By Election: ಗುಜರಾತ್, ಕೇರಳ, ಪಂಜಾಬ್, ಬಂಗಾಳದಲ್ಲಿ ಉಪ ಚುನಾವಣೆ; ಅಧಿಕೃತ ದಿನಾಂಕ ಘೋಷಿಸಿದ ಚುನಾವಣಾ ಆಯೋಗ
ಗುಜರಾತ್, ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಭಾನುವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ನಾಲ್ಕು ರಾಜ್ಯಗಳ ಉಪಚುನಾವಣೆಗೆ ಜೂನ್ 19 ರಂದು ಮತದಾನ ನಡೆಯಲಿದೆ.


ನವದೆಹಲಿ: ಗುಜರಾತ್, ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಭಾನುವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಧಿಕೃತ ಅಧಿಸೂಚನೆಯ (By Election) ಪ್ರಕಾರ, ನಾಲ್ಕು ರಾಜ್ಯಗಳ ಉಪಚುನಾವಣೆಗೆ (Election Commission) ಜೂನ್ 19 ರಂದು ಮತದಾನ ನಡೆಯಲಿದೆ. ಜೂನ್ 23 ರಂದು ಮತಗಳ ಎಣಿಕೆ ನಡೆಯಲಿದೆ. ಮೇ 26 ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ಆಯೋಗ ತಿಳಿಸಿದೆ. ಜೂನ್ 2 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಜೂನ್ 3 ನಾಮಪತ್ರ ಪರಿಶೀಲನೆಗೆ ಕೊನೆಯ ದಿನಾಂಕವಾಗಿದೆ.
ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಜೂನ್ 5 ಕೊನೆಯ ದಿನಾಂಕ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕೇರಳದ ನೀಲಂಬೂರ್ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಪಿ.ವಿ. ಅನ್ವರ್ ಅವರ ರಾಜೀನಾಮೆಯಿಂದ ಉಪಚುನಾವಣೆ ನಡೆಯಲಿದೆ. ಅದರಂತೆ ಜೂನ್ 19 ರಂದು, ಕಾಡಿ (ಗುಜರಾತ್), ವಿಸಾವದರ್ (ಗುಜರಾತ್), ಲುಧಿಯಾನ ಪಶ್ಚಿಮ (ಪಂಜಾಬ್) ಮತ್ತು ಕಾಳಿಗಂಜ್ (ಪಶ್ಚಿಮ ಬಂಗಾಳ) ದಲ್ಲಿ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: Greater Bengaluru: ಗ್ರೇಟರ್ ಬೆಂಗಳೂರಿಗೆ ಮೀಸಲಾತಿ ಪ್ರಕಟಿಸಿ ಶೀಘ್ರದಲ್ಲೇ ಚುನಾವಣೆ: ಡಿಸಿಎಂ ಡಿಕೆಶಿ
ಬಿಹಾರ ಚುನಾವಣೆ
ಇದೇ ಬರುವ ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಬೇಕಿದೆ. 2025 ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಮೈತ್ರಿಕೂಟ ಈಗಾಗಲೇ ತಿಳಿಸಿದೆ.