ರಯಾನ್ ಇಂಟರ್‌ನ್ಯಾಷನಲ್ ಅಕಾಡೆಮಿ – ಮಾಗಡಿ ರಸ್ತೆ ಕ್ಯಾಂಪಸ್ ಉದ್ಘಾಟಿಸಿದ ರಯಾನ್ ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್
ಮಾಗಡಿ ರಸ್ತೆಗೆ ರಯಾನ್ ಇಂಟರ್‌ನ್ಯಾಷನಲ್‌ನ ಪರಂಪರೆಯನ್ನು ಪರಿಚಯಿಸಲು ನಾವು ಉತ್ಸುಕ ರಾಗಿದ್ದೇವೆ. ಈ ಅಕಾಡೆಮಿಯು ಉತ್ಕೃಷ್ಟತೆ, ಸಂಶೋಧನೆ ಮತ್ತು ಮೌಲ್ಯಾಧಾರಿತ ಶಿಕ್ಷಣದ ಕೇಂದ್ರವಾ ಗಿರಲಿದೆ. ಪ್ರತಿಯೊಂದು ಮಗುವಿನಲ್ಲೂ ಭವಿಷ್ಯದ ನಾಯಕ ಮತ್ತು ಜಾಗತಿಕ ನಾಗರಿಕ ನಾಗುವ ಸಾಮರ್ಥ್ಯ ವಿದೆ ಎಂಬುದು ನಮ್ಮ ನಂಬಿಕೆಯಾಗಿದೆ


ಬೆಂಗಳೂರು: ರಯಾನ್ ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ತನ್ನ 10ನೇ ಶೈಕ್ಷಣಿಕ ಸಂಸ್ಥೆಯಾದ ರಯಾನ್ ಇಂಟರ್‌ನ್ಯಾಷನಲ್ ಅಕಾಡೆಮಿ – ಮಾಗಡಿ ರಸ್ತೆಯನ್ನು ಅದ್ಧೂರಿಯಾಗಿ ಉದ್ಘಾಟಿಸಿದೆ. ರಯಾನ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಗ್ರೇಸ್ ಪಿಂಟೋ ಅವರು ಈ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ವಿದ್ಯಾರ್ಥಿ ಗಳು, ಪೋಷಕರು, ಶಿಕ್ಷಕರು ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಗ್ರೇಸ್ ಪಿಂಟೋ ಅವರು, “ಮಾಗಡಿ ರಸ್ತೆಗೆ ರಯಾನ್ ಇಂಟರ್‌ನ್ಯಾಷನಲ್‌ನ ಪರಂಪರೆಯನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಈ ಅಕಾಡೆಮಿಯು ಉತ್ಕೃಷ್ಟತೆ, ಸಂಶೋಧನೆ ಮತ್ತು ಮೌಲ್ಯಾಧಾರಿತ ಶಿಕ್ಷಣದ ಕೇಂದ್ರವಾಗಿರಲಿದೆ. ಪ್ರತಿಯೊಂದು ಮಗುವಿನಲ್ಲೂ ಭವಿಷ್ಯದ ನಾಯಕ ಮತ್ತು ಜಾಗತಿಕ ನಾಗರಿಕನಾಗುವ ಸಾಮರ್ಥ್ಯ ವಿದೆ ಎಂಬುದು ನಮ್ಮ ನಂಬಿಕೆಯಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್ ಆಡುವುದು ಪಕ್ಕಾ ಎಂದ ರಾಬಿನ್ ಉತ್ತಪ್ಪ!
ಈ ಸಂದರ್ಭದಲ್ಲಿ ಹಾಜರಿದ್ದ ರಯಾನ್ ಪಿಂಟೋ ಅವರು, “ಬೆಂಗಳೂರಿನಲ್ಲಿ 2000ನೇ ಇಸವಿ ಯಲ್ಲಿ ಕಾರ್ಯಾರಂಭಿಸಿದ ನಾವು ಇದೀಗ ನಮ್ಮ 10ನೇ ಶಾಲೆಯನ್ನು ಆರಂಭಿಸುತ್ತಿದ್ದೇವೆ. ಶಿಕ್ಷಣತಜ್ಞರ ಕುಟುಂಬದಿಂದ ಬಂದವರಾಗಿ ನಾವು ಯುವ ಮನಸ್ಸುಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ಬದ್ಧರಾಗಿದ್ದೇವೆ” ಎಂದು ಹೇಳಿದರು.
ರಯಾನ್ ಇಂಟರ್‌ನ್ಯಾಷನಲ್ ಅಕಾಡೆಮಿ ಮಾಗಡಿ ರಸ್ತೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಮಾ ಪಾಟೀಲ್ ಅವರು, “ಪ್ರತಿಯೊಂದು ಮಗುವಿಗೂ ಅತ್ಯುತ್ತಮ, ಸ್ಫೂರ್ತಿಯುತ ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಶೋಧಿಸಲು ಅನುವು ಮಾಡಿಕೊಡುವ ಆನಂದದಾಯಕ ಕಲಿಕಾ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ,” ಎಂದು ಹೇಳಿದರು.