Ravichandran: ರಿಯಾಲಿಟಿ ಷೋಗಳ ಬಗ್ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಬೇಸರ? ಅಂತಹದ್ದೇನಾಯ್ತು?
ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಜೊತೆಗೆ ರಿಯಾಲಿಟಿ ಶೋಗಳಲ್ಲೂ ಜಡ್ಜ್ ಆಗಿ ಭಾಗಿಯಾಗುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ವಾಹಿನಿಯ ಅನೇಕ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ರಿಯಾಲಿಟಿ ಶೋಗಳ ಬಗ್ಗೆ ರವಿಚಂದ್ರನ್ ಬೇಸರ ವ್ಯಕ್ತ ಪಡಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಬಳಸಲಾಗುವ ಡಬಲ್ ಮೀನಿಂಗ್ ಡೈಲಾಗ್ಸ್ ಬಗ್ಗೆ ಬೇಸರವಿದೆ ಎಂದು ರವಿಚಂದ್ರನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ (Ravichandran)ಸೂಪರ್ ಹಿಟ್ ಸಿನಿಮಾಗಳ ಮೂಲಕ ಫೇಮ್ ಗಿಟ್ಟಿಸಿಕೊಂಡವರು. ರವಿಚಂದ್ರನ್ ಕಲ್ಪನೆಯಲ್ಲಿ ಮೂಡಿದ ಸಿನಿಮಾಗಳು, ಇಂದಿಗೂ ಹಚ್ಚ ಹಸಿರಾಗಿ ಉಳಿದಿವೆ. ಇತ್ತೀಚೆಗೆ ನಟ ರವಿಚಂದ್ರನ್ ನಟನೆಯ ಜೊತೆಗೆ ರಿಯಾಲಿಟಿ ಶೋಗಳಲ್ಲೂ ತೊಡಗಿಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ವಾಹಿನಿಯ ಅನೇಕ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿದ್ದಾರೆ. ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ 2 ರಲ್ಲೂ ಜಡ್ಜ್ ಆಗಿದ್ದಾರೆ. ಇದೀಗ ಯಾಲಿಟಿ ಶೋಗಳ ಬಗ್ಗೆ ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಬಳಸಲಾಗುವ ಡಬಲ್ ಮೀನಿಂಗ್ ಡೈಲಾಗ್ಸ್ ಬಗ್ಗೆ ಬೇಸರವಿದೆ ಎಂದು ರವಿಚಂದ್ರನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ನಟ ರವಿಚಂದ್ರನ್, ನಾನು ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದೇನೆ ಬೆಳಗ್ಗೆ 10 ಗಂಟೆಗೆ ಶೋ ಶೂಟಿಂಗ್ ಆರಂಭವಾದರೆ, ರಾತ್ರಿ 11 ಗಂಟೆಗವರೆಗೂ ಶೂಟ್ ನಡೆಯುತ್ತದೆ. ಅಲ್ಲಲ್ಲಿ ಬೋರ್ ಅನಿಸುತ್ತೆ. ತುಂಬಾ ಸಿಟ್ಟು ಬರುತ್ತದೆ. ಡಬಲ್ ಮೀನಿಂಗ್ ಪದಗಳನ್ನು ಜಾಸ್ತಿ ಬಳಕೆ ಮಾಡುತ್ತಾರೆ. ಆಗ ಇದೆಲ್ಲಾ ಬೇಕಿತ್ತಾ ಎನ್ನುವ ಪ್ತಶ್ನೆ ನನ್ನಲ್ಲೂ ಮೂಡುತ್ತದೆ. ಈ ಬಗ್ಗೆ ತಮಗೂ ಅಸಮಾಧಾನ ಇದೆ. ಆದರೆ, ಅದನ್ನು ಬಿಟ್ಟು ಒಳ್ಳೆಯ ವಿಚಾರವನ್ನು ನಾವು ಆಯ್ದುಕೊಳ್ಳಬೇಕು ಎಂದಿದ್ದಾರೆ.
ಸದ್ಯ ರವಿಚಂದ್ರನ್ ಅವರು, ಜೀ ಕನ್ನಡದಲ್ಲಿ ಪ್ರಸಾರ ಕಾಣುವ ‘ಭರ್ಜರಿ ಬ್ಯಾಚುಲರ್ಸ್ 2’ನಲ್ಲಿ ತೀರ್ಪುಗಾರರಾಗಿದ್ದು ಇದೇ ವೇಳೆ ರಿಯಾಲಿಟಿ ಷೋಗಳ ಕಷ್ಟದ ಕುರಿತಾಗಿಯೂ ಹೇಳಿಕೊಂಡಿದ್ದಾರೆ. ಒಂದು ಷೋ ಮುಗಿದ ಮೇಲೆ ವಿಟಿ ಹಾಕ್ತಾರೆ. ನಾಲ್ಕು ತಿಂಗಳ ವಿಟಿ ಎರಡೂವರೆ ನಿಮಿಷ ಇರುತ್ತದೆ. ಅದೇ ರೀತಿ ಜೀವನದಲ್ಲಿ ಕೂಡ ಒಳ್ಳೆಯ ಕ್ಷಣಗಳನ್ನು ನಾವು ಸಂಪಾದಿಸಬೇಕು. ಇಡೀ ದಿನ ಚೆನ್ನಾಗಿರಲ್ಲ. ಆದರೆ, ಒಂದು ಕ್ಷಣ ಚೆನ್ನಾಗಿರುತ್ತದೆ. ಯಾವುದೇ ವಿಚಾರವಾಗಲಿ ಅದರಲ್ಲಿರುವ ಕೆಟ್ಟದ್ದನ್ನು ಸ್ವೀಕರಿಸಬಾರದು ಅದರಿಂದ ನಾವೇನು ಕಲಿಯಬೇಕು ಎಂಬುದನ್ನು ಅರ್ಥೈಸಿ ಕೊಳ್ಳಬೇಕು ಎಂದಿದ್ದಾರೆ. ರವಿಚಂದ್ರನ್ ಮಾತನಾಡಿರುವ ಈ ವಿಡಿಯೊ ವನ್ನು ಯುಐಕನ್ನಡ’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು ಇದೀಗ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ಇದನ್ನು ಓದಿ: Veera Chandrahasa Movie: ಆನೆಗುಡ್ಡೆ ಶ್ರೀವಿನಾಯಕನ ಸನ್ನಿಧಿಯಲ್ಲಿ 'ವೀರ ಚಂದ್ರಹಾಸ' ಟ್ರೈಲರ್ ರಿಲೀಸ್
ಮಕ್ಕಳ ಬಗ್ಗೆ ಕನಸು ಕಾಣಬೇಡಿ:
ಮಕ್ಕಳ ಬಗ್ಗೆ ನಾವು ಯಾವತ್ತೂ ಕನಸು ಇಟ್ಟು ಕೊಳ್ಳಬಾರದು.. ಅವರ ಕನಸಿಗೆ ನಾವು ಜೊತೆಗಾರರಾಗಬೇಕು.ಓದುವ ಟೈಮ್ ನಲ್ಲಿ ನೀವು ಓದಿದರೆ ಜೀವನ ಪೂರ್ತಿ ಆಟಾಡಬಹುದು. ಈಗ ಆಟಾಡಿದರೆ, ಜೀವನ ಪೂರ್ತಿ ನಿಮ್ಮನ್ನ ಆಟ ಆಡಿಸುತ್ತದೆ ನಾನು ಆರನೇ ಕ್ಲಾಸ್ ಫೇಲ್, ಪುಸ್ತಕ ಮುಟ್ಟಲ್ಲ ಎಂದು ಶಪತ ಮಾಡಿದ್ದೆ. 7ನೇ ಕ್ಲಾಸ್ನಲ್ಲಿ ಇದ್ದಾಗ ಟೀಚರ್ ಬಂದು ನನಗೆ ಪ್ರಶ್ನೆ ಕೇಳಿದರು. ನನಗೆ ಉತ್ತರ ಬರಲ್ಲ ಎಂದು ಅವರಿಗೆ ತಿಳಿದಿತ್ತು. ಮೊದಲ ಎರಡು ದಿನ ಬೈಸಿಕೊಂಡೆ. ಆ ಬಳಿಕ ಮೂರನೇ ದಿನ ನಾನೇ ಬೆಂಚ್ ಮೇಲೆ ಎದ್ದು ನಿಂತುಕೊಂಡೆ. ಅಂದು ಎದ್ದು ನಿಂತವನು ಇಂದು ಇಲ್ಲಿ ಬಂದು ನಿಂತುಕೊಂಡಿದ್ದೇನೆ ಎಂದು ಹೇಳಿದ್ದಾರೆ.