Viral Video: ಚೀನಾದ ಸೂಪರ್ ಮಾರ್ಕೆಟ್‍ನಲ್ಲಿ ಕೇಳಿಬಂತು ಡಾ.ರಾಜ್ ಕುಮಾರ್ ಹಿಟ್ ಹಾಡು!
ಕನ್ನಡ ಚಿತ್ರರಂಗದ ದಂತಕಥೆ ನಟ ಡಾ.ರಾಜ್ ಕುಮಾರ್ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ನಟನೆಯಿಂದ ಮಾತ್ರವಲ್ಲ ಗಾಯನದ ಮೂಲಕವು ವಿಶ್ವದ ಅನೇಕ ದೇಶಗಳಲ್ಲಿ ಜನಪ್ರಿಯರಾಗಿದ್ದಾರೆ. ಹಾಗಾಗಿ ಚೀನಾದ ಸೂಪರ್ ಮಾರ್ಕೆಟ್‍ನಲ್ಲಿ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರ ಹಿಟ್ ಹಾಡೊಂದು ಕೇಳಿಬಂದಿದೆ. ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಬೀಜಿಂಗ್: ವರನಟ ರಾಜ್‌ಕುಮಾರ್ ತಮ್ಮ ಅಭಿನಯ, ಹಾಡುಗಳಿಂದಲೇ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ. ಇದೀಗ ಚೀನಾದ ಸೂಪರ್ ಮಾರ್ಕೆಟ್‍ನಲ್ಲಿ ಕನ್ನಡದ ನಟ ಡಾ.ರಾಜ್ ಕುಮಾರ್ ಅವರ ಹಿಟ್ ಹಾಡೊಂದು ಕೇಳಿಬಂದಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಗಮನ ಸೆಳೆದಿದೆ.ಭಾರತೀಯ ದಂಪತಿ ಚೀನಾದ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಡಾ.ರಾಜ್‍ಕುಮಾರ್ ಅವರ 'ಗಂಧದ ಗುಡಿ' ಚಿತ್ರದ 'ನಾವಾಡುವ ನುಡಿಯೇ ಕನ್ನಡ ನುಡಿ' ಹಾಡನ್ನು ಚೀನಾದ ಸೂಪರ್ ಮಾರ್ಕೆಟ್‍ನಲ್ಲಿ ಕೇಳಿ ಸಖತ್ ಆಶ್ಚರ್ಯಚಕಿತರಾಗಿದ್ದಾರಂತೆ!
ಹಾಗಾಗಿ ಅವರು ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರವೀಣ್ ಆರ್ ಎಂಬ ನೆಟ್ಟಿಗರು ಈ ವಿಡಿಯೊವನ್ನು 'ಕಪಲ್ ಆಫ್ ಕರ್ನಾಟಕ' ಎಂಬ ಇನ್‌ಸ್ಟಾಗ್ರಾಂ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಒಂದೇ ದಿನದಲ್ಲಿ ವೈರಲ್ ಆಗಿ 75,000 ಕ್ಕೂ ಹೆಚ್ಚು ವ್ಯೂವ್ಸ್ ಮತ್ತು 10,000 ಲೈಕ್‍ಗಳನ್ನು ಗಳಿಸಿದೆ. ಈ ವಿಡಿಯೊ ನೆಟ್ಟಿಗರ ಹೃದಯವನ್ನು ಗೆದ್ದಿದ್ದರಿಂದ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ 'ಹಾರ್ಟ್’ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
Bengaluru Pubs refusing to play Kannada song even when we request them!
— ಬಬ್ರುವಾಹನ (@Paarmatma) January 20, 2025
But Super Mart in China is Playing Kannada songs.#Kannada #Karnataka pic.twitter.com/mHm4qBZSVl
ಈ ಸುದ್ದಿಯನ್ನೂ ಓದಿ:Viral Video: ಫುಲ್ ಕ್ಯಾಶ್ ನೀಡಿ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ ಭಿಕ್ಷುಕ! ವೈರಲ್ ಆಯ್ತು ಈ ವಿಡಿಯೋ
ಈ ಘಟನೆ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಹಾಗಾಗಿ ಸೋಷಿಯಲ್ ಮೀಡಿಯಾ ನೆಟ್ಟಿಗರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಡಾ.ರಾಜ್ ಕುಮಾರ್ ಅವರ ಜನಪ್ರಿಯತೆ ಗಡಿಗಳನ್ನು ಮೀರಿದೆ ಎಂಬುದನ್ನು ಇದು ತೋರಿಸುತ್ತದೆ” ಎಂದು ಒಬ್ಬರು ಹೇಳಿದರೆ, ಇನ್ನೊಬ್ಬ ಅಭಿಮಾನಿ, "ಈ ಹಾಡು ಕಾಲಾತೀತವಾಗಿದೆ ಮತ್ತು ಪ್ರತಿಯೊಂದು ಸನ್ನಿವೇಶಕ್ಕೂ ಸರಿಹೊಂದುತ್ತದೆ. ಡಾ.ರಾಜ್ ಕುಮಾರ್ ಅವರ ಹೆಚ್ಚಿನ ಹಾಡುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಬೇಕು” ಎಂದಿದ್ದಾರೆ.