Viral Video: ಮರಿಗಳಿಗೆ ಹಾಲುಣಿಸುತ್ತಿದ್ದ ಬೀದಿನಾಯಿಯ ಮೇಲೆ ದಾಳಿ ಮಾಡಿದ ಪಿಟ್‌ಬುಲ್!
ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಬೀದಿ ನಾಯಿಗಳ ಮೇಲಿನ ಕ್ರೌರ್ಯ ಹೆಚ್ಚಾಗುತ್ತಿದೆ. ಮಾಲೀಕರ ನಿರ್ಲಕ್ಷ್ಯದಿಂದ ಪಿಟ್ ಬುಲ್ ಬೀದಿ ನಾಯಿಯ ಮೇಲೆ ದಾಳಿ ಮಾಡಿದ ಭೀಕರವಾದ ಘಟನೆಯೊಂದು ನಡೆದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಮಾಲೀಕನ ಮುಂದೆಯೇ ಪಿಟ್‌ಬುಲ್‌ವೊಂದು ಬೀದಿ ನಾಯಿಯ ಮೇಲೆ ಕ್ರೂರವಾಗಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದ ಭೀಕರವಾದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ನೆಟ್ಟಿಗರಲ್ಲಿ ಆಕ್ರೋಶವನ್ನು ಉಂಟುಮಾಡಿದೆ.
ವೈರಲ್ ಆದ ವಿಡಿಯೊದಲ್ಲಿ ಪಿಟ್‌ಬುಲ್ ಬೀದಿ ನಾಯಿಯನ್ನು ಕ್ರೂರವಾಗಿ ಕಚ್ಚಿದ ದೃಶ್ಯ ಸೆರೆಯಾಗಿತ್ತು. ಮಾಲೀಕಳ ಮುಂದೆಯೇ ಈ ದಾಳಿ ನಡೆದಿದ್ದರೂ ಆಕೆ ತನ್ನ ಸಾಕುನಾಯಿಯನ್ನು ತಡೆಯಲಿಲ್ಲ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಪಿಟ್‌ಬುಲ್ ಮೇಲೆ ಕಲ್ಲು ಎಸೆದು ಬೀದಿ ನಾಯಿಯನ್ನು ಉಳಿಸಲು ಪ್ರಯತ್ನಿಸಿದ್ದಾರೆ. ಪಿಟ್‌ಬುಲ್ ದಾಳಿಗೆ ಬೀದಿ ನಾಯಿಯ ಮೈಯಲ್ಲಾ ಗಾಯವಾಗಿ ರಕ್ತಸಿಕ್ತವಾಗಿತ್ತು.
ಔರಂಗಾಬಾದ್‍ನ ಚೇತನನಗರದಲ್ಲಿ ಈ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾ ನೆಟ್ಟಿಗರು ಇದರ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ಈ ಘಟನೆಯನ್ನು ಬೆಳಕಿಗೆ ತಂದಿದ್ದಾರೆ. ಈ ಪ್ರದೇಶದಲ್ಲಿ ಬೀದಿ ನಾಯಿಗಳ ಮೇಲಿನ ಕ್ರೌರ್ಯದ ದುರಂತ ಮಾದರಿ ಮುಂದುವರೆದಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮಾಲೀಕರ ಬೇಜವಾಬ್ದಾರಿ ವರ್ತನೆಯಿಂದ ಅನೇಕ ಬೀದಿ ನಾಯಿಗಳು ಈಗಾಗಲೇ ಪ್ರಾಣ ಕಳೆದುಕೊಂಡಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಘಟನೆಯ ವಿಡಿಯೊವನ್ನು "@streetdogsofbombay" ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ., ಮಾಲೀಕರ ಅಜಾಗರೂಕ ವರ್ತನೆಯಿಂದಾಗಿ ಅನೇಕ ಬೀದಿ ನಾಯಿಗಳು ಈಗಾಗಲೇ ಪ್ರಾಣ ಕಳೆದುಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಎಫ್‍ಐಆರ್ ದಾಖಲಾಗಿದ್ದರೂ, ಏನೂ ಬದಲಾಗಿಲ್ಲ. ರಾಜಕೀಯ ಬೆಂಬಲದಿಂದಾಗಿ ಮಾಲೀಕರು ಪರಾರಿಯಾಗುತ್ತಲೇ ಇದ್ದಾರೆ.
ಇನ್ನೂ ಎಷ್ಟು ಜೀವಗಳನ್ನು ಕಳೆದುಕೊಳ್ಳಬೇಕು? ಈ ಕ್ರೌರ್ಯವನ್ನು ನಿಲ್ಲಿಸಲು ಮತ್ತು ಮುಗ್ಧ ಪ್ರಾಣಿಗಳನ್ನು ರಕ್ಷಿಸಲು ಒಟ್ಟಾಗಿ ಕೆಲಸ ಮಾಡೋಣ. ನಾಯಿಗಳಿಗೆ ಮಾತನಾಡಲು ಸಾಧ್ಯವಿಲ್ಲ, ಆದರೆ ನಾವು ಅವುಗಳ ಪರವಾಗಿ ಮಾತನಾಡಬಹುದು” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಈ ಸುದ್ದಿಯನ್ನೂ ಓದಿ:Dog Attack: 4 ವರ್ಷದ ಮಗನ ಮುಂದೆಯೇ ತಂದೆಯನ್ನು ಬರ್ಬರವಾಗಿ ಕಚ್ಚಿ ಕೊಂದ ಸಾಕು ನಾಯಿಗಳು; ಶಾಕಿಂಗ್ ವಿಡಿಯೊ ವೈರಲ್
ದಾಳಿಗೊಳಗಾದ ಬೀದಿ ನಾಯಿ ನಾಯಿಮರಿಗಳಿಗೆ ಹಾಲುಣಿಸುವ ತಾಯಿಯಾಗಿದ್ದು, ಸದ್ಯ ಅದರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್‍ನಲ್ಲಿ ತಿಳಿಸಲಾಗಿದೆ.