Sri Lankan Navy Firing: ಗುಂಡಿನ ದಾಳಿಯಲ್ಲಿ ಐವರು ಮೀನುಗಾರರಿಗೆ ಗಾಯ; ಶ್ರೀಲಂಕಾ ರಾಯಭಾರಿಗೆ ಭಾರತದಿಂದ ಸಮನ್ಸ್
ಮಂಗಳವಾರ (ಜ. 28) ಮುಂಜಾನೆ ಡೆಲ್ಫ್ಟ್ ದ್ವೀಪದ ಸಮೀಪದಲ್ಲಿ ಶ್ರೀಲಂಕಾ ನೌಕಾಪಡೆ ಗುಂಡು ಹಾರಿಸಿದೆ. ಇದರಿಂದ ಐವರು ಭಾರತೀಯ ಮೀನುಗಾರರು ಗಾಯಗೊಂಡಿದ್ದು,ಇಬ್ಬ ರ ಸ್ಥಿತಿ ತೀರಾ ಗಂಭೀರವಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶ್ರೀಲಂಕಾ ರಾಯಭಾರಿಗೆ ಸಮನ್ಸ್ ನೀಡಿದೆ. ಅಷ್ಟೇ ಅಲ್ಲದೆ ನವ ದೆಹಲಿಯಲ್ಲಿರುವ ಶ್ರೀಲಂಕಾದ ಹಂಗಾಮಿ ಹೈಕಮಿಷನರ್ ಅವರನ್ನು ಇಂದು ಬೆಳಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಲಾಗಿದೆ.
ನವದೆಹಲಿ: ಮಂಗಳವಾರ (ಜ. 28) ಮುಂಜಾನೆ ಡೆಲ್ಫ್ಟ್ ದ್ವೀಪದ (Delft Island) ಸಮೀಪ ಶ್ರೀಲಂಕಾ (Sri Lankan) ನೌಕಾಪಡೆಯು ಗುಂಡಿನ ದಾಳಿ ನಡೆಸಿದೆ. ದಾಳಿಯಿಂದಾಗಿ ಐವರು ಭಾರತೀಯ ಮೀನುಗಾರರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ತೀರಾ ಗಂಭೀರವಾಗಿದೆ. ಶ್ರೀಲಂಕಾ ನೌಕಾಪಡೆಯ ಕ್ರಮವನ್ನು ಖಂಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (India's Ministry of External Affairs) ಶ್ರೀಲಂಕಾ ರಾಯಭಾರಿಗೆ ಸಮನ್ಸ್ (Summons) ನೀಡಿದೆ. ಅಷ್ಟೇ ಅಲ್ಲದೆ ನವ ದೆಹಲಿಯಲ್ಲಿರುವ ಶ್ರೀಲಂಕಾದ ಹಂಗಾಮಿ ಹೈಕಮಿಷನರ್ ಅವರನ್ನು ಇಂದು ಬೆಳಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಲಾಗಿದೆ.
ಇಂದು ಬೆಳಗ್ಗೆ ಡೆಲ್ಫ್ಟ್ ದ್ವೀಪದ ಸಮೀಪದಲ್ಲಿ 13 ಭಾರತೀಯ ಮೀನುಗಾರರನ್ನು ಬಂಧಿಸುವ ಸಂದರ್ಭದಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಗುಂಡಿನ ದಾಳಿಯಾಗಿದೆ ಎಂದು ತಿಳಿದು ಬಂದಿದೆ. ಮೀನುಗಾರಿಕೆಯ ಹಡಗಿನಲ್ಲಿದ್ದ 13 ಮೀನುಗಾರರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಜಾಫ್ನಾ ಟೀಚಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
India lodges strong protest on an incident involving firing by the Sri Lankan Navy during apprehension of Indian fishermen; Acting High Commissioner called by MEA: pic.twitter.com/UmmFMAOVJu
— Sidhant Sibal (@sidhant) January 28, 2025
ನವ ದೆಹಲಿಯಲ್ಲಿರುವ ಶ್ರೀಲಂಕಾದ ಹಂಗಾಮಿ ಹೈ ಕಮಿಷನರ್ ಅವರನ್ನು ಸಚಿವಾಲಯಕ್ಕೆ ಕರೆಸಿಕೊಳ್ಳುವುದರೊಂದಿಗೆ, ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಕೂಡ ಶ್ರೀಲಂಕಾ ಸರ್ಕಾರದ ವಿದೇಶಾಂಗ ಸಚಿವಾಲಯದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದೆ.
ಈ ಸುದ್ದಿಯನ್ನೂ ಓದಿ:Narendra Modi: ಪ್ರಧಾನಿ ಮೋದಿಯನ್ನೂ ಸೆಳೆದ ಕೋಲ್ಡ್ ಪ್ಲೇ ಮ್ಯೂಸಿಕ್ ಕಾನ್ಸರ್ಟ್!
ಶ್ರೀಲಂಕಾ ನೌಕಾಪಡೆಯ ಕ್ರಮವನ್ನು ಖಂಡಿಸಿರುವ ವಿದೇಶಾಂಗ ಸಚಿವಾಲಯವು "ಮೀನುಗಾರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಜೀವನೋಪಾಯದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಮಾನವೀಯತೆಯ ದೃಷ್ಟಿಯಲ್ಲಿ ಪರಿಗಣಿಸುವ ಅಗತ್ಯವನ್ನು ಭಾರತ ಸರ್ಕಾರ ಮುಂಚಿನಿಂದಲೂ ಒತ್ತಿ ಹೇಳುತ್ತಿದೆ. ಯಾವುದೇ ಸಂದರ್ಭದಲ್ಲೂ ಬಲ ಪ್ರಯೋಗ ಸ್ವೀಕಾರಾರ್ಹವಲ್ಲ. ಈ ನಿಟ್ಟಿನಲ್ಲಿ 2 ಸರ್ಕಾರಗಳ ನಡುವಿನ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಹೇಳಿದೆ.