Viral Video: ತಾಯಿಗಾಗಿ 86 ಸಾವಿರ ರೂ. ಕೊಟ್ಟು ಚಪ್ಪಲಿ ಖರೀದಿಸಿದ ಪುತ್ರ
Viral Video: ನಾವೆಲ್ಲ ಹೆಚ್ಚೆಂದರೆ ಸಾವಿರ ರೂಪಾಯಿಗಳ ಚಪ್ಪಲಿ ಧರಿಸಬಹುದು. ಆದರೆ ಇಲ್ಲೊಬ್ಬರು ತನ್ನ ತಾಯಿಗಾಗಿ ಬರೋಬ್ಬರಿ 86 ಸಾವಿರ ರೂಪಾಯಿಗಳ ದುಬಾರಿ ಚಪ್ಪಲಿ ಖರೀದಿಸಿ ಸುದ್ದಿಯಲ್ಲಿದ್ದಾರೆ. ಈ ಚಪ್ಪಲಿಯಲ್ಲಿ ಅಂತಹದ್ದೇನಿದೆ? ಇಲ್ಲಿದೆ ವಿವರ.
ಹೊಸದಿಲ್ಲಿ: ತಾಯಿಗಾಗಿ ಲಕ್ಷುರಿ ಚಪ್ಪಲಿಯೊಂದನ್ನು ಖರೀದಿಸಿದ ಪುತ್ರನ ಸುದ್ದಿಯೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಚರ್ಚೆಯ ವಸ್ತುವಾಗಿದೆ. ಇನ್‌ಸ್ಟಾಗ್ರಾಂ (Instagram) ಬಳಕೆದಾರ ಮತ್ತು ಕಂಟೆಂಟ್ ಕ್ರಿಯೇಟರ್ (Content Creator) ಆಗಿರುವ ಯದುಪ್ರಿಯಂ ಮೆಹ್ತಾ ಎಂಬವರು ತಮ್ಮ ತಾಯಿಗಾಗಿ ಬರೋಬ್ಬರಿ 86 ಸಾವಿರ ರೂಪಾಯಿ ಮೌಲ್ಯದ ಡಿಯೋರ್ ಬ್ರ್ಯಾಂಡ್ ನ ಚಪ್ಪಲಿ ಖರೀದಿಸಿದ್ದಾರೆ ಮತ್ತು ಇದೀಗ ಈ ವಿಡಿಯೋ ವೈರಲ್ (Viral Video) ಆಗುತ್ತಿದೆ.
’86 ಸಾವಿರ ರೂಪಾಯಿ ಮೌಲ್ಯದ ಡಿಯೋರ್ (Dior) ಚಪ್ಪಲಿ. ನೀವು ಇದನ್ನು ಖರೀದಿಸುತ್ತೀರಾ?’ ಎಂದು ಈ ವಿಡಿಯೊವನ್ನು ಪೋಸ್ಟ್ ಮಾಡಿದ ಮೆಹ್ತಾ ಕ್ಯಾಪ್ಷನ್ ನಲ್ಲಿ ಬರೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮೆಹ್ತಾ ಡಿಯೋರ್ ಸ್ಟೋರ್‌ನ ಪುಟ್ಟ ದರ್ಶನವನ್ನೂ ಮಾಡಿಸಿದ್ದಾರೆ. ಇಲ್ಲಿರುವ ಕೆಲವೊಂದು ಚಪ್ಪಲಿಗಳನ್ನು ತಾನು ಇಷ್ಟಪಟ್ಟಿರುವುದಾಗಿ ಅವರು ಈ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಬಳಿಕ ತಾನು 86 ಸಾವಿರ ರೂಪಾಯಿ ಮೌಲ್ಯದ ಡಿಯೋರ್ ಸ್ಲೈಡನ್ನು ತನ್ನ ತಾಯಿಗಾಗಿ ಖರೀದಿಸುತ್ತಿದ್ದೆನೆ ಎಂದು ಹೇಳಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.
ಬಳಿಕ ಈ ಚಪ್ಪಲಿ ಬಾಕ್ಸ್ ಹೇಗೆ ಪ್ಯಾಕ್ ಆಗಿದೆ ಎಂಬುದನ್ನು ತೋರಿಸಿ ಬಳಿಕ ಇದನ್ನು ಅನ್ ಬಾಕ್ಸ್ ಮಾಡಿದ್ದಾರೆ. ಇಲ್ಲಿ ಅವರು ಲಕ್ಷುರಿ ಬ್ರ್ಯಾಂಡ್‌ನ ಕ್ಲಾಸಿಕ್ ಲುಕ್ ಅನ್ನು ತನ್ನ ವಿಕ್ಷಕರಿಗೆ ತೆರೆದಿಟ್ಟಿದ್ದಾರೆ.
ಈ ವಿಡಿಯೋದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಕೆಲವರು ಈ ಪ್ರಾಡಕ್ಟ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದು 86 ಸಾವಿರ ರೂಪಾಯಿ ಮೌಲ್ಯದ್ದದೆಂದು ಗೊತ್ತಾಗುವುದಿಲ್ಲ ಎಂದು ಕಾಮೆಂಟ್ ಹಾಕಿದ್ದರೆ, ಮತ್ತೆ ಕೆಲವರು ತಮ್ಮ ಪ್ರತಿಕ್ರಿಯೆಗಳನ್ನು ರಿಯಾಕ್ಷನ್ ಮೂಲಕ ತೋರಿಸಿದ್ದಾರೆ.
‘ಅಮ್ಮನಿಗೆ ನಿಮ್ಮ ಪ್ರೀತಿ ಮತ್ತು ಗೌರವವನ್ನು ಕೊಡಿ. ಜಗತ್ತಿನಲ್ಲಿ ಇದರ ಹೊರತಾಗಿ ಬೇರಿನ್ನೇನೂ ಇಲ್ಲ’ ಎಂದ ಒಬ್ಬರು ಹೇಳಿದ್ದಾರೆ. ‘250 ರೂಪಾಯಿಗಳಿಗೆ ಇಲ್ಲಿಂದ ಖರೀದಿಸಬಹುದಿತ್ತು’ ಎಂದು ಇನ್ನೊಬ್ಬರು ಕಾಮೆಂಟ್ ಹಾಕಿದ್ದಾರೆ. ‘ಆಕೆ ಲಕ್ಕಿ ತಾಯಿ’ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ‘ತುಂಬಾ ಚೆನ್ನಾಗಿದೆ’ ಎಂದು ಹಲವು ಕಾಮೆಂಟ್ ಬಂದಿವೆ. ಇನ್ನು ಹೆಚ್ಚಿನವರು ಈ ಪೋಸ್ಟ್‌ಗೆ ‘ಹಾರ್ಟ್ ಮತ್ತು ‘ಗಹಗಹಿಸಿ ನಗುವ’ ಇಮೋಜಿಗಳ ರಿಯಾಕ್ಷನ್ ಹಾಕಿದ್ದಾರೆ.
ಡಿಯೋರ್ ಡ್ವೇ ಸ್ಲೈಡ್ ಎಂಬುದು ಲಕ್ಷುರಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಇದು ಎರಡು ಬಣ್ಣಗಳಲ್ಲಿ ಸಿಗುತ್ತದೆ. ಈ ಚಪ್ಪಲಿಯ ಮೇಲ್ಭಾಗ ಕ್ರಿಶ್ಚಿಯನ್ ಡಿಯೋರ್ ಪ್ಯಾರಿಸ್ ಸಹಿ ಸಹಿತ ಎಂಬ್ರಾಯಿಡರಿ ಡಿಸೈನ್ ಇದೆ. ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಬೆಲೆ 775 ಡಾಲರ್ ಗಳಷ್ಟಿದೆ.