Ramachari: ವೈಶಾಖಾಗೆ ಪಾಠ ಕಲಿಸಲು ಕ್ಲಾಸ್ ಇಂದ ಮಾಸ್ ಆದ ಚಾರು..!
Ramachari: ವೈಶಾಖ ಹೇಳಿದ್ದು ಸುಳ್ಳು ಹರಕೆ ಅಂತ ಇದೀಗ ಚಾರುಗೆ ಗೊತ್ತಾಗಿದ್ದು, ಸುಳ್ಳು ಹೇಳಿ ನಾಟಕ ಮಾಡುತ್ತಿರುವ ವೈಶಾಖಗೆ ಬುದ್ಧಿ ಕಲಿಸಲು ಹಳೇ ಚಾರು ಕ್ಲಾಸ್ ಇಂದ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾಳೆ
Sushmitha Jain
January 10, 2025
ಬೆಂಗಳೂರು: ಕಲರ್ಸ್ ಕನ್ನಡ(Colours Kannada)ದಲ್ಲಿ ರಾತ್ರಿ 9 ಗಂಟೆಗೆ ಮೂಡಿಬರುವ ‘ರಾಮಾಚಾರಿ’(Ramachari) ಸೀರಿಯಲ್(Serial) ಇಂದಿಗೂ ಹಾಗೆ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಅಂದ್ಹಾಗೆ ಸಿನಿಮಾ ರೇಂಜ್ನಲ್ಲಿ ಲಾಂಚ್ ಆಗಿದ್ದ ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಬಳಗ ಇದೆ. ಹಲವು ರೋಚಕ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಮುನ್ನುಗ್ಗುತ್ತಿರುವ ರಾಮಚಾರಿ(Ramachari) ಧಾರಾವಾಹಿ ದಿನದಿಂದ ದಿನ ಮಹತ್ತರ ತಿರುವಿನೊಂದಿಗೆ ಹೋಗುತ್ತಿದೆ.
ಕಿರುತೆರೆಯ ನೆಚ್ಚಿನ ಧಾರಾವಾಹಿಗಳಲ್ಲಿ ರಾಮಾಚಾರಿ ಟಾಪ್ ಲಿಸ್ಟ್ನಲ್ಲಿದ್ದು, ಈ ಧಾರಾವಾಹಿ ಎಲ್ಲಾ ಕತೆಗಿಂತ ತುಂಬಾನೇ ಭಿನ್ನ ವಿಭಿನ್ನವಾಗಿದೆ. ಮೊದಲಿನಿಂದಲೂ ಕೂಡ ರಾಮಾಚಾರಿ ಕಥೆ ಸಿಕ್ಕಾಪಟ್ಟೆ ಡಿಫ್ರೆಂಟ್ ಆಗಿ ಮೂಡಿ ಬರ್ತಿದೆ. ಸದ್ಯದ ಕತೆ ವೀಕ್ಷಕರಿಗೆ ಬಲು ಇಷ್ಟವಾಗ್ತಿದೆ. ರಾಮಾಚಾರಿಗೋಸ್ಕರ ಚಾರು ತನ್ನ ಹಳೇ ಸ್ಟೈಲ್ನ ಬಿಟ್ಟು ಒಬ್ಬ ಒಳ್ಳೆ ಗೃಹಿಣಿಯಾಗಿ ನಾರಾಯಣ ಆಚಾರ್ ಮನೆಯ ಸೊಸೆಯಾಗಿ ನಡೆದುಕೊಳ್ಳುತ್ತಿದ್ದಾಳೆ.
ಚಾರು ಒಳ್ಳೆ ರೀತಿಯಲ್ಲಿ ಬದಲಾಗಿರೋದಾಗಲಿ, ರಾಮಾಚಾರಿಯನ್ನ ಮದುವೆ ಆಗಿರೋದಾಗಲಿ, ಚಾರು ಮನೆಯಲ್ಲಿರೋದಾಗಲಿ, ಇದ್ಯಾವುದೋ ವೈಶಾಖಳಗೆ ಸುತರಾಮ್ ಇಷ್ಟ ಆಗ್ತಿಲ್ಲ. ಚಾರುಳನ್ನು ಮನೆಯವರ ಮುಂದೆ ಕೆಟ್ಟವಳಾಗಿಸೋಕೆ ವೈಶಾಖ ಶತಾಯ-ಗತಾಯ ಪ್ರಯತ್ನ ಮಾಡುತ್ತಿದ್ದ ವೈಶಾಖ ಚಾರುಲತಾಳ ಸೌಂದರ್ಯಕ್ಕೆ ಪೆಟ್ಟು ಬೀಳಬೇಕು ಅಂತ ದೇವರಿಗೆ ಹರಕೆ ಇದೆ ಅಂತ ಸುಳ್ಳು ಹೇಳಿ ಚಾರುಲತಾ ಮುಡಿ ಕೊಡುವ ಹಾಗೆ ವೈಶಾಖ ಮಾತು ತೆಗೆದುಕೊಂಡಳು. ಮಾತಿನ ಪ್ರಕಾರ ಚಾರುಲತಾ ನಡೆದುಕೊಂಡಿದ್ದಾಳೆ, ಪೂರ್ತಿ ತಲೆ ಬೋಳಿಸಿಕೊಂಡಿದ್ದಾಳೆ. ಅದನ್ನ ಕಂಡು ವೈಶಾಖ ಹಾಗೂ ರುಕ್ಮಿಣಿ ಖುಷಿ ಪಟ್ಟು ವಿಕೃತಿ ಮೆರೆದಿದ್ದರು. ಜಾನಕಿ ಎಷ್ಟೇ ಹೇಳಿದರೂ.. ಮುಡಿ ಕೊಡೋದಕ್ಕೆ ಚಾರು ಹಿಂದೇಟು ಹಾಕಲಿಲ್ಲ.
ಆದರೆ, ವೈಶಾಖ ಹೇಳಿದ್ದು ಸುಳ್ಳು ಹರಕೆ ಅಂತ ಇದೀಗ ಚಾರುಗೆ ಗೊತ್ತಾಗಿದ್ದು, ಸುಳ್ಳು ಹೇಳಿ ನಾಟಕ ಮಾಡುತ್ತಿರುವ ವೈಶಾಖಗೆ ಬುದ್ಧಿ ಕಲಿಸಲು ಹಳೇ ಚಾರು ಕ್ಲಾಸ್ ಇಂದ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾಳೆ.
ಹೌದು ಹರಕೆ ಮುಂದಿಟ್ಟುಕೊಂಡು ಚಾರುಗೆ ಕಷ್ಟು ಕೊಟ್ಟು ತಾನು ಗೆದ್ದೆ ಎಂಬ ಭ್ರಮೆಯಲ್ಲಿ ತೇಲುತ್ತಿದ್ದ ವೈಶಾಖ ಚಾರುಲತಾ ಫೋಟೋ ಮುಂದೆ ನಿಂತುಕೊಂಡ ವೈಶಾಖ ತಾನು ಮಾಡಿದ ನಾಟಕವನ್ನು ಪಿನ್ ಟು ಪಿನ್ ಹೊರಹಾಕಿದ್ದಳು. ಆದ್ರೆ ಅದೆಲ್ಲವೂ ಚಾರುಲತಾ ಕಿವಿಗೆ ಬಿದ್ದುಬಿಡ್ತು. ವೈಶಾಖಳ ಕಾಲಿಗೆ ಏನೂ ಆಗಿಲ್ಲ ಅನ್ನೋ ಸತ್ಯ ಚಾರುಗೆ ಗೊತ್ತಾಯಿತು. ಸುಳ್ಳು ಹರಕೆ ಹೇಳಿ, ಮುಡಿಕೊಡುವ ಹಾಗೆ ಮಾಡಿದ ವೈಶಾಖ ಮೇಲೆ ಚಾರುಗೆ ಅಸಹ್ಯ ಉಂಟಾಗಿದಲ್ಲದೇ ಕೋಪವು ಬಂತು. ತನ್ನ ಅಂದವನ್ನ ಹಾಳು ಮಾಡಲು ವೈಶಾಖ ಯತ್ನಿಸಿದಳು ಎಂಬ ಕಹಿಸತ್ಯ ಚಾರುಲತಾಗೆ ಗೊತ್ತಾಯ್ತು.
ಅದಕ್ಕಾಗಿಯೇ ಚಾರು ಎಲ್ಲಾ ಸತ್ಯವನ್ನು ತಿಳಿದುಕೊಳ್ಳಲು ತುಂಬಾ ಒಳ್ಳೆ ಪ್ಲ್ಯಾನ್ ಮಾಡಿದ್ದಾಳೆ. ಅವಳೇ ಈಗ ವೈಶಾಖಳ ಹಿಂದೆ ಬಿದ್ದು ಆ ಸತ್ಯ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾ ಇದ್ದಾಳೆ. ಅವಳಿಗೆ ವೈಶಾಖ ನಾಟಕ ಮಾಡುತ್ತಾ ಇದ್ದಾಳೆ ಅನ್ನೋದು ಪಕ್ಕಾ ಆಗಿದೆ.ಅದಕ್ಕೆ ವೈಶಾಖಗೆ ತನ್ನ ಹಳೇ ಸ್ಟೈಲ್‌ನಲ್ಲಿ ಸ್ಪೆಷಲ್ ಟ್ರೀಟ್‌ಮೆಂಟ್ ಕೊಡುತ್ತಿದ್ದಾಳೆ ಚಾರುಲತಾ.
ವೈಶಾಖ ಅವಳ ಸ್ಟೈಲಿನಲ್ಲಿಯೇ ಬುದ್ದಿ ಕಲಿಸಲು ಮುಂಡಾಗಿರುವ ಚಾರು ಡಮ್ಮಿ ಮಂತ್ರವಾದಿಯನ್ನು ಕರೆತಂದು ಗುರುಗಳು ಅಂತ್ಹೇಳೆ ಮಂತ್ರದಂಡದ ಸೇವೆ ಮಾಡಿಸಿದ್ದಾಳೆ. ಈ ಸೇವೆಯ ಪ್ರಕಾರ ದಿನಕ್ಕೆ ಎರಡು ಬಾರಿ ಮಂತ್ರದಂಡದಿಂದ ಜೋರಾಗಿ ವೈಶಾಖ ಕಾಲುಗಳಿಗೆ ಚಾರುಲತಾ ಏಟು ಕೊಡಬೇಕು. ಮೂರು ದಿನದೊಳಗೆ ವೈಶಾಖ ಎದ್ದು ನಿಂತರೆ ನಾಟಕ ಮಾಡ್ತಿದ್ದಾಳೆ ಅಂತರ್ಥ. ಮೂರು ದಿನ ಕಳೆದ್ಮೇಲೂ ಎದ್ದು ನಿಲ್ತಿಲ್ಲ ಅಂದ್ರೆ ಈ ಸೇವೆ ಸತ್ಯದ ದಾರಿಯಲ್ಲಿದೆ ಎಂದರ್ಥ ಅಂತ ಗುರುಗಳು ಹೇಳಿಬಿಟ್ಟಿದ್ದಾರೆ. ಹೀಗಾಗಿ, ವೈಶಾಖಗೆ ಚಾರು ಕೈಯ್ಯಿಂದ ಒದೆ ತಿನ್ನದೆ ಸದ್ಯಕ್ಕೆ ಬೇರೆ ದಾರಿಯಿಲ್ಲ.
ಒಟ್ಟಾರೆ, ಚಾರುಲತಾನ ಎದುರು ಹಾಕಿಕೊಂಡಿರುವ ವೈಶಾಖಗೆ ಈಗ ಬಿಸಿ ತುಪ್ಪವನ್ನ ಬಾಯಲ್ಲಿ ಇಟ್ಟುಕೊಂಡಂಥಾ ಪರಿಸ್ಥಿತಿ. ಉಗುಳೋಕೂ ಆಗಲ್ಲ, ನುಂಗೋಕೂ ಆಗಲ್ಲ. ಈಗ ವೈಶಾಖ ಏನು ಮಾಡ್ತಾಳೆ ಅನ್ನೋದೇ ಸಸ್ಪೆನ್ಸ್. ವೈಶಾಖಳ ನಾಟಕ ಬಯಲು ಮಾಡುವಲ್ಲಿ ಚಾರುಲತಾ ಯಶಸ್ವಿಯಾಗ್ತಾಳಾ?
ಈ ಸುದ್ದಿಯನ್ನು ಓದಿ: Bhagya Lakshmi Serial: ಉಪ್ಪಿಟ್ಟಿನ ನೈವೇದ್ಯ: ಶ್ರೇಷ್ಠಾ ಮಾಡಿದ ಅವಾಂತರಕ್ಕೆ ಪೂಜೆಯೇ ನಿಂತು ಹೋಗುತ್ತಾ?