Greatest Indian Boy Band: ಭಾರತದ ಮೊದಲ ಬಾಯ್ ಬಾಂಡ್ ರಚನೆಗೆ ಸಿದ್ಧತೆ; ನೀವೂ ಆಡಿಷನ್ ನೀಡಿ
ಭಾರತೀಯ-ಅಮೆರಿಕನ್ ಗೀತರಚನೆಕಾರ ಸವನ್ ಕೋಟೆಚಾ ಅವರು ಯೂನಿವರ್ಸಲ್ ಮ್ಯೂಸಿಕ್ ಇಂಡಿಯಾ, ರಿಪಬ್ಲಿಕ್ ರೆಕಾರ್ಡ್ಸ್ ಮತ್ತು ರೆಪ್ರೆಸೆಂಟ್ ಜತೆಗೂಡಿ ಭಾರತದ ಪಾಪ್ ಸಂಗೀತ ರಂಗವನ್ನು ಮರು ವ್ಯಾಖ್ಯಾನಿಸಲು ಒಂದು ಕ್ರಾಂತಿಕಾರಿ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. ಆಸಕ್ತರು ಆಡಿಷನ್ ನೀಡಬಹುದು.


ಹೊಸದಿಲ್ಲಿ: ಪ್ರಶಸ್ತಿ ವಿಜೇತ ಭಾರತೀಯ-ಅಮೆರಿಕನ್ ಗೀತರಚನೆಕಾರ ಸವನ್ ಕೋಟೆಚಾ (Savan Kotecha) ಅವರು ಯೂನಿವರ್ಸಲ್ ಮ್ಯೂಸಿಕ್ ಇಂಡಿಯಾ, ರಿಪಬ್ಲಿಕ್ ರೆಕಾರ್ಡ್ಸ್ ಮತ್ತು ರೆಪ್ರೆಸೆಂಟ್ ಜತೆಗೂಡಿ ಭಾರತದ ಪಾಪ್ ಸಂಗೀತ ರಂಗವನ್ನು ಮರು ವ್ಯಾಖ್ಯಾನಿಸಲು ಒಂದು ಕ್ರಾಂತಿಕಾರಿ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ದೇಶಾದ್ಯಂತ ಮತ್ತು ಅದರಾಚೆಗೆ ಪ್ರೇಕ್ಷಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ, ಭಾರತದ ಮೊದಲ ಬಾಯ್ ಬಾಂಡ್ (Greatest Indian Boy Band) ಅನ್ನು ರಚಿಸಲು ರಾಷ್ಟ್ರವ್ಯಾಪಿ ಪ್ರತಿಭಾನ್ವಿತರ ಹುಡುಕಾಟ ನಡೆಸಲಿದೆ.
17 ಬಾರಿ ಗ್ರ್ಯಾಮಿ, ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ನಾಮನಿರ್ದೇಶಿತ ಮತ್ತು ಬಹು ಬಿಲ್‌ಬೋರ್ಡ್ ಸಂಗೀತ, ಬಿಎಂಐ ಮತ್ತು ASCAP ಪ್ರಶಸ್ತಿಗಳನ್ನು ಪಡೆದಿರುವ ಸವನ್ ಕೋಟೆಚಾ, ಅರಿಯಾನಾ ಗ್ರಾಂಡೆ, ದಿ ವೀಕೆಂಡ್, ಒನ್ ಡೈರೆಕ್ಷನ್, ಜಸ್ಟಿನ್ ಬೈಬರ್ ಮೂಲಕ ಸಂಗೀತಪ್ರಿಯರ ಗಮನ ಸೆಳೆದಿದ್ದಾರೆ. ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಹದಿಹರೆಯದ ಪಾಪ್ ಆರ್ಥಿಕತೆಯನ್ನು ಬೆಳೆಸುವ ಗುರಿಯನ್ನು ಅವರು ಹೊಂದಿದ್ದಾರೆ.
ಎ & ಆರ್ ಪರಿಣತಿ, ಕಾರ್ಯತಂತ್ರದ ಮಾರ್ಕೆಟಿಂಗ್ ಮತ್ತು ಹದಿಹರೆಯದ ಪಾಪ್ ವಿಧಾನದ ಕ್ರಿಯಾತ್ಮಕ ಮಿಶ್ರಣದೊಂದಿಗೆ ಈ ಸಹಯೋಗವು ಭಾರತದ ಮುಂದಿನ ಪೀಳಿಗೆಯ ಪಾಪ್ ಸೂಪರ್‌ಸ್ಟಾರ್‌ಗಳನ್ನು ಅಭಿವೃದ್ಧಿಪಡಿಸುವತ್ತ ದಿಟ್ಟ ಹೆಜ್ಜೆ ಇಡಲಿದೆ.
“ಬಹಳ ಸಮಯದಿಂದ ಭಾರತೀಯ ಯುವಕರು ತಮ್ಮ ಪಾಪ್ ಮತ್ತು ಹದಿಹರೆಯದ ಆದರ್ಶಗಳನ್ನು ಹೊರಗಿನ ದೇಶಗಳಲ್ಲಿ ಹುಡುಕುತಿದ್ದಾರೆ. ಪ್ರಪಂಚದಾದ್ಯಂತದ ಬಾಯ್ ಬ್ಯಾಂಡ್‌ಗಳು ಇಡೀ ಪೀಳಿಗೆಯನ್ನು ರೂಪಿಸಿವೆ. ಈಗ, ಇದು ಭಾರತದ ಸರದಿ. ಭಾರತದ ವೈವಿಧ್ಯತೆ, ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುವ ಗುಂಪನ್ನು ರಚಿಸಲು ನಾವು ಬಯಸುತ್ತೇವೆ ಮತ್ತು ಅದೇ ಸಮಯದಲ್ಲಿ ಅಭೂತಪೂರ್ವ ಅಭಿಮಾನಿಗಳ ಅಲೆಯನ್ನು ಹುಟ್ಟುಹಾಕುತ್ತೇವೆ. ಅಲ್ಲದೆ ಭಾರತೀಯ ಟೀನ್ ಪಾಪ್ ಆರ್ಥಿಕತೆಗೆ ದಾರಿ ಮಾಡಿಕೊಡುತ್ತೇವೆʼʼ ಎಂದು ಸವನ್ ಕೋಟೆಚಾ ಹೇಳಿದ್ದಾರೆ.
ಯೂನಿವರ್ಸಲ್ ಮ್ಯೂಸಿಕ್ ಗ್ರೂಪ್ ಇಂಡಿಯಾ & ಸೌತ್ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಸನುಜೀತ್ ಭುಜಬಲ್ ಮಾತನಾಡಿ, "ನಮ್ಮ ಐ-ಪಾಪ್ ತಂತ್ರವು ಭಾರತದಲ್ಲಿ ಕಿರಿಯ, ಜನರಲ್ ಝಡ್ ಮತ್ತು ಜನರಲ್ ಆಲ್ಫಾ-ಚಾಲಿತ ಸೌಂಡ್‌ಸ್ಕೇಪ್ ಅನ್ನು ಬೆಳೆಸುವತ್ತ ಗಮನ ಹರಿಸಿದೆ. ಈಗ ಸವನ್ ಜತೆ ನಾವು ಭಾರತದ ಮೊದಲ ನಿಜವಾದ ಪಾಪ್ ಬಾಯ್ ಬ್ಯಾಂಡ್ ಅನ್ನು ರಚಿಸುವ ಮೂಲಕ ಈ ದೃಷ್ಟಿಕೋನವನ್ನು ಜಾಗತಿಕವಾಗಿ ಬೆಳೆಸುತ್ತಿದ್ದೇವೆ. ಇದು ಭಾರತ ಇದುವರೆಗೆ ಕಂಡ ಅತಿದೊಡ್ಡ, ಅತ್ಯಂತ ಮಹತ್ವಾಕಾಂಕ್ಷೆಯ ಪಾಪ್ ಯೋಜನೆ ಮತ್ತು ಪ್ರತಿಭಾ ಹುಡುಕಾಟವಾಗಿರುತ್ತದೆ. ಜತೆಗೆ ಭಾರತದಲ್ಲಿ ದೀರ್ಘಕಾಲೀನ ಹದಿಹರೆಯದ ಪಾಪ್ ಆರ್ಥಿಕತೆಯನ್ನು ಪರಿಚಯಿಸಲು ಮತ್ತು ನಿರ್ಮಿಸಲು ನಾವು ಬದ್ಧರಾಗಿದ್ದೇವೆʼʼ ಎಂದು ತಿಳಿಸಿದ್ದಾರೆ.
ರೆಪ್ರೆಸೆಂಟ್‌ನ ಸಂಸ್ಥಾಪಕ, ಪ್ರಮುಖ ನಿರ್ವಹಣಾ ಪಾಲುದಾರರಾದ ಆಯುಷ್ಮಾನ್ ಸಿನ್ಹಾ ಮಾತನಾಡಿ, "ಈ ಯೋಜನೆಯೊಂದಿಗೆ ಭಾರತೀಯ ಪಾಪ್ ಸಂಸ್ಕೃತಿಯ ಒಟ್ಟಾರೆ ಬೆಳವಣಿಗೆಗೆ ವೇಗ ದೊರೆಯಲಿದೆ. ಪ್ರತಿಭಾ ಅಭಿವೃದ್ಧಿಯ ಹೊಸ ಯುಗಕ್ಕೆ ಪ್ರವೇಶಿಸಲು ನಾವು ಉತ್ಸುಕರಾಗಿದ್ದೇವೆ. ಭಾರತೀಯ ಪಾಪ್ ಸಂಸ್ಕೃತಿಯಲ್ಲಿ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಬರೆಯಲು ಸವನ್, ಯುಎಂಜಿ ಇಂಡಿಯಾ ಮತ್ತು ರಿಪಬ್ಲಿಕ್ ಜತೆ ಪಾಲುದಾರರಾಗಲು ನಮಗೆ ಗೌರವವಿದೆʼʼ ಎಂದಿದ್ದಾರೆ.
ಈ ಯೋಜನೆಯು ಜುಗಾಡ್ ಮೋಷನ್ ಪಿಕ್ಚರ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಪ್ರತಿಭಾನ್ವಿತ ಸಂಗೀತಗಾರರ ಗುಂಪನ್ನು ಒಟ್ಟುಗೂಡಿಸುವುದರ ಜತೆಗೆ, ಜುಗಾಡ್ ಬ್ಯಾಂಡ್‌ನ ಸಾಮೂಹಿಕ ಗುರುತನ್ನು ರೂಪಿಸುತ್ತಿದೆ.
ಭಾರತದ ಮುಂದಿನ ದೊಡ್ಡ ಪಾಪ್ ಸೆನ್ಸೇಶನ್‌ಗಾಗಿ ಹುಡುಕಾಟ ನಡೆಯುತ್ತಿದೆ. ಮಹತ್ವಾಕಾಂಕ್ಷಿ ಸಂಗೀತಗಾರರು @greatestindianboybandನಲ್ಲಿ ಕಾಸ್ಟಿಂಗ್ ಕಾಲ್ ವಿಡಿಯೊವನ್ನು ವೀಕ್ಷಿಸುವ ಮೂಲಕ ಮತ್ತು www.greatestindianboyband.comನಲ್ಲಿ ತಮ್ಮ ಪ್ರವೇಶವನ್ನು ಸಲ್ಲಿಸುವ ಮೂಲಕ ಆಡಿಷನ್ ಮಾಡಬಹುದು. ಅರ್ಜಿದಾರರು ಆಯ್ದ ಪ್ರಶ್ನೆಗಳಿಗೆ ಉತ್ತರಿಸುವ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವಿಡಿಯೊವನ್ನು ಅಪ್‌ಲೋಡ್ ಮಾಡಬೇಕು. ಒಂದು ತಿಂಗಳ ಅವಧಿಯ ಆಯ್ಕೆ ಪ್ರಕ್ರಿಯೆಯ ನಂತರ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗುತ್ತಾರೆ.