Maha Kumbh 2025: ಇವರು ‘ಕಾಂಟೇ ವಾಲೇ ಬಾಬಾʼ- ಮುಳ್ಳುಗಳೇ ಇವರ ಹಾಸಿಗೆ!
Maha Kumbh 2025: ಪ್ರಯಾಗ್‌ರಾಜ್‌ನಲ್ಲಿ ಚಾಲನೆ ಪಡೆದುಕೊಂಡಿರುವ ಮಹಾ ಕುಂಭಮೇಳ ಒಂದೆಡೆ ಜನ ಸಾಗರಕ್ಕೆ ಸಾಕ್ಷಿಯಾಗುತ್ತಿದ್ದರೆ, ಇನ್ನೊಂದೆಡೆ ಹಲವು ವೈಶಿಷ್ಟ್ಯಗಳ ಆಗರವಾಗಿ ಜಗತ್ತಿನ ಗಮನ ಸೆಳೆಯುತ್ತಿದೆ. ಅಂತಹ ವೈಶಿಷ್ಟ್ಯಗಳಲ್ಲಿ ಒಂದು ಈ ಮುಳ್ಳಿನ ಹಾಸಿಗೆ ಮೇಲೆ ಮಲಗುವ ಬಾಬಾನ ಕಥೆ.
ಲಖನೌ, ಜ. 16, 2025: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್ (Prayagraj) ಇದೀಗ ಅಕ್ಷರಶಃ ಜನ ಸಾಗರವಾಗಿದೆ. ಇಲ್ಲಿನ ಗಂಗಾ (Ganga) - ಯಮುನಾ (Yamuna) ಮತ್ತು ಗುಪ್ತಗಾಮಿನಿ ಸರಸ್ವತಿ (Saraswati) ನದಿಗಳ ತ್ರಿವೇಣಿ ಸಂಗಮ ಸ್ಥಾನದಲ್ಲಿ ಪುಣ್ಯಸ್ನಾನ ಮಾಡಲು ದೇಶದ ಮೂಲೆ ಮೂಲೆಗಳಿಂದ ಭಕ್ತರ ದಂಡೇ ಇಲ್ಲಿಗೆ ಹರಿದುಬರುತ್ತಿದೆ. ಈ ನಡುವೆ ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ಸುತ್ತಮುತ್ತ ವಿವಿಧ ಅಖಾಡಗಳಿಗೆ ಸೇರಿದ ಬಾಬಾಗಳ ಚಮತ್ಕಾರ ಜನರನ್ನು ಸೆಳೆಯುತ್ತಿದೆ. ಇಂತಹ ಸಾಧುಗಳಲ್ಲಿ ಒಬ್ಬರಾಗಿರುವ ಕಾಂಟೇ ವಾಲೇ ಬಾಬಾನ (Kaante Wale Baba) ಸುದ್ದಿಯನ್ನು ನಾವಿಂದು ನಿಮಗೆ ಹೇಳಲಿದ್ದೇವೆ.
ಇಲ್ಲಿಗೆ ಪುಣ್ಯಸ್ನಾನಕ್ಕಾಗಿ ಆಗಮಿಸುತ್ತಿರುವ ಸಾಧು ಸಂತರು, ಬಾಬಾಗಳು ಮತ್ತು ನಾಗ ಸಾಧುಗಳದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ. ಚೋಟೂ ಬಾಬಾ, ಛಾಬಿ ವಾಲೇ ಬಾಬಾ, ಬಾವಾಂದರ್ ಮತ್ತು ಸ್ಲೆಂಡರ್ ಬಾಬಾ... ಹೀಗೆ ಹಲವಾರು ಚಿತ್ರ ವಿಚಿತ್ರ ಹೆಸರುಗಳನ್ನು ಇಟ್ಟುಕೊಂಡಿರುವ ಬಾಬಾಗಳನ್ನು ನೋಡುವುದು, ಅವರೊಂದಿಗೆ ಮಾತನಾಡುವುದೇ ಒಂದು ವಿಶೇಷ ಅನುಭವ.
ಇದಕ್ಕೊಂದು ಸೇರ್ಪಡೆಯೆಂಬಂತೆ ಕಾಂಟೇ ವಾಲೇ ಬಾಬಾ ಇದೀಗ ಕುಂಭಮೇಳದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಇವರ ನಿಜ ನಾಮಧೇಯ ರಮೇಶ್ ಕುಮಾರ್ ಮಾಂಜಿ ಎಂದಾಗಿದ್ದು, ಇವರು ಮುಳ್ಳುಗಿಡಗಳ ಮೇಲೆ ಮಲಗುವುದರಿಂದ ಇವರನ್ನು ಎಲ್ಲರೂ ಕಾಂಟೇ ಬಾಬಾ ಎಂದೇ ಕರೆಯುತ್ತಾರೆ. ಹೀಗೆ ಮುಳ್ಳು ಹಾಸಿಗೆ ಮೇಲೆ ಮಲಗಿಕೊಂಡಿರುವ ಈ ಬಾಬಾ ಕುಂಭಮೇಳಕ್ಕೆ ಆಗಮಿಸುವವರನ್ನು ಆಶ್ಚರ್ಯಚಕಿತರನ್ನಾಗಿಸುತ್ತಿದ್ದಾರೆ.
#WATCH | Prayagraj, UP | Ramesh Kumar Manjhi alias Kaante Wale Baba lays down on thorns at #MahaKumbh2025 in Prayagraj. pic.twitter.com/4emU9LwZv9
— ANI (@ANI) January 15, 2025
ʼ‘ನಾನು ಗುರುಗಳ ಸೇವಕ. ಗುರುಗಳು ನಮಗೆ ಜ್ಞಾನ ಮತ್ತು ಸಂಪೂರ್ಣ ಸಾಮರ್ಥ್ಯವನ್ನು ಕೊಟ್ಟಿದ್ದಾರೆ. ನನಗೆ ಹೀಗೆ ಮಾಡುವುದಕ್ಕೆ ದೇವರ ಸಂಪೂರ್ಣ ಅನುಗ್ರಹವೇ ಕಾರಣ. ನಾನು ಕಳೆದ 40-50 ವರ್ಷಗಳಿಂದ ಪ್ರತೀ ವರ್ಷ ಹೀಗೆ ಮಾಡಿಕೊಂಡು ಬರುತ್ತಿದ್ದೆನೆ. ಇದರಿಂದ ನನ್ನ ದೇಹಕ್ಕೆ ಉಪಯೋಗವಾಗುವುದರಿಂದ ನಾನು ಹೀಗೆ ಮಾಡುತ್ತಿದ್ದೇನೆ. ಇದರಿಂದ ನನಗೇನು ನೋವಾಗುವುದಿಲ್ಲ. ನನಗೆ ಸಿಗುವ ದಕ್ಷಿಣೆಯಲ್ಲಿ ಅರ್ಧದಷ್ಟನ್ನು ನಾನು ದಾನ ಮಾಡುತ್ತೇನೆ ಮತ್ತು ಉಳಿದ ಹಣವನ್ನು ನಾನು ನನ್ನ ಖರ್ಚಿಗೆ ಇಟ್ಟುಕೊಳ್ಳುತ್ತೇನೆ’ʼ ಎಂದು ಈ ಕಾಂಟೇ ವಾಲೇ ಬಾಬಾ ಎ.ಎನ್.ಐ. ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಮಹಾ ಕುಂಭಮೇಳದಲ್ಲಿ ಭಾರೀ ಸುದ್ದಿಯಾದ 'ಐಐಟಿ ಬಾಬಾ' ಅಭೇ ಸಿಂಗ್!
कालभैरवाष्टकम का पाठ विदेशी युवतियों से #MahaKumbh2025 #MahaKumbhMela2025 #महाकुंभ_2025_प्रयागराज pic.twitter.com/PB6uhL9sx0
— Aishwarya Pradhan ✍️ 🇮🇳 (@aishwaryam99) January 12, 2025
ಇನ್ನೊಂದೆಡೆ, ಈ ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನವನ್ನು ಮಾಡಲು 10 ದೇಶಗಳ ಅತಿಥಿಗಳು ಜ.15ರಂದು ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ. ಈ ಅತಿಥಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಮಾಡಲಿದ್ದಾರೆ.
ಈ ಗಣ್ಯರನ್ನು ಭಾರತ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಾಹ್ಯ ಪ್ರಚಾರ ಮತ್ತು ಸಾರ್ವಜನಿಕ ರಾಜ ತಾಂತ್ರಿಕ ವಿಭಾಗವು ವಿಶೇಷ ಆಹ್ವಾನ ನೀಡಿ ಕರೆಯಿಸಿಕೊಂಡಿದೆ. ಈ ಗುಂಪಿನಲ್ಲಿ ಫಿಜಿ, ಫಿನ್ ಲ್ಯಾಂಡ್, ಗಯಾನ, ಮಲೇಷಿಯಾ, ಮಾರಿಷಸ್, ಸಿಂಗಾಪರ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಥಾಯ್ಲೆಂಡ್, ಟ್ರಿನಿಡಾಡ್ ಆಂಡ್ ಟೊಬಾಗೋ, ಯುನೈಟೆಡ್ ಅರಬ್ ಎಮಿರೇಟ್ಸ್ (ಯ.ಎ.ಇ.) ಮೊದಲಾದ ದೇಶಗಳ ಅಭ್ಯಾಗತರಿದ್ದಾರೆ.
ಜ.13ರಂದು ಪ್ರಯಾಗ್ರಾಜ್‌ನ ತ್ರಿವೇಣಿ ಸಂಗಮದಲ್ಲಿ ಚಾಲನೆ ಪಡೆದುಕೊಂಡಿರುವ ಮಹಾ ಕುಂಭ ಮೇಳವು ಫೆ. 26ರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ. ಮುಂದಿನ ಪುಣ್ಯ ಸ್ನಾನದ ದಿನಾಂಕಗಳೆಂದರೆ, ಜ. 29 (ಮೌನಿ ಅಮವಾಸ್ಯೆ), ಫೆ. 3 (ವಸಂತ ಪಂಚಮಿ), ಫೆ. 12 (ಮಾಘ ಪೌರ್ಣಮಿ) ಮತ್ತು ಫೆ. (ಮಹಾ ಶಿವರಾತ್ರಿ)ರಂದು ನಡೆಯಲಿದೆ.
सनातन को मिटाने वाले सुन लें, जिस दिन तीसरी आँख खुलेगी, हमारे लिए पंद्रह सेकंड काफ़ी होंगे। हर हर महादेव!#MahaKumbh2025 #महाकुम्भ_अमृत_स्नान pic.twitter.com/CIC6ONCnDr
— कर्वज्ञम् (@eternalroute) January 14, 2025
#MahaKumbh2025 | Beautiful night visuals from Prayagraj, Uttar Pradesh
— ANI (@ANI) January 15, 2025
(Pic source - Information Department) pic.twitter.com/zTlg8x87ro
वो वस्त्र त्यागे लेकिन, उनके हृदय में ईश्वर है,
— Sejal_Voice (@SejalVoice) January 14, 2025
हम सब ने वस्त्र तो पहने, पर मन से नग्न हैं ।।
~ सेजल #MahaKumbh2025pic.twitter.com/QiVxpSSY6P