'ಪ್ರೀತಿಯ ಪಾಕಿಸ್ತಾನಿ ಸೋದರ, ಸೋದರಿಯರೇ'; ಭಾರತದ ಸೇನಾ ದಾಳಿಗೆ ಪಾಕ್ ಬಳಿ ಕ್ಷಮೆ ಕೇಳಿದ ರಣವೀರ್
Ranveer Allahbadia: ಇತ್ತೀಚೆಗಷ್ಟೇ ರಣವೀರ್, ಸಮಯ್ ರೈನಾ ಅವರ ಯುಟ್ಯೂಬ್ ರಿಯಾಲಿಟಿ ಶೋ ‘ಇಂಡಿಯಾಸ್ ಗಾಟ್ ಲೆಟೆಂಟ್’ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆಯ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಅವರ ವಿರುದ್ಧ ಗುವಾಹಟಿ ಪೊಲೀಸರು ಪ್ರಕರಣ ಕೂಡ ದಾಖಲಿಸಿದ್ದರು.


ನವದೆಹಲಿ: ಪೋಷಕರ ಲೈಂಗಿಕತೆ ಕುರಿತು ಅಶ್ಲೀಲ ಹೇಳಿಕೆ ನೀಡಿದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ಯುಟ್ಯೂಬರ್ ರಣವೀರ್ ಅಲಹಾಬಾದಿಯಾ (Ranveer Allahbadia) ಇದೀಗ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುವ ಮೂಲಕ ಮತ್ತೊಂದು(ranveer allahbadia pakistan post) ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ರಣವೀರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ‘ಪ್ರೀತಿಯ ಪಾಕಿಸ್ತಾನಿ ಸೋದರ ಮತ್ತು ಸೋದರಿಯರೇ , ಅನೇಕ ಭಾರತೀಯರಂತೆ ನನ್ನ ಹೃದಯದಲ್ಲಿ ನಿಮ್ಮ ಬಗ್ಗೆ ದ್ವೇಷವಿಲ್ಲ. ನಮ್ಮಲ್ಲಿ ಹಲವರು ಶಾಂತಿ ಬಯಸುತ್ತಾರೆ. ನಾವು ಪಾಕಿಸ್ತಾನಿಗಳನ್ನು ಭೇಟಿಯಾದಾಗೆಲ್ಲಾ ನೀವು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತೀರಿ. ನಾವು ದ್ವೇಷವನ್ನು ಹರಡುತ್ತಿದ್ದೇವೆ ಎಂದು ನಿಮಗೆ ಅನಿಸಿದರೆ ನಾನು ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ .ಇದಕ್ಕಾಗಿ ನಾನು ಅನೇಕ ಭಾರತೀಯರಿಂದ ದ್ವೇಷ ಎದುರಿಸಬೇಕಾಗುತ್ತದೆ. ’ ಎಂದು ಬರೆದುಕೊಂಡಿದ್ದರು.
ಪಾಕ್ ಪ್ರೇಮದ ಈ ಪೋಸ್ಟ್ ಎಲ್ಲಡೆ ವೈರಲ್ ಆಗಿ ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ರಣವೀರ್ ಈ ಪೋಸ್ಟ್ ಡಿಲೀಟ್ ಮಾಡಿ ಭಾರತದ ಸೇನೆಯ ಬಗ್ಗೆ ಮೆಚ್ಚುಗೆಯ ರೀಲ್ಸ್ ಒಂದನ್ನು ಹಂಚಿಕೊಂಡು ಈ ಸಂಘರ್ಷ ಆದಷ್ಟು ಬೇಗ ಮುಗಿಯಲಿ ಎಂದು ಆಶಿಸುತ್ತೇನೆ ಎನ್ನುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
"Dil se sorry lag raha hai ki Indians nafrat phaila rahe hain"
— BALA (@erbmjha) May 10, 2025
That's what Ranveer Allahbadia said in his support to Pakistan.
The nation was right in bullying this piece of trash. pic.twitter.com/xxM2sAQeDe
ಇತ್ತೀಚೆಗಷ್ಟೇ ರಣವೀರ್, ಸಮಯ್ ರೈನಾ ಅವರ ಯುಟ್ಯೂಬ್ ರಿಯಾಲಿಟಿ ಶೋ ‘ಇಂಡಿಯಾಸ್ ಗಾಟ್ ಲೆಟೆಂಟ್’ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆಯ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಅವರ ವಿರುದ್ಧ ಗುವಾಹಟಿ ಪೊಲೀಸರು ಪ್ರಕರಣ ಕೂಡ ದಾಖಲಿಸಿದ್ದರು.
ಇದನ್ನೂ ಓದಿ India-Pakistan Conflict: ಪಹಲ್ಗಾಮ್ ದಾಳಿ, ಆಪರೇಷನ್ ಸಿಂದೂರ್, ಉಗ್ರರ ನಿರ್ಣಾಮ.. ಇಲ್ಲಿವರೆಗೆ ನಡೆದಿಷ್ಟು!
ಸಾಮಾಜಿಕ ಜಾಲತಾಣಗಳಾದ ಎಕ್ಸ್‌ನಲ್ಲಿ 6 ಲಕ್ಷ, ಇನ್‌ಸ್ಟಾಗ್ರಾಂನಲ್ಲಿ 40 ಲಕ್ಷಕ್ಕೂ ಅಧಿಕ ಹಾಗೂ ಯುಟ್ಯೂಬ್ ಚಾನಲ್‌ಗೆ 10 ಲಕ್ಷಕ್ಕೂ ಹೆಚ್ಚಿನ ಚಂದಾದಾರರನ್ನು ರಣವೀರ್ ಹೊಂದಿದ್ದಾರೆ.