Meghana Raj: ಚಿರು ಒಪ್ಪಿಗೆ ಬೇಕು...ಎರಡನೇ ಮದುವೆ ಬಗ್ಗೆ ಮೆಘಾನಾ ರಾಜ್ ಹೇಳಿದ್ದೇನು ಗೊತ್ತಾ?
ನಟಿ ಮೇಘನಾ ರಾಜ್(Meghana Raj) ಎರಡನೇ ಮದುವೆ ಬಗ್ಗೆಯು ಹಲವು ಗಾಸಿಪ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದ್ದು ಮೇಘನಾ ರಾಜ್ ಈ ಪ್ರಶ್ನೆಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿ ಇಟ್ಟಿದ್ದಾರೆ. ಭವಿಷ್ಯದಲ್ಲಿ ಸಮಯ ಕೂಡಿಬಂದು ಮದುವೆ ಆಗೋದಾದ್ರೆ ಯಾರ ಒಪ್ಪಿಗೆಯನ್ನು ಮೇಘನಾ ನಿರೀಕ್ಷೆ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..


ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ (Meghana Raj) ಹಲವು ಹಿಟ್ ಸಿನಿಮಾ ನೀಡುವ ಮೂಲಕ ಫೇಮ್ ಗಿಟ್ಟಿಸಿಕೊಂಡವರು. ಸಕ್ಸಸ್‌ನ ತುತ್ತ ತುದಿಯಲ್ಲಿರುವಾಗಲೇ ದುರಾದೃಷ್ಟವಶಾತ್ ಪತಿ ಚಿರಂಜೀವಿ ಸರ್ಜಾ ಅವರುನ್ನು ಕಳೆದುಕೊಂಡವರು. ಈ ನೋವು ಮೇಘನಾಗೆ ಸದಾ ಕಾಡುತ್ತಿದ್ದರೂ ಜ್ಯೂನಿಯರ್ ಚಿರು ಎಂಟ್ರಿ ಆದ ನಂತರದಲ್ಲಿ ಖುಷಿ ಕಾಣುತ್ತಿದ್ದಾರೆ. ಇದೀಗ ನಟಿಯ ಎರಡನೇ ಮದುವೆ ಬಗ್ಗೆಯೂ ಹಲವು ಗಾಸಿಪ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದ್ದು ಮೇಘನಾ ರಾಜ್ ಈ ಪ್ರಶ್ನೆಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿ ಇಟ್ಟಿದ್ದಾರೆ. ಭವಿಷ್ಯದಲ್ಲಿ ಸಮಯ ಕೂಡಿಬಂದು ಮದುವೆ ಆಗೋದಾದ್ರೆ ಯಾರ ಒಪ್ಪಿಗೆಯನ್ನು ಮೇಘನಾ ನಿರೀಕ್ಷೆ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಈ ಬಗ್ಗೆ ಮುಕ್ತವಾಗಿ ಮಾತ ನಾಡಿದ್ದಾರೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಮೇಘನಾ ಆಗಾಗ ಮಗ ರಾಜನ್ ರಾಜ್ ಸರ್ಜಾನ ಕ್ಯೂಟ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದು 2ನೇ ಮದುವೆ ಬಗ್ಗೆ ಜನ ಏನು ಆಲೋಚಿಸುತ್ತಾರೆ ಎಂದು ನನಗೆ ತಿಳಿದಿಲ್ಲ. ನಾನು ಏನು ಮಾಡಬೇಕು ಎಂದುಕೊಳ್ಳುತ್ತೇನೆ ಅದು ನೆರವೇರುತ್ತಿಲ್ಲ. ಯಾವುದಾದರೂ ವ್ಯಕ್ತಿ ನನ್ನ ಜೀವನದಲ್ಲಿ ಬರುತ್ತಾನೋ ಇಲ್ವಾ ತಿಳಿದಿಲ್ಲ. ಆದರೆ ಚಿರುಗೆ ಈ ವ್ಯಕ್ತಿ ಸರಿ ಎನಿಸಿದರೆ ಅದನ್ನು ಮಾಡಿಸುತ್ತಾನೆ.. ಯಾವ ವ್ಯಕ್ತಿಯೂ ಸರಿ ಇಲ್ಲ ಅಂತಾ ಅನಿಸಿದರೆ ಚಿರು ಕಳಿಸೋದೆ ಇಲ್ಲ. ಆಗ ನಾನು ಹೀಗೇ ಇದ್ದು ಬಿಡುತ್ತೇನೆ ಎಂದು ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ.
ರಾಯನ್ ಅಪ್ಪನ ಬಗ್ಗೆ ಮಾತನಾಡುತ್ತಾನೆ:
ರಾಯನ್‌ಗೆ ಅಪ್ಪ ಇದ್ದಾರೆ. ಅದು ಚಿರು... ಆದರೆ ಫಿಸಿಕಲ್ ಆಗಿ ಅವನ ಜೊತೆ ಇಲ್ಲ. ದಿನ ನಿತ್ಯ ಅಪ್ಪನ ಬಗ್ಗೆ ಮಾತಾಡ್ತಾನೆ. ರಾಯನ್‌ಗೆ ತನ್ನ ಅಪ್ಪ ಅಂದರೆ ಚಿರು ಅಂತ ತಿಳಿದಿದೆ. ಒಮ್ಮೊಮ್ಮೆ ಚಿರು ಹೇಗೆ ವರ್ತಿಸಿಸುತ್ತಿದ್ದನೋ ಹಾಗೇ ರಾಯನ್ ಕೂಡ ಮಾಡ್ತಾನೆ. ರಾಯನ್‌ಗೆ ಅಪ್ಪನ ಸ್ಥಾನ ತುಂಬುವವರು ಇರಬೇಕಿತ್ತು ಅಂತ ಅನಿಸಿದ್ದುಂಟು, ಆದರೆ ಚಿರು ಯಾವತ್ತಿದ್ದರೂ ನನ್ನ ಮನದಲ್ಲಿ ಇದ್ದಾರೆ. ಹಾಗಂಥಾ ಮೇಘನಾ ರಾಜ್ ಎರಡನೇ ಮದುವೆಯಾಗುವುದಿಲ್ಲ ಅಂತ ಅಲ್ಲ. ಹಾಗೊಂದು ವೇಳೆ ಚಿರು ಹರಸಿ ಹಾರೈಸಿದರೆ ಒಪ್ಪಿಗೆ ನೀಡಿದರೆ ಖಂಡಿತ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.
ಇದನ್ನು ಓದಿ: Megha Shetty: ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ; ಸ್ಯಾಂಡಲ್‌ವುಡ್ ಜೊತೆ ಜೊತೆಯಲಿ ಕಾಲಿವುಡ್‌ನಲ್ಲೂ ಅಭಿನಯ
ಈ ಹಿಂದೆ ನಟಿ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯಿ ಕೂಡ ಮಗಳ ಎರಡನೇ ಮದುವೆ ಬಗ್ಗೆ ಮಾತನಾಡಿದ್ದರು. ಮಗಳು ಮೇಘನಾ ಎರಡನೇ ಮದುವೆ ಆಗಲಿ ಅನ್ನೋದು ನಮ್ಮೆಲ್ಲರ ಆಸೆಯೂ ಹೌದು. ಆದರೆ ಮಗಳ ಇಷ್ಟದಂತೆ ಬದುಕಲು ನಾವು ಅವಕಾಶಗಳನ್ನು ನೀಡುತ್ತೇವೆ. ಇಂದಿನವರೆಗ ತನಗೆ ಒಬ್ಬ ಸಂಗಾತಿ ಬೇಕು ಎಂದು ಒಮ್ಮೆಯೂ ಹೇಳಿಕೊಂಡಿಲ್ಲ. ನಾವೇ ಹಲವು ಬಾರಿ ಆಕೆಯ ಫ್ರೆಂಡ್ಸ್ ಕಡೆಯಿಂದ ಮದುವೆ ವಿಚಾರ ಪ್ರಸ್ತಾಪಿಸುವಂತೆ ಹೇಳಿದ್ದೇವೆ ಎಂದು ಹೇಳಿಕೊಂಡಿದ್ದರು.
2009ರಲ್ಲಿ ತೆಲುಗು ಸಿನಿಮಾ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ನೀಡಿದ ಮೇಘನಾ ಇದಾದ ಬಳಿಕ 2010ರ ‘ಪುಂಡ’ ಚಿತ್ರದ ಮೂಲಕ ಹೆಚ್ಚು ಮನರಂಜಿಸಿದರು. ನಂತರ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಮೇಘನಾ ಹೆಚ್ಚು ಹೆಸರು ಗಳಿಸಿದ್ದಾರೆ. 2013ರಲ್ಲಿ ತೆರೆಗೆ ಬಂದ ‘ರಾಜ ಹುಲಿ’ ಚಿತ್ರದಲ್ಲಿ ಯಶ್ಗೆ ಜತೆಯಾಗಿ ಮೇಘನಾ ನಟಿಸಿದ್ದರು. ಸದ್ಯ ಮಗನ ಆರೈಕೆಯಲ್ಲಿ ನಟಿ ಮೇಘನಾ ಬ್ಯುಸಿ ಇದ್ದಾರೆ.