Mahakumbh Mela: ನಭದಿಂದ ಕಂಡ ಮಹಾಕುಂಭ ಮೇಳದ ಸೊಬಗು

ಜ.13ರಿಂದ ಪ್ರಯಾಗ್ ರಾಜ್ ನಲ್ಲಿ ಪ್ರಾರಂಭಗೊಂಡಿರುವ ಮಹಾಕುಂಭ ಮೇಳ ಈಗಾಗಲೇ ಹಲವಾರು ವಿಚಾರಗಳಿಂದ ದಾಖಲೆಯನ್ನೇ ನಿರ್ಮಿಸಿದೆ. ಇದೀಗ ಇಸ್ರೊ ಈ ಮಹಾ ಮೇಳದ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಇಸ್ರೋ ರಿಲೀಸ್ ಮಾಡಿದ ಮಹಾ ಕುಂಭ ಮೇಳದ ಸ್ಯಾಟಲೈಟ್ ಇಮೇಜಸ್ ಹೀಗಿದೆ..!
Profile Sushmitha Jain Jan 23, 2025 9:55 AM

ಪ್ರಯಾಗ್ ರಾಜ್: ಉತ್ತರ ಪ್ರದೇಶದ (Uttar Pradesh) ಪ್ರಯಾಗ್ ರಾಜ್ ನಲ್ಲಿರುವ (Prayagraj) ತ್ರಿವೇಣಿ ಸಂಗಮದಲ್ಲಿ ಜ.13ರಂದು ಚಾಲನೆ ಪಡೆದುಕೊಂಡಿರುವ ಮಹಾಕುಂಭ ಮೇಳ ( Maha Kumbh Mela) ಯಶಸ್ವಿಯಾಗಿ ಸಾಗುತ್ತಿದೆ. ಸಾಧು-ಸಂತರು, ರಾಜಕೀಯ ನಾಯಕರ ಸಹಿತ ಈಗಾಗಲೇ ಲಕ್ಷಾಂತರ ಮಂದಿ ಆಸ್ತಿಕರು ಗಂಗಾ-ಯಮುನಾ ಮತ್ತು ಗುಪ್ತಗಾಮಿನಿಯಾಗಿರುವ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನವನ್ನು ಮಾಡಿ ಧನ್ಯತಾ ಭಾವವನ್ನು ಹೊಂದುತ್ತಿದ್ದಾರೆ.

142 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ನಡೆಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ (Yogi Adityanath) ಸರಕಾರ ಸರ್ವ ಸುಸಜ್ಜಿತ ಸಿದ್ಧತೆಗಳನ್ನು ಮಾಡಿತ್ತು. ಸುರಕ್ಷತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಈಗಾಗಲೇ ಕುಂಭ ಮೇಳದ ವ್ಯವಸ್ಥೆಗಳು ಪ್ರಶಂಸೆಗೆ ಪಾತ್ರವಾಗಿದೆ.

ಇಷ್ಟು ಮಾತ್ರವಲ್ಲದೇ, ಕುಂಭ ಮೇಳದ ಒಟ್ಟು ಪ್ರದೇಶದಲ್ಲಿನ ಸಿದ್ಧತೆಗಳ ಹಲವಾರು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಭಾರತದ ಬಾಹ್ಯಾಕಾಶ ಸಂಸ್ಥೆ ನಮ್ಮ ಹೆಮ್ಮೆಯ ಇಸ್ರೋ (ISRO), ಮಹಾಕುಂಭ ಮೇಳ ನಡೆಯುತ್ತಿರುವ ಜಾಗದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಈ ಚಿತ್ರಗಳು ಇದಿಗ ಎಲ್ಲರನ್ನು ಆಕರ್ಷಿಸುತ್ತಿದೆ.



ಇಸ್ರೋ ಬಿಡುಗಡೆ ಮಾಡಿರುವ ಈ ಚಿತ್ರಗಳಲ್ಲಿ ಮಹಾ ಕುಂಭ ಮೇಳ ನಡೆಯುವ ಪ್ರಯಾಗ್ ರಾಜ್ ನಲ್ಲಿ ಒದಗಿಸಲಾಗಿರುವ ಮೂಲಭೂತ ಸೌಕರ್ಯಗಳ ಪಕ್ಷಿನೋಟ ಸುಂದರವಾಗಿ ವ್ಯಕ್ತವಾಗಿದೆ. ಈ ಕುಂಭ ಮೇಳ ನಡೆಯುವ 45 ದಿನಗಳ ಅವಧಿಯಲ್ಲಿ ದೇಶ-ವಿದೇಶಗಳ ಸುಮಾರು 40 ಕೋಟಿ ಆಸ್ತಿಕರು ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಭಾರತೀಯ ತಂತ್ರಜ್ಞಾನ ಸುಸಜ್ಜಿತ, ಹಗಲು ಮತ್ತು ರಾತ್ರಿಯಲ್ಲಿ ಕಾರ್ಯಾಚರಿಸುವ ಸಾಮರ್ಥ್ಯವನ್ನು ಹೊಂದಿರುವ ಆಪ್ಟಿಕಲ್ ಸ್ಯಾಟಲೈಟ್ ಗಳ ಸಹಾಯದಿಂದ, ಹೈದ್ರಾಬಾದ್ ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಪ್ರಯಾಗ್ ರಾಜ್‌ನ ಮನಮೋಹಕ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.

ಈ ಚಿತ್ರವನ್ನು ವಿಶ್ಲೇಷಣೆಗೊಳಪಡಿಸಿದಾಗ ಪ್ರಯಾಗ್ ರಾಜ್ ನಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಟೆಂಟ್ ಗಳು ಮತ್ತು ನದಿಗಳನ್ನು ದಾಟಲು ನಿರ್ಮಿಸಲಾಗಿರುವ ತಾತ್ಕಾಲಿಕ ಸೇತುವೆಗಳ ದೃಶ್ಯಗಳು ಈ ಪಕ್ಷಿನೋಟದ ಫೊಟೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Hindu Janajagruti Samiti: ಪ್ರಯಾಗರಾಜ್‌ನ ಮಹಾಕುಂಭಮೇಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯ 'ಹಿಂದೂ ಏಕತಾ ಪಾದಯಾತ್ರೆ'

ಎನ್.ಆರ್.ಎಸ್.ಸಿ.ಯ ನಿರ್ದೇಶಕರಾಗಿರುವ ಡಾ. ಪ್ರಕಾಶ್ ಚೌಹಾಣ್ ಅವರು ಹೇಳುವಂತೆ, ರಾಡಾರ್ ಸ್ಯಾಟ್ ಉಪಗ್ರಹವು, ಪ್ರಯಾಗ್ ರಾಜ್‍ ಪ್ರದೇಶವನ್ನು ಮೊಡಗಳಿಂದ ಆವೃತವಾಗಿರುವಂತೆ ಕಾಣುವಂತೆ ಚಿತ್ರಗಳನ್ನು ತೆಗೆದಿದೆ ಎಂದು ವಿಶ್ಲೇಷಿಸಿದ್ದಾರೆ.

ಇಒಎಸ್ – 04 (ಆರ್.ಐ.ಸ್ಯಾಟ್ – 1ಎ) ಟೈಮ್ ಸಿರೀಸ್ ಚಿತ್ರಗಳು (ಸೆ. 15 2023 ಮತ್ತು ಡಿ.29, 2024) ‘ಸಿ’ ಬ್ಯಾಂಡ್ ಮೈಕ್ರೋವೇವ್ ಉಪಗ್ರಹ ತೆಗೆದ ಚಿತ್ರಗಳು ಇದಾಗಿದೆ. ತನ್ನ ಉತ್ತಮ ಹವಾಮಾನ ಸಾಮರ್ಥ್ಯ ಮತ್ತು ಉತ್ತಮ ಗುಣಮಟ್ಟದ ಪರಿಣಾಮದಿಂದ ಪ್ರಯಾಗ್ ರಾಜ್ ಟೆಂಟ್ ಸಿಟಿಯ ಉತ್ತಮ ಚಿತ್ರಗಳನ್ನು ಇದು ಕಳುಹಿಸಿಕೊಟ್ಟಿದೆ. ಉತ್ತರ ಪ್ರದೇಶ ಆಡಳಿತವು ಈ ಚಿತ್ರಗಳನ್ನು ಮೇಳದಲ್ಲಿ ಸಂಭವಿಸಬಹುದಾದ ದುರ್ಘಟನೆಗಳು ಅಥವಾ ಕಾಲ್ತುಳಿತ ಪ್ರಕರಣಗಳನ್ನು ನಿಭಾಯಿಸಲು ಬಳಸುತ್ತಿದೆ.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ