Amy Jackson: ಬಿಕಿನಿಯಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಂಡ ದಿ ವಿಲನ್ ನಟಿ ಆ್ಯಮಿ ಜಾಕ್ಸನ್
ನಟಿ ಆ್ಯಮಿ ಅಕ್ಟೋಬರ್‌ನಲ್ಲಿ ಪ್ರೆಗ್ನೆಂಟ್ ಎನ್ನುವ ವಿಚಾರ ಘೋಷಣೆ ಮಾಡಿದ್ದು ಇದೀಗ ಬಿಕಿನಿಯಲ್ಲಿ ನಟಿ ಬೇಬಿ ಬಂಪ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ಲಂಡನ್ : ದಿ ವಿಲನ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಬೆಡಗಿ ಆ್ಯಮಿ ಜಾಕ್ಸನ್ (Amy Jackson) ನಟನೆಯಿಂದ ಕೊಂಚ ಬ್ರೇಕ್ ಪಡೆದುಕೊಂಡರೂ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಾರೆ. ಕಳೆದ ವರ್ಷ ಹಾಲಿವುಡ್ ನಟ ಎಡ್ ವೆಸ್ಟ್‌ವಿಕ್ ಜೊತೆ ಮದುವೆಯಾಗಿದ್ದ ನಟಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.ನಟಿ ಆ್ಯಮಿ ಅಕ್ಟೋಬರ್ ನಲ್ಲಿ ಪ್ರೆಗ್ನೆಂಟ್ ಎನ್ನುವ ವಿಚಾರ ಘೋಷಣೆ ಮಾಡಿದ್ದು ಇದೀಗ ಬಿಕಿನಿಯಲ್ಲಿ ನಟಿ ಬೇಬಿ ಬಂಪ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ಎರಡನೇ ಮಗುವಿನ ನಿರೀಕ್ಷೆ ಯಲ್ಲಿರುವ ನಟಿ ಆಮಿ ಜಾಕ್ಸನ್, ಪತಿ ಎಡ್ ವೆಸ್ಟ್‌ವಿಕ್ ಜೊತೆ ರಜಾದಿನ ಎಂಜಾಯ್ ಮಾಡಲು ಯುನೈಟೆಡ್ ಕಿಂಗ್‌ಡಮ್‌ನ ವೈಲ್ಡರ್‌ನೆಸ್ ರೆಸಾರ್ಟ್‌ಗೆ ತೆರಳಿದ್ದು ನಟಿ ಬಿಕಿನಿಯಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ,
ಫೋಟೋದಲ್ಲಿ ನಟಿ ಈಜುಕೊಳದ ಬಳಿ ಬಿಕಿನಿಯಲ್ಲಿ ಬೇಬಿ ಬಂಪ್ ಅನ್ನು ತೋರಿಸುವ ಪೋಟೋ ಕಾಣಬಹುದು. ಇನ್ನೊಂದು ವಿಡಿಯೊದಲ್ಲಿ ನಟಿ ಒಂದು ಗ್ಲಾಸ್ ನೀರನ್ನು ಹೊಟ್ಟೆಯ ಮೇಲೆ ಸಮತೋಲನ ಗೊಳಿಸಲು ಪ್ರಯತ್ನ ಪಟ್ಟಿದ್ದು ಇಲ್ಲಿ ಎಂಜಾಯ್ ಮಾಡಿದ ವಿಡಿಯೊವನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ್ಯಮಿ ಜಾಕ್ಸನ್ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ನಿಮ್ಮ ಮುಖದ ಅಂದ ಮತ್ತಷ್ಟು ಹೆಚ್ಚಿದೆ ಎಂದು ಅಭಿಮಾನಿ ಯೊಬ್ಬರು ಕಾಮೆಂಟ್ ಮಾಡಿದ್ದಾರೆ.ಈ ಫೋಟೊ ಗೆ ಲಕ್ಷಾಂತರ ಮಂದಿ ಲೈಕ್ ಮಾಡಿದ್ದು ಕಾಮೆಂಟ್ಗಳ ಮೂಲಕ ನಟಿಗೆ ಶುಭಕೋರಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಪ್ರಿನ್ಸಿಪಾಲ್‌ಗೆ ಆಜಾಜ್ ಹಾಕಿದ ಸ್ಟೂಡೆಂಟ್- ವಿಡಿಯೊ ಫುಲ್ ವೈರಲ್
ಈ ಮೊದಲು ನಟಿ ಹೊಟೆಲ್ ಉದ್ಯಮಿ ಜಾರ್ಜ್ ಪನಾಯೊಟೌ ಜೊತೆ 2015ರಿಂದ 2021ರವರೆಗೆ ರಿಲೇಶನ್ಸ್ ಶಿಪ್ನಲ್ಲಿ ಇದ್ದರು. ಇವರಿಬ್ಬರಿಗೂ ಒಂದು ಮಗು ಜನಿಸಿತ್ತು. 2019ರಲ್ಲಿ ಆ್ಯಮಿ ಹಾಗೂ ಜಾರ್ಜ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಅದೇ ವರ್ಷ ಆ್ಯಮಿಗೆ ಮಗು ಜನಿಸಿದ್ದು 2021ರಲ್ಲಿ ಇಬ್ಬರೂ ಬೇರೆಯಾಗಿದ್ದರು. ಆ ಬಳಿಕ ನಟಿ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿ ಎಡ್ ವೆಸ್ಟ್‌ವಿಕ್ ಜೊತೆ ಆಗಸ್ಟ್‌ನಲ್ಲಿ ವಿವಾಹವಾದರು.
ಮೊದಲು ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದ ಇವರು ಈಗ ಎರಡನೇ ಬಾರಿಗೆ ಪ್ರೆಗ್ನೆಂಟ್ ಆಗಿದ್ದಾರೆ. ಮಾಡೆಲ್ ಕಮ್ ನಟಿಯಾಗಿರುವ ಆ್ಯಮಿ ಜಾಕ್ಸನ್ ದಕ್ಷಿಣ ಭಾರತ ಚಿತ್ರೋದ್ಯಮದಲ್ಲಿ ಜನಪ್ರಿಯತೆ ಪಡೆದವರು. 2018ರಿಂದ ಆ್ಯಮಿ ಜಾಕ್ಸನ್ ಅವರು ನಟನೆಯಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದು ಈಗ ಲಂಡನ್ನಲ್ಲಿಯೇ ವಾಸವಾಗಿದ್ದು, ಮಾಡೆಲಿಂಗ್ ಜಗತ್ತಿನಲ್ಲಿ ಅವರು ಸಕ್ರಿಯರಾಗಿದ್ದಾರೆ.