Sreeleela: ನಟಿ ಶ್ರೀಲೀಲಾ ಅರಿಶಿನ ಶಾಸ್ತ್ರದ ಫೋಟೊ ಹಿಂದಿನ ಸೀಕ್ರೆಟ್ ರಿವೀಲ್
ಕನ್ನಡದ ʻಕಿಸ್ ʼಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ಸದ್ಯ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗಲೇ ನಟಿ ಶ್ರೀಲೀಲಾ ಅವರ ಅರಿಶಿನ ಶಾಸ್ತ್ರದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗಾಗಿ ನಟಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ ಅನ್ನೋ ಪ್ರಶ್ನೆ ಅಭಿಮಾನಿಗಳಿಗೆ ಕಾಡಿತ್ತು. ಇದೀಗ ಕೊನೆಗೂ ಆ ಫೋಟೊಗಳ ಸೀಕ್ರೆಟ್ ರಿವೀಲ್ ಆಗಿದೆ.

Sreeleela Truth Behind Viral Haldi Pics

ಬೆಂಗಳೂರು: ನಟಿ ಶ್ರೀಲೀಲಾ (Sreeleela) ಇತ್ತೀಚೆಗೆ ಸಿನಿಮಾವಲ್ಲದೆ ವೈಯಕ್ತಿಕ ವಿಚಾರದಲ್ಲೂ ಸಖತ್ ಸುದ್ದಿ ಯಲ್ಲಿ ಇದ್ದಾರೆ. ಕನ್ನಡದ ʻಕಿಸ್ʼ (Kiss) ಸಿನಿಮಾ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಶ್ರೀಲೀಲಾ ಸದ್ಯ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಅವರಿಗೆ ಭರ್ಜರಿ ಸಿನಿಮಾ ಆಫರ್ಗಳು ಬರುತ್ತಿವೆ. ಹೀಗಿರುವಾಗಲೇ ನಟಿ ಶ್ರೀಲೀಲಾ ಅವರ ಅರಿಶಿನ ಶಾಸ್ತ್ರದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗಾಗಿ ನಟಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಇತ್ತು. ಇದೀಗ ಕೊನೆಗೂ ಆ ಫೋಟೊಗಳ ಸೀಕ್ರೆಟ್ ರಿವೀಲ್ ಆಗಿದೆ.
ಜೂ. 14ರಂದು ನಟಿ ಶ್ರೀಲೀಲಾ ಅವರ ಜನ್ಮದಿನ. ಇದಕ್ಕೆ ಈಗಾಗಲೇ ಪೂರ್ವ ತಯಾರಿ ನಡೆಸಲಾಗಿದೆ. ಅಂದರೆ ಜೂನ್‌ನಲ್ಲಿ ಸಂಪೂರ್ಣ ಅವರ ಬರ್ತ್ಡೇ ಸಂಭ್ರಮದಲ್ಲಿ ಕಳೆಯಲಿದೆ. ಶ್ರೀಲೀಲಾ ಅವರ ತಾಯಿ ಮಗಳ ಹುಟ್ಟುಹಬ್ಬಕ್ಕೂ ಮುಂಚಿತವಾಗಿಯೇ ಅವರ ಪ್ರೀ-ಬರ್ತ್ ಡೇಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ತಮ್ಮ ಕೆನ್ನೆಗಳಿಗೆ ಅವರ ಅಪ್ತರು ಅರಿಶಿನವನ್ನು ಹಚ್ಚುತ್ತಿರುವ ಮತ್ತು ಅವರಿಗೆ ಆಶೀರ್ವಾದ ಮಾಡುತ್ತಿರುವ ಫೋಟೊಗಳನ್ನು ಶ್ರೀಲೀಲಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ, ʻಬಿಗ್ ಡೇʼ ಹಾಗೂ ʻಶೀಘ್ರದಲ್ಲೇ ಬರಲಿದೆʼ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಶ್ರೀಲೀಲಾ ಪ್ರೀ-ಬರ್ತ್ ಡೇಗಾಗಿ ಮನೆ ತುಂಬಾ ಹೂವಿನ ಅಲಂಕಾರ ಮಾಡಲಾಗಿದೆ. ಶ್ರೀಲೀಲಾ ಕೆನ್ನೆಗೆ ಅರಿಶಿನ ಹಚ್ಚಿಕೊಂಡು ವಧುವಿನಂತೆ ಕಂಗೊಳಿಸಿದ್ದಾರೆ. ಇದೆಲ್ಲವೂ ಅವರ ತಾಯಿ ಸ್ವರ್ಣಲತಾ ಪ್ಲ್ಯಾನಿಂಗ್ ಆಗಿದ್ದು ಅರಿಶಿನ ಶಾಸ್ತ್ರದ ಹಿಂದಿನ ಅಸಲಿ ಸತ್ಯ ಏನೆಂದು ಅವರೇ ರಿವೀಲ್ ಮಾಡಿದ್ದಾರೆ. ಸದ್ಯ ನಟಿ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಜತೆಗೆ ‘ಆಶಿಖಿ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಬಹುತೇಕ ಕಂಪ್ಲೀಟ್ ಆಗಿದೆ. ಇದರ ನಡುವೆ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ನಡುವೆ ಡೇಟಿಂಗ್ ವಂದತಿಗಳು ಕೂಡ ಹರಿದಾಡುತ್ತಿದೆ.
ಇದನ್ನು ಓದಿ: The Devil Movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼದಿ ಡೆವಿಲ್ʼ ಚಿತ್ರದ ಹೊಸ ಪೋಸ್ಟರ್ ರಿಲೀಸ್
ಸದ್ಯ ನಟಿಯ ಕ್ರೇಜ್ ಹೆಚ್ಚುತ್ತಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಹಿಟ್ ಕಂಡ ʼಪುಷ್ಪ 2ʼ ಸಿನಿಮಾದಲ್ಲಿ ʼಕಿಸಿಕ್ʼ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದರು. ಸದ್ಯ ಕಿರೀಟಿ ನಟನೆಯ ‘ಜೂನಿಯರ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಶೀಘ್ರ ಈ ಚಿತ್ರ ಬಿಡುಗಡೆಯಾಗಲಿದೆ. ಇದಲ್ಲದೆ ಇನ್ನೂ ಕೆಲವು ಸಿನಿಮಾಗಳು ಇವರ ಕೈಯಲ್ಲಿದೆ.