Karnataka JDS: ಕಮಲದ ನೆರಳಿನಲ್ಲಿ ಕಮರುವ ಜೆಡಿಎಸ್
ರಾಜ್ಯ ಜೆಡಿಎಸ್ ನಾಯಕತ್ವ ಕೊರತೆ ಬಿಸಿ ನಿಧಾನವಾಗಿ ತಟ್ಟಲಾರಂಭಿಸಿದ್ದು, ಪಕ್ಷದ ಶಾಸಕರು ಮತ್ತು ಮುಖಂಡರಲ್ಲಿ ಸದ್ದಿಲ್ಲದೆ ಆತಂಕ ಶುರವಾಗಿದೆ. ಕಳೆದೊಂದು ವರ್ಷದಿಂದ ಬಿಜೆಪಿ ನೆರಳಿನಲ್ಲಿರುವ ಜೆಡಿಎಸ್, ನಿಧಾನವಾಗಿಯೇ ತನ್ನ ಬೇರುಗಳನ್ನು ಕಳಚಿ ಕೊಳ್ಳುತ್ತಿದೆಯೇನೋ ಎಂದು ಭಾಸವಾಗುವಂತೆ ಕಾರ್ಯಕರ್ತರಲ್ಲಿ ದಿಗಿಲು ಹುಟ್ಟಿಸಿದೆ.


ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಸಂಘಟನೆ ಬೇರುಗಳು ಸಡಿಲ, ಸ್ವಂತಿಕೆಯ ಕೊರತೆ, ನಾಯಕತ್ವಕ್ಕಾಗಿ ಹುಡುಕಾಟ
ರಾಜ್ಯ ಜೆಡಿಎಸ್ ನಾಯಕತ್ವ ಕೊರತೆ ಬಿಸಿ ನಿಧಾನವಾಗಿ ತಟ್ಟಲಾರಂಭಿಸಿದ್ದು, ಪಕ್ಷದ ಶಾಸಕರು ಮತ್ತು ಮುಖಂಡರಲ್ಲಿ ಸದ್ದಿಲ್ಲದೆ ಆತಂಕ ಶುರವಾಗಿದೆ. ಕಳೆದೊಂದು ವರ್ಷದಿಂದ ಬಿಜೆಪಿ ನೆರಳಿನಲ್ಲಿರುವ ಜೆಡಿಎಸ್, ನಿಧಾನವಾಗಿಯೇ ತನ್ನ ಬೇರುಗಳನ್ನು ಕಳಚಿ ಕೊಳ್ಳುತ್ತಿದೆಯೇನೋ ಎಂದು ಭಾಸವಾಗುವಂತೆ ಕಾರ್ಯಕರ್ತರಲ್ಲಿ ದಿಗಿಲು ಹುಟ್ಟಿಸಿದೆ. ಇದಕ್ಕೆ ಕಾರಣ ಕಳೆದೊಂದು ವರ್ಷದಿಂದ ಪಕ್ಷದ ಸ್ವಂತಿಕೆ ಸಾರುವ ಪ್ರಯತ್ನ ಮಾಡದಿರುವುದು ಹಾಗೂ ಸಂಘಟನೆ ಮರೆತು ಬಿಜೆಪಿ ನೆರಳ ಕಳೆದು ಹೋಗುವ ಸೂಚನೆ ನೀಡುತ್ತಿರುವುದು.
ಅಷ್ಟೇ ಏಕೆ? ಮೂವತ್ತು ವರ್ಷಗಳ ನಂತರ ಎದುರಾಳಿ ಪಾಕಿಸ್ತಾನ ವಿರುದ್ಧ ಯುದ್ಧ ನಡೆಸು ತ್ತಿದ್ದರೂ ಕೇಂದ್ರ ಸಂಪುಟದ ಪ್ರಮುಖ ಸಚಿವರಾಗಿರುವ ಕುಮಾರಸ್ವಾಮಿ ಅವರು ದೇಶದ ಬಗ್ಗೆಯಾ ಗಲಿ, ಪಕ್ಷದ ವಿಚಾರವಾಗಿಯಾಗಲಿ ತುಟಿ ಬಿಚ್ಚದಿರುವುದು ಕೂಡ ಪಕ್ಷದ ಮುಖಂಡರಲ್ಲಿ ಕೊಂಚ ದಿಗಿಲು ತಂದಿದೆ ಎನ್ನಲಾಗಿದೆ.
ಈ ಮಧ್ಯೆ, ಲೋಕಸಭಾ ಚುನಾವಣೆ ನಂತರ ಪಕ್ಷದ ರಾಜ್ಯಾಧ್ಯಕ್ಷ ಆಯ್ಕೆಯಾಗದಿರುವುದು, ಪದಾಧಿ ಕಾರಿಗಳು ನೇಮಕ ನಡೆಯದಿರುವುದು ಹಾಗೂ ಪಕ್ಷ ಸಂಘಟನೆ ಪರಿಣಾಮಕಾರಿಯಾಗಿ ನಡೆದಿರು ವುದು ಕೂಡ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮುಂದೇನು ಎನ್ನುವ ಪ್ರಶ್ನೆ ಮೂಡುವಂತಾಗಿದೆ.
ಇದನ್ನೂ ಓದಿ: JDS Meeting: ಚನ್ನಪಟ್ಟಣ ಸೋಲಿನಿಂದ ಯಾರೂ ಎದೆಗುಂದಬೇಕಿಲ್ಲ; ಕೆಚ್ಚಿನಿಂದ ಪಕ್ಷ ಕಟ್ಟೋಣ: ಎಚ್.ಎಂ. ರಮೇಶ್ ಗೌಡ
ಇದೆಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರು ಸ್ವಕ್ಷೇತ್ರ ಮಂಡ್ಯದಲ್ಲಿ ಒಂದಷ್ಟು ಪ್ರವಾಸಗಳನ್ನು ನಡೆಸಿ ಇಲಾಖೆ ಕೆಲಸದ ಬ್ಯೂಸಿ ಯಿಂದಾಗಿ ಇತ್ತೀಚಿಗೆ ಮೌನವಾಗಿರುವುದು. ಹಾಗೆಯೇ ರಾಜ್ಯ ಪ್ರವಾಸಕ್ಕೆ ಕುಮಾರಸ್ವಾಮಿ ಯಾಗಲಿ. ಸಹೋದರ ಎಚ್.ಡಿ.ರೇವಣ್ಣ ಅವರಾಗಲಿ ಹೆಚ್ಚು ಆಸಕ್ತಿ ತೋರಿಸದಿರುವುದು ಕಾರ್ಯ ಕರ್ತರಲ್ಲಿ ಅನೇಕ ರಾಜಕೀಯ ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ.
ಒಟ್ಟಾರೆ ಕುಮಾರಸ್ವಾಮಿ ಅವರ ನಂತರ ಪಕ್ಷ ಮುನ್ನಡೆಸುವವ ಹಿರಿಯ ನಾಯಕರು ಯಾರು ಎನ್ನುವ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಗದೆ ಮುಖಂಡರು ದಿಗಿಲುಗೊಂಡಿದ್ದಾರೆ. ಇಂಥ ಸನ್ನಿವೇಶನದಲ್ಲಿ ಕೆಲವು ಶಾಸಕರು ಇತ್ತ ಬಿಜೆಪಿ ಜತೆಗೆ ಹೋಗಲಾರದ ಆತ್ತ ಕಾಂಗ್ರೆಸ್ ಗೂ ಸೇರಲಾಗದೆ ಜೆಡಿಎಸ್ ನ ದಿನ ಎಣಿಸುವಂತಾಗಿದೆ ಎಂದು ಆಪ್ತರೊಂದಿಗೆ ಹೇಳಿಕೊಂಡಿzರೆ. ಸದ್ಯ ಜೆಡಿಎಸ್ ರಾಜ್ಯದಲ್ಲಿ ಎರಡನೇ ಹಂತದ ನಾಯಕರ ಕೊರತೆಯಿಂದ ಹಾಗೂ ವಿವಿಧ ಜಾತಿ, ಧರ್ಮಗಳ ಪ್ರತಿನಿಧಿಸುವ (ಲಿಂಗಾಯತರು, ಹಿಂದುಳಿದ ವರ್ಗ, ಪರಿಶಿಷ್ಟರ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರು) ನಾಯಕರಿಲ್ಲದೆ ಬಿಜೆಪಿಯ ನೆರಳಿನ ಕಳೆದು ಹೋಗುತ್ತಿದೆಯೇ ಎನ್ನುವ ಆತಂಕ ಮೂಡಿಸಿದೆ ಎಂದು ಪಕ್ಷದ ಹುzಗಳ ಮೇಲೆ ಕಣ್ಣಿಟ್ಟಿರುವ ಮುಖಂಡರು ಹೇಳುತ್ತಿದ್ದಾರೆ.
ಹಳೇ ಮೈಸೂರು ಭಾಗದ ಬೇರು ಸಡಿಲ
ರಾಜ್ಯದಲ್ಲಿ 18 ಶಾಸಕ ಬಲ ಹಾಗೂ ಎರಡು ಸಂಸದರನ್ನು ಹೊಂದಿರುವ ಜೆಡಿಎಸ್, ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ನಂತರ ಪಕ್ಷ ಬಲವರ್ದನೆಗೆ ಹೊಸ ಮಾರ್ಗ ಹುಡಕಲಿದೆ. ಆ ಮೂಲಕ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಬಿಸಿ ಮುಟ್ಟಿಸುತ್ತದೆ ಎನ್ನುವ ನಿರೀಕ್ಷೆ ಕಾರ್ಯಕರ್ತರzಗಿತ್ತು. ಆದರೆ ಲೋಕಸಭೆ ಚುನಾ ವಣೆ ಸಂದರ್ಭದಲ್ಲಿ ಬಿಜೆಪಿ ಜತೆ ಕೈಜೋಡಿಸುವ ಮೂಲಕ ಆ ಪಕ್ಷ ಹೆಚ್ಚು ಸ್ಥಾನ ಗಳಿಸುವಂತೆ ಮಾಡಿದೆ.
ಅಷ್ಟೇ ಅಲ್ಲ. ಆ ಮೂಲಕ ತನ್ನ ಪ್ರಾಬಲ್ಯದ ನೆಲೆಗಳಾದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲವಾಗುವುದಕ್ಕೆ ದಾರಿ ಮಾಡಿಕೊಟ್ಟಿತ್ತು. ಆಗಲೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ಹಿರಿಯ ನಾಯಕರ ನಡೆಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ಇದಾದ ನಂತರ ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಅವರೇನೋ ಕೇಂದ್ರ ಸಚಿವರಾಗಿದ್ದೇನೋ ಸರಿ. ಆದರಿಂದ ಪಕ್ಷಕ್ಕಾದ ಲಾಭ ಅಷ್ಟಕಷ್ಟೆ ಎನ್ನುತ್ತಾರೆ ಮುಖಂಡರು.
ಉಳಿದಂತೆ ಬಿಜೆಪಿ ಜತೆಗೂಡಿ ಜೆಡಿಎಸ್ ಮುಡಾ ಹಗರಣ ವಿರುದ್ಧ ಪಾದಯಾತ್ರೆ, ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಗಳು ಹಾಗೂ ಸರಕಾರದ ಆಡಳಿತ ವೈಖರಿ ವಿರುದ್ಧ ಟೀಕೆ, ಟಿಪ್ಪಣಿಗಳನ್ನು ಮಾಡಿತ್ತಾದರೂ ಅದು ಅಷ್ಟರ ಮಟ್ಟಿಗೆ ಪಕ್ಷದ ಪ್ರತ್ಯೇಕ ಹೋರಾಟ ಎನಿಸಿಕೊಳ್ಳಲಿಲ್ಲ. ಇದರ ಮಧ್ಯೆ, ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಲು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಮುನ್ನೆಲೆಗೆ ತಂದರೂ ಅದಕ್ಕೆ ಆರಂಭಿಕ ವಿರೋಧ ಎದುರಾಗಿದ್ದರಿಂದ ಸದ್ಯಕ್ಕೆ ಅದನ್ನೂ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಇದರ ಮಧ್ಯೆ ಆತಂಕದ ವಿಚಾರವೆಂದರೆ ಜೆಡಿಎಸ್ ಗೆಲ್ಲಿಸಿಕೊಟ್ಟ ಒಂದು ಲೋಕಸಭಾ ಸ್ಥಾನ( ಡಾ.ಸಿ.ಎನ್. ಮಂಜುನಾಥ್ ) ವನ್ನು ಬಿಜೆಪಿಗೆ ಬಿಟ್ಟುಕೊಟ್ಟ ಪರಿಣಾಮ ಈಗ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಬೇರು ಸಡಿಲವಾಗುತ್ತಿದ್ದು, ಕಾಂಗ್ರೆಸ್ ಬುಡ ಭದ್ರ ಮಾಡಿಕೊಳ್ಳುತ್ತಿದೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಸಹೋದರ ಸುರೇಶ್ ಮುನ್ನಗುತ್ತಿರುವ ರೀತಿಯೂ ಕಾರಣ ಇರಬಹುದು ಎನ್ನುತ್ತಾರೆ ಕಾರ್ಯಕರ್ತರು. ಹೀಗಾಗಿ ಜೆಡಿಎಸ್ ಮುಂಬರುವ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಾವಿಕನನ್ನು ಹುಡುಕಿ ಕೊಳ್ಳದಿದ್ದರೆ ಪಕ್ಷದ ಭವಿಷ್ಯ ಕಷ್ಟವಿದೆ ಎನ್ನುತ್ತಾರೆ ಪಕ್ಷದ ಹಿರಿಯ ನಾಯಕರು.
ಸಾರಥಿ ಸಾಲಿನಲ್ಲಿ ಯಾರಿದ್ದಾರೆ?
ಪಕ್ಷದಲ್ಲಿ 18 ಶಾಸಕರಿದ್ದರೂ ಯಾರಿಗೂ ನಾಯಕತ್ವ ವಹಿಸಲಾಗದ ಸ್ಥಿತಿಯಲ್ಲಿ ಜೆಡಿಎಸ್ ವರಿಷ್ಠರಿದ್ದಾರೆ ಎನ್ನಲಾಗಿದೆ. ಹಿರಿಯರಾದ ಬಂಡೆಪ್ಪ ಕಾಶಂಪೂರ್, ಎಚ್.ಕೆ.ಕುಮಾರಸ್ವಾಮಿ, ಸುರೇಶ್ ಬಾಬು ಮತ್ತು ಸಾ.ರ. ಮಹೇಶ್ ಅವರು ಮಾಜಿಗಳಾzರೆ. ಶಾಸಕರೂ ಹಿರಿಯರೂ ಆಗಿರುವ ಜಿ.ಟಿ.ದೇವೇಗೌಡರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಚಿಂತಿಸಿದರೆ, ಅವರು ಆಗಾಗ ಕಾಂಗ್ರೆಸ್ ಪರ ಬ್ಯಾಟ್ ಬೀಸುತ್ತಾ, ಜೆಡಿಎಸ್ ನಾಯಕತ್ವ ಟೀಕಿಸುವುದುಂಟು. ಇನ್ನು ಹಿಂದುಳಿದ ವರ್ಗದ ಹೊಣೆಯನ್ನು ಹನೂರು ಶಾಸಕ ಮಂಜುನಾಥ್ ಅವರಿಗೆ ವಹಿಸೋಣ ಎಂದರೆ ಅವರು ಕ್ಷೇತ್ರಕ್ಕಿಂತ ಬೆಂಗಳೂರಿನ ಕೆ.ಆರ್.ಪುರಕ್ಕೆ (ಕಾಂಗ್ರೆಸ್ ಗೆ ) ಹತ್ತಿರವಾಗುತ್ತಿದ್ದು, ಕಾಂಗ್ರೆಸ್ ವಿರುದ್ಧವಾಗಲಿ, ಸರಕಾರದ ವಿರುದ್ಧವಾಗಲಿ ತುಟಿ ಬಿಚ್ಚುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಯಾರಿಗೆ ನಾಯಕತ್ವ ನೀಡುವುದು ಎನ್ನುವ ಪ್ರಶ್ನೆ ವರಿಷ್ಠರದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.