ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬೀಚ್‍ನಲ್ಲಿ ಮೈತುಂಬ ಬಟ್ಟೆ ಧರಿಸಿದ ಪ್ರವಾಸಿಗರನ್ನು ಕಂಡು ದಂಗಾದ ವಿದೇಶಿ ಪ್ರಯಾಣಿಕ

ಇತ್ತೀಚೆಗೆ ವಿದೇಶಿ ಪ್ರಯಾಣಿಕನೊಬ್ಬ ಭಾರತದ ಕಡಲ ತೀರಕ್ಕೆ ಭೇಟಿ ನೀಡಿದಾಗ ಅಲ್ಲಿ ಜನರು ಮೈತುಂಬ ಬಟ್ಟೆ ಧರಿಸಿದ್ದನ್ನು ಕಂಡು ಶಾಕ್‌ಗೆ ಒಲಗಾಗಿದ್ದಾನೆ. ಇದನ್ನು ಆತ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿದೆ.

ಬೀಚ್‌ನಲ್ಲಿ ಮೈತುಂಬ ಬಟ್ಟೆ ಧರಿಸಿದವರನ್ನು ನೋಡಿ ಈ ವಿದೇಶಿಗ ಹೇಳಿದ್ದೇನು?

Profile pavithra Jun 2, 2025 6:39 PM

ವಿದೇಶದಲ್ಲಿ ಬಹುತೇಕ ಮಹಿಳೆಯರು ಬೀಚ್‍ಗಳಲ್ಲಿ ಬಿಕಿನಿ ತೊಟ್ಟು ಓಡಾಡುತ್ತಾರೆ. ಆದರೆ ಭಾರತದಲ್ಲಿ ಸಾಮಾನ್ಯವಾಗಿ ಬೀಚ್‍ (Beach)ಗಳಲ್ಲಿ ಮೈತುಂಬ ಬಟ್ಟೆ ಹಾಕಿಕೊಂಡು ಆಟವಾಡುತ್ತಿರುತ್ತಾರೆ. ಇತ್ತೀಚೆಗೆ ವಿದೇಶಿ ಪ್ರಯಾಣಿಕನೊಬ್ಬ ಭಾರತದ ಕಡಲ ತೀರಕ್ಕೆ ಭೇಟಿ ನೀಡಿ, ಅಲ್ಲಿ ಮೈತುಂಬ ಬಟ್ಟೆ ಧರಿಸಿದ್ದ ಜನರನ್ನು ಕಂಡು ಶಾಕ್‌ ಆಗಿದ್ದಾನೆ. ಇದನ್ನು ಆತ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್(Viral News) ಆಗಿದೆ.

ಅವನ ಪೋಸ್ಟ್‌ಗೆ ಸೋಶಿಯಲ್ ಮಿಡಿಯಾ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಬೀಚ್‌ಗೆ ಬಟ್ಟೆ ಧರಿಸಿ ಹೋಗುವುದು ಭಾರತೀಯ ಸಂಸ್ಕೃತಿಯ ಭಾಗ ಎಂದು ಹೇಳಿದ್ದಾರೆ. "ನಮ್ಮ ದೇಶದಲ್ಲಿ, ಸೂರ್ಯ ತುಂಬಾ ಪ್ರಕಾಶಮಾನವಾಗಿರುತ್ತಾನೆ ಮತ್ತು ಸೂರ್ಯನ ಕಿರಣ ತುಂಬಾ ಬಲವಾಗಿರುತ್ತದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ವಿಡಿಯೊ ನೋಡಿ...

"ಪ್ರದರ್ಶನ ನಮ್ಮ ಸಂಸ್ಕೃತಿಯಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಅವಲಂಬಿತವಾಗಿರುತ್ತದೆ. ನಾವು ತುಂಬಾ ನಾಚಿಕೆ ಸ್ವಭಾವದ ಜನರು ಮತ್ತು ಬೆತ್ತಲೆಯಾಗುವುದು ನಮಗೆ ಇಷ್ಟವಾಗುವುದಿಲ್ಲ" ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.‌

ಈ ಸುದ್ದಿಯನ್ನೂ ಓದಿ:Viral Video: ನ್ಯೂಯಾರ್ಕ್‍ನ ವಾಲ್‍ಸ್ಟ್ರೀಟ್‌ನಲ್ಲಿ ಕುಣಿದು ಕುಪ್ಪಳಿಸಿದ ಭಾರತೀಯರು; ವೈರಲ್‌ ವಿಡಿಯೊ ಇಲ್ಲಿದೆ

“ಇಂಗ್ಲೆಂಡ್‌ ಮತ್ತು ಇತರ ಬಿಳಿ ಬಣ್ಣದ ಚರ್ಮವನ್ನು ಹೊಂದಿರುವ ಜನರು ವಿಟಮಿನ್ ಡಿ ಪಡೆಯಲು ಮತ್ತು ಕಂದು ಬಣ್ಣ ಪಡೆಯಲು ಬಿಕಿನಿ ಅಥವಾ ಇತರ ಶಾರ್ಟ್ಸ್ ಧರಿಸುತ್ತಾರೆ. ಭಾರತೀಯರು ಮತ್ತು ಇತರ ಏಷ್ಯಾದ ದೇಶಗಳಲ್ಲಿ ನಮಗೆ ಅದರ ಅಗತ್ಯವಿಲ್ಲ. ಏಕೆಂದರೆ ನಮಗೆ ಸುಮಾರು 365 ದಿನಗಳವರೆಗೆ ಸೂರ್ಯನ ಬೆಳಕು ಇರುತ್ತದೆ" ಇನ್ನೊಬ್ಬರು ತಿಳಿಸಿದ್ದಾರೆ.