ILT20 2025: ವಿಶ್ವ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಕೈರೊನ್ ಪೊಲಾರ್ಡ್!
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಕೈರೊನ್ ಪೊಲಾರ್ಡ್ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು 901 ಸಿಕ್ಸರ್‌ಗಳನ್ನು ಸಿಡಿಸಿದ್ದರೆ, ಅಗ್ರ ಸ್ಥಾನದಲ್ಲಿರುವ ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ 1056 ಸಿಕ್ಸರ್‌ಗಳ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.
ದುಬೈ: ವೆಸ್ಟ್ ಇಂಡೀಸ್ ದಿಗ್ಗಜ ಕೈರೊನ್ ಪೊಲಾರ್ಡ್ ಅವರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಎಂಐ ಎಮಿರೇಟ್ಸ್ ಹಾಗೂ ಡೆಸರ್ಟ್ ವೈಪರ್ಸ್ ನಡುವಣ ಪಂದ್ಯದಲ್ಲಿ ವಿಂಡೀಸ್ ದಿಗ್ಗಜ ಸಿಕ್ಸರ್‌ಗಳ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಡೆಸರ್ಟ್ ವೈಪರ್ಸ್ ತಂಡ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ಕೈರೊನ್ ಪೊಲಾರ್ಡ್ ನೆರವು ನೀಡಿದ್ದರು. ನಾಯಕ ನಿಕೋಲಸ್ ಪೂರನ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ತೆರಳಿದ್ದ ಪೊಲಾರ್ಡ್, 23 ಎಸೆತಗಳಲ್ಲಿ 36 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಸಿಡಿಸಿದ್ದರು.
IND vs ENG: ಟಿ20ಐ ಸರಣಿಗೂ ಮುನ್ನ ಭಾರತ ತಂಡಕ್ಕೆ 3 ದಿನಗಳ ಕ್ಯಾಂಪ್!
ಇತಿಹಾಸ ಬರೆದ ಕೈರೊನ್ ಪೊಲಾರ್ಡ್
ಪಂದ್ಯದ 19ನೇ ಓವರ್‌ನ ಮೊದಲನೇ ಎಸೆತದಲ್ಲಿ ಲಾಕಿ ಫರ್ಗೂಸನ್‌ಗೆ ಕೈರೊನ್ ಪೊಲಾರ್ಡ್ ತಮ್ಮ ಎರಡನೇ ಸಿಕ್ಸರ್ ಸಿಡಿಸಿದರು. ಆ ಮೂಲಕ ತಮ್ಮ ಟಿ20 ಕ್ರಿಕೆಟ್ ವೃತ್ತಿ ಜೀವನದಲ್ಲಿ 900 ಸಿಕ್ಸರ್‌ಗಳನ್ನು ಪೂರ್ಣಗಳಿಸಿದರು. ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಆಟಗಾರರೇ ಇರುವುದು ವಿಶೇಷ.
End of the first essay!@MIEmirates put up a competitive 159/6 on the board.
— International League T20 (@ILT20Official) January 16, 2025
Powerful performances take the visitors to a total they'd be happy with on this pitch.
Will @TheDesertVipers come back to hunt the total down?#DVvMIE #DPWorldILT20 #AllInForCricket pic.twitter.com/h2yN9fo3QA
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರು
ಕ್ರಿಸ್ ಗೇಲ್: 1056 ಸಿಕ್ಸರ್‌ಗಳು
ಕೈರೊನ್ ಪೊಲಾರ್ಡ್: 901 ಸಿಕ್ಸರ್‌ಗಳು
ಆಂಡ್ರೆ ರಸೆಲ್: 727 ಸಿಕ್ಸರ್‌ಗಳು
ನಿಕೋಲಸ್ ಪೂರನ್: 592 ಸಿಕ್ಸರ್‌ಗಳು
ಕಾಲಿನ್ ಮರ್ನೊ: 550 ಸಿಕ್ಸರ್‌ಗಳು
ಟಿ20 ಕ್ರಿಕೆಟ್‌ನ ಶ್ರೇಷ್ಢ ಬ್ಯಾಟ್ಸ್‌ಮನ್ ಪೊಲಾರ್ಡ್
ಟಿ20 ಕ್ರಿಕೆಟ್‌ನಲ್ಲಿನ ಅತ್ಯಂತ ಶ್ರೇಷ್ಠ ಆಟಗಾರರ ಪೈಕಿ ಕೈರೊನ್ ಪೊಲಾರ್ಡ್ ಕೂಡ ಒಬ್ಬರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಪೊಲಾರ್ಡ್ ಕೀ ಆಟಗಾರರಾಗಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಆಡಿದ 690 ಟಿ20 ಪಂದ್ಯಗಳಲ್ಲಿ 150.38ರ ಸ್ಟ್ರೈಕ್ ರೇಟ್‌ನಲ್ಲಿ 13429 ರನ್‌ಗಳನ್ನು ಸಿಡಿಸಿದ್ದಾರೆ ಹಾಗೂ 326 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2012ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡದಲ್ಲಿಯೂ ಪೊಲಾರ್ಡ್ ಆಡಿದ್ದರು.
2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್ ವೃತ್ತಿ ಜೀವನಕ್ಕೆ ಕೈರೊನ್ ಪೊಲಾರ್ಡ್ ವಿದಾಯ ಹೇಳಿದ್ದರು. ಆದರೂ ಅವರು ವಿಶ್ವದ ಇತರೆ ಟಿ20 ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಇನ್ನು ಗುರುವಾರದ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ತಂಡ ಐದು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.