Viral Video: ಒದ್ದಿದ್ದು ಫುಟ್ಬಾಲ್ – ಗೆದ್ದಿದ್ದು ಕೋಟ್ಯಂತರ ಹೃದಯಗಳನ್ನು; ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆಗೊಂಡ ರೀಲ್ ಇಲ್ಲಿದೆ
Viral Video: ಲೈಕ್ಸ್ ಮತ್ತು ವ್ಯೂವ್ಸ್‌ಗಾಗಿ ಇನ್‌ಸ್ಟಾಗ್ರಾಂನಲ್ಲಿ ಏನೇನೋ ಸರ್ಕಸ್ ಮಾಡುವ ಕಂಟೆಂಟ್ ಕ್ರಿಯೇಟರ್‌ಗಳ ತಲೆಗೆ ಹೊಡೆದಂತೆ ಇಲ್ಲೊಬ್ಬ ಕೇರಳದ ಯುವಕ ತನ್ನ ಫುಟ್ಬಾಲ್ ಪ್ರತಿಭೆಯನ್ನು ಅನಾವರಣಗೊಳಿಸಿ ಅನಾಮತ್ತು ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ತಿರುವನಂತಪುರಂ, ಜ. 17, 2025: ಇಂದು ಎಲ್ಲೆಡೆ ಇನ್‌ಸ್ಟಾಗ್ರಾಂ (Instagram) ರೀಲ್‌ಗಳದ್ದೇ (Reel) ಹವಾ. ಅತಿ ಹೆಚ್ಚು ವಿಕ್ಷಣೆ ಮತ್ತು ಲೈಕ್ಸ್‌ಗಳಿಗಾಗಿ ಭಿನ್ನ ಭಿನ್ನ ರೀತಿಯ ಕಂಟೆಂಟ್‌ಗಳನ್ನು ಕ್ರಿಯೇಟರ್ ಗಳು ಅಪ್‌ಲೋಡ್ ಮಾಡುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕೇರಳದಿಂದ ಬಂದಿರುವ ಸುದ್ದಿಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಕೇರಳ ಮೂಲದ ಯುವಕನೊಬ್ಬ ಮಾಡಿರುವ ರೀಲ್ ಒಂದಕ್ಕೆ ಸಿಕ್ಕಿರುವ ವಿಕ್ಷಣೆ ಜರ್ಮನಿ, ಸ್ಪೈನ್ ಮತ್ತು ಫ್ರಾನ್ಸ್ ದೇಶಗಳ ಜನಸಂಖ್ಯೆಗೆ ಸಮವಾಗಿದೆ! ತನ್ನ ಈ ರೀಲ್‌ಗೆ ಸಿಕ್ಕಿದ ವೀಕ್ಷಣೆಗೆ ಈ ಯುವಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ (Guinness World Record) ದಾಖಲೆಗೆ ಪಾತ್ರನಾಗಿದ್ದಾನೆ.
ಕೇರಳದ ಮಹಮ್ಮದ್ ರಿಜ್ವಾನ್ ಎಂಬ ಯುವಕ (@riswan_freestyle) ಎಂಬ ಇನ್‌ಸ್ಟಾಗ್ರಾಂ ಅಕೌಂಟಿನಲ್ಲಿ ಅಪ್‌ಲೋಡ್ ಮಾಡಿರುವ ರೀಲ್ ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆಗೊಳಗಾದ ರೀಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಫುಟ್ಬಾಲ್ ಆಟಗಾರನಾಗಿರುವ ಮಹಮ್ಮದ್ ರಿಜ್ವಾನ್ ಕಳೆದ ನವಂಬರ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊ ಬಹಳಷ್ಟು ವೈರಲ್ ಆಗಿದೆ. ಇದೀಗ ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆಗೊಳಗಾದ ರೀಲ್ ಎಂದು ಪ್ರಸಿದ್ಧಿಯನ್ನೂ ಪಡೆದಿದೆ.
ಈ ವಿಡಿಯೋದಲ್ಲಿರುವಂತೆ, ಮಲಪ್ಪುರಂನಲ್ಲಿರುವ (Malappuram) ಕೇರಳಂಕುಂಡು ಜಲಪಾತದ (Keralamkundu Waterfall) ಬಳಿ ರಿಜ್ವಾನ್ ಫುಟ್ಬಾಲನ್ನು ಒಂದಷ್ಟು ದೂರದಿಂದ ಒದೆಯುತ್ತಾನೆ. ಅದು ನೇರವಾಗಿ ಜಲಪಾತದ ಹಿಂದಿರುವ ಬಂಡೆಗಳ ಸಂಧಿಗೆ ಹೋಗಿ ಬೀಳುತ್ತದೆ. ಇದನ್ನು ನೋಡಿ ರಿಜ್ವಾನ್ ಸ್ವತಃ ತಾನೇ ಆಶ್ಚರ್ಯಗೊಳ್ಳುತ್ತಾನೆ. ಆತನ ಜತೆಗಿದ್ದವರೂ ಸಹ ಅಚ್ಚರಿಗೊಳಗಾಗುತ್ತಾರೆ.
ಇದನ್ನೂ ಓದಿ: Saif Ali Khan: ಸೈಫ್ ಆಲಿಖಾನ್ ಹಲ್ಲೆ ಪ್ರಕರಣ; ಸಿಸಿಟಿವಿಯಲ್ಲಿ ಸೆರೆಸಿಕ್ಕ ದುಷ್ಕರ್ಮಿ!
ಈ ವಿಡಿಯೋ ಅಪ್‌ಲೋಡ್ ಮಾಡಿದಂದಿನಿಂದ 554 ಮಿಲಿಯನ್ (55.4 ಕೋಟಿ) ವಿಕ್ಷಣೆಯನ್ನು ಪಡೆದುಕೊಂಡಿದೆ. ಇಷ್ಟು ಮಾತ್ರವಲ್ಲದೇ ಈ ವಿಡಿಯೋ 83 ಲಕ್ಷ ಲೈಕ್ಸ್ ಮತ್ತು 43 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ.
ಈ ಸಾಧನೆಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಗುರುತಿಸಿದ್ದು, ಈ ಯುವಕನಿಗೆ, ಅತೀ ಹೆಚ್ಚು ವಿಕ್ಷಣೆ ಪಡೆದ ರೀಲ್ ಎಂಬ ನೆಲೆಯಲ್ಲಿ ವಿಶ್ವ ದಾಖಲೆಯ ಪ್ರಶಸ್ತಿಯನ್ನು ನೀಡಿದೆ.
ಈ ವಿಶ್ವದಾಖಲೆ ಪ್ರಶಸ್ತಿಯನ್ನು ಪಡೆದುಕೊಂಡ ಬಳಿಕ ರಿಜ್ವಾನ್ ಈ ಪ್ರಶಸ್ತಿಯೊಂದಿಗೆ ಅದೇ ಸ್ಥಳಕ್ಕೆ ಹೋಗಿ ಇನ್ನೊಂದು ವಿಡಿಯೊ ಮಾಡಿ ಅದನ್ನು ಜ. 8ರಂದು ಅಪ್‌ಲೋಡ್ ಮಾಡಿದ್ದಾನೆ.