IPL 2025: ತವರಿಗೆ ಮರಳಿದ ಆರ್‌ಸಿಬಿಯ ಸಾಲ್ಟ್, ಬೆಥಲ್ ಐಪಿಎಲ್‌ಗೆ ಮರಳುವುದು ಅನುಮಾನ
ಆರ್‌ಸಿಬಿ ತಂಡದ ಫಿಲ್ ಸಾಲ್ಟ್, ಜೇಕಬ್ ಬೆಥಲ್ ಸೇರಿ ಇಂಗ್ಲೆಂಡ್ ಆಟಗಾರರಾದ ಜಾಸ್ ಬಟ್ಲರ್, ಜೋಫ್ರ ಆರ್ಚರ್ ಐಪಿಎಲ್ ಸ್ಥಗಿತಗೊಂಡ ಮಾರನೇ ದಿನವೇ ತವರಿಗೆ ಮರಳಿದ್ದಾರೆ. ಇವರೆಲ್ಲ ಮತ್ತೆ ಐಪಿಎಲ್ ಆಡಲು ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಫಿಲ್ ಸಾಲ್ಟ್ ಮತ್ತು ಜೇಕ್ ಬೆಥಲ್ ಟೂರ್ನಿಯಿಂದ ಹಿಂದೆ ಸರಿದರೆ ಆರ್‌ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ.

ನವದೆಹಲಿ: ಭಾರತ-ಪಾಕಿಸ್ತಾನ(india pakistan ceasefire) ಮಧ್ಯೆ ಕದನ ವಿರಾಮ ಘೋಷಣೆಯ ಹಿನ್ನೆಲ್ಲೆಯಲ್ಲಿ ಒಂದು ವಾರ ಕಾಲ ಸ್ಥಗಿತಗೊಳಿಸಲಾಗಿದ್ದ ಐಪಿಎಲ್(IPL 2025) 18ನೇ ಆವೃತ್ತಿಯನ್ನು ಮೇ 15 ಅಥವಾ 16 ರಿಂದ ಎಂದಿನಂತೆ ನಿಗದಿತ ಸ್ಥಳದಲ್ಲಿ ಪಂದ್ಯಾವಳಿ ಮುಂದುವರಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಅದು ಅಂದುಕೊಂಡಷ್ಟು ಸುಲಭವಿಲ್ಲ. ಹೌದು, ಐಪಿಎಲ್‌ನಲ್ಲಿ ಭಾಗವಹಿಸಿರುವ ವಿದೇಶಿ ಆಟಗಾರರು ಮತ್ತು ಸಿಬ್ಬಂದಿ ವರ್ಗದ ಅನೇಕರು ಈಗಾಗಲೇ ಸ್ವದೇಶಕ್ಕೆ ಮರಳಿದ್ದಾರೆ. ಇವರೆಲ್ಲ ಮತ್ತೆ ಟೂರ್ನಿಯನ್ನು ಆಡಲು ಭಾರತಕ್ಕೆ ಬಾರದೆ ಇದ್ದರೆ ವಿದೇಶಿ ಆಟಗಾರರ ಲಭ್ಯತೆ ತೊಡಕಾಗಲಿದೆ.
ಆರ್‌ಸಿಬಿ ತಂಡದ ಫಿಲ್ ಸಾಲ್ಟ್, ಜೇಕಬ್ ಬೆಥಲ್ ಸೇರಿ ಇಂಗ್ಲೆಂಡ್ ಆಟಗಾರರಾದ ಜಾಸ್ ಬಟ್ಲರ್, ಜೋಫ್ರ ಆರ್ಚರ್ ಐಪಿಎಲ್ ಸ್ಥಗಿತಗೊಂಡ ಮಾರನೇ ದಿನವೇ ತವರಿಗೆ ಮರಳಿದ್ದಾರೆ. ಇವರೆಲ್ಲ ಮತ್ತೆ ಐಪಿಎಲ್ ಆಡಲು ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಫಿಲ್ ಸಾಲ್ಟ್ ಮತ್ತು ಜೇಕ್ ಬೆಥಲ್ ಟೂರ್ನಿಯಿಂದ ಹಿಂದೆ ಸರಿದರೆ ಆರ್‌ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ.
ಇದನ್ನೂ ಓದಿ IPL 2025: ಆರ್‌ಸಿಬಿಗೆ ಆಘಾತ, ಇನ್ನುಳಿದ ಪ್ರಮುಖ ಪಂದ್ಯಗಳಿಗೆ ಜಾಶ್ ಹೇಝಲ್‌ವುಡ್ ಅನುಮಾನ!
ಪ್ರಸಕ್ತ ಟೂರ್ನಿಯಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುವ ಮೂಲಕ ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ತಂಡದ ಈ ಗೆಲುವಿನಲ್ಲಿ ಫಿಲ್ ಸಾಲ್ಟ್ ಮತ್ತು ಜೇಕಬ್ ಬೆಥಲ್ ಅಮೂಲ್ಯ ಕೊಡುಗೆ ನೀಡುತ್ತಿದ್ದರು. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರು. ಒಂದೊಮ್ಮೆ ಇವರು ಮತ್ತೆ ಐಪಿಎಲ್ ಪಂದ್ಯದಲ್ಲಿ ಆಡದೇ ಇದ್ದರೆ ಆರ್‌ಸಿಬಿ ಹಿನ್ನಡೆಯಾಗುವುದು ಖಚಿತ. ಇನ್ನೊಂದೆಡೆ ತಂಡದ ಪ್ರಧಾನ ವೇಗಿ ಜೋಶ್ ಹ್ಯಾಲ್‌ವುಡ್ ಕೂಡ ಗಾಯಗೊಂಡು ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಅಧಿಕ ಎನ್ನಲಾಗಿದೆ.