಗ್!
ಪಂಜಾಬ್ ಕಿಂಗ್ಸ್ ಅನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ
ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಹಾಗೂ ಶ್ರೇಯಸ್ ಅಯ್ಯರ್ ಅವರ ಜುಗಲ್ ಬಂದಿ ಕುರಿತು ಎಬಿಡಿ ಮಾತನಾಡಿದ್ದು,
"ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ರಿಕಿ ಪಾಂಟಿಂಗ್ ಯಶಸ್ವಿ ಕ್ರಿಕೆಟಿಗರಾಗಿದ್ದಾರೆ. ಅವರಲ್ಲಿ ಕ್ರಿಕೆಟ್ ಕುರಿತು ಅಪಾರ ಜ್ಞಾನ ಅಡಗಿದ್ದು, ಚಾಂಪಿಯನ್ ಪಟ್ಟ ಗೆಲ್ಲುವುದು ಹೇಗೆ ಎಂಬುದನ್ನು ಅರಿತಿದ್ದಾರೆ. ಶ್ರೇಯಸ್ ಅಯ್ಯರ್ ತಂಡದಲ್ಲಿ ಇರುವುದು ಉತ್ತಮವಾಗಿದ್ದು, ಈ ಇಬ್ಬರ ಉಪಸ್ಥಿತಿಯಲ್ಲಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಯಶಸ್ಸು ಪಡೆಯಲಿದೆ," ಎಂದು ಮಿಸ್ಟರ್ 360 ಡಿಗ್ರಿ ಭವಿಷ್ಯ ನುಡಿದಿದ್ದಾರೆ.
ಕೆಎಲ್ ರಾಹುಲ್ ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಯಕನನ್ನು ಹೆಸರಿಸಿದ ದಿನೇಶ್ ಕಾರ್ತಿಕ್!
ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಶೋ ವೇಳೆ ಪಂಜಾಬ್ ಕಿಂಗ್ಸ್ ನಾಯಕರಾಗಿ ಶ್ರೇಯಸ್ ಅಯ್ಯರ್ ಅವರನ್ನು ಘೋಷಿಸಿದ್ದು ನನಲ್ಲಿ ಆಶ್ಚರ್ಯ ಮೂಡಿಸಿದೆ ಎಂದು ರಾಯಲ್ ಚಾಲೆಂಜರ್ಸ್ ಮಾಜಿ ಸ್ಫೋಟಕ ಆಟಗಾರ ಹೇಳಿದ್ದಾರೆ.
"ನಾಯಕನ ಹೆಸರನ್ನು ಈ ರೀತಿ ಪ್ರಕಟಿಸಿದ್ದನ್ನು ನಾನು ಈ ಹಿಂದೆ ಎಂದೂ ನೋಡಿರಲಿಲ್ಲ. ನಾಯಕನ ಆಯ್ಕೆಗಾಗಿ ಪತ್ರಿಕಾಗೋಷ್ಠಿ ಆಯೋಜಿಸುವುದು ಸಹಜ. ಆದರೆ ಇದು ನಿಜಕ್ಕೂ ಉತ್ತಮ ಬೆಳವಣಿಗೆ ಆಗಿದೆ," ಎಂದು ಎಬಿಡಿ ವಿಲಿಯರ್ಸ್ ತಿಳಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಂತೆ ಪಂಜಾಬ್ ಕಿಂಗ್ಸ್ ಕೂಡ ಟ್ರೋಫಿ ಗೆಲ್ಲದೆ ಉಳಿದುಕೊಂಡಿದ್ದು, 2025ರ ಆವೃತ್ತಿಯಲ್ಲಿ ಚೊಚ್ಚಲ ಚಾಂಪಿಯನ್ ಪಟ್ಟ ಗೆಲ್ಲುವತ್ತ ಹೆಜ್ಜೆ ಇಟ್ಟಿದೆ.