Pahalgam Terror Attack: ಏ16 ಕ್ಕೆ ಮದುವೆ, 22 ಕ್ಕೆ ದುರಂತ; ಪತಿ ಪಾರ್ಥೀವ ಶರೀರಕ್ಕೆ ಸೆಲ್ಯುಟ್ ಹೊಡೆದು ಬೀಳ್ಕೊಟ್ಟ ನೌಕಾಧಿಕಾರಿ ಪತ್ನಿ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಈ ವರೆಗೆ 26 ಮಂದಿ ಮೃತಪಟ್ಟಿದ್ದಾರೆ. ಕಳೆದ ವಾರವಷ್ಟೇ ವಿವಾಹವಾಗಿ ಮಧುಚಂದ್ರಕ್ಕೆ ತೆರಳಿದ್ದ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಕೂಡ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಕಳೆದ ವಾರ ಏಪ್ರಿಲ್ 16 ರಂದು ಈ ಜೋಡಿ ವಿವಾಹವಾಗಿದ್ದರು. ಹಿಮಾಂನಿ ಹಾಗೂ ವಿನಯ್ ಜೊತೆಯಲ್ಲಿ ಇದ್ದಾಗಲೇ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.


ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಈ ವರೆಗೆ 26 ಮಂದಿ ಮೃತಪಟ್ಟಿದ್ದಾರೆ. ಕಳೆದ ವಾರವಷ್ಟೇ ವಿವಾಹವಾಗಿ ಮಧುಚಂದ್ರಕ್ಕೆ ತೆರಳಿದ್ದ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಕೂಡ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. (Pahalgam Terror Attack) ಹನಿಮೂನ್‌ಗೆಂದು ಅವರು ತಮ್ಮ ಪತ್ನಿಯ ಜೊತೆ ಕಾಶ್ಮೀರಕ್ಕೆ ತೆರಳಿದ್ದರು. ಪತ್ನಿಯ ಕಣ್ಣೆದುರೇ ಪತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಎರಡು ವರ್ಷಗಳ ಹಿಂದೆ ಭಾರತೀಯ ನೌಕಾಪಡೆಯಲ್ಲಿ ನಿಯೋಜನೆಗೊಂಡಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್, ತಮ್ಮ ಪತ್ನಿ ಹಿಮಾಂಶಿ ಜೊತೆ ಹನಿಮೂನ್‌ಗೆ ಹೋಗಿದ್ದಾಗ ಭಯೋತ್ಪಾದಕರಿಂದ ಹತ್ಯೆಗೀಡಾದರು. ಕಳೆದ ವಾರ ಏಪ್ರಿಲ್ 16 ರಂದು ಈ ಜೋಡಿ ವಿವಾಹವಾಗಿದ್ದರು. ಹಿಮಾಂನಿ ಹಾಗೂ ವಿನಯ್ ಜೊತೆಯಲ್ಲಿ ಇದ್ದಾಗಲೇ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.
ವಿನಯ್ ಪಾರ್ಥೀವ ಶರೀರ ದೆಹಲಿಗೆ ಆಗಮಿಸಿದ್ದು, ಪತ್ನಿ ಹಿಮಾಂಶಿ ತನ್ನ ಪತಿ ಶವದ ಎದುರು ಗೋಳಾಡಿದ್ದಾರೆ. ಹರಿಯಾಣದ ಕರ್ನಾಲ್‌ನ 26 ವರ್ಷದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಏಪ್ರಿಲ್ 16 ರಂದು ಹಿಮಾಂಶಿ ನರ್ವಾಲ್ ಅವರನ್ನು ವಿವಾಹವಾದರು. ಮೂರು ದಿನಗಳ ನಂತರ ಆರತಕ್ಷತೆ ನಡೆಯಿತು ಮತ್ತು ದಂಪತಿಗಳು ಸೋಮವಾರ ಕಾಶ್ಮೀರಕ್ಕೆ ತೆರಳಿದ್ದರು. ಮಂಗಳವಾರ ಅವರು ಬೈಸರನ್ ಕಣಿವೆ ಪ್ರದೇಶದಲ್ಲಿ ಭೇಲ್‌ಪುರಿ ತಿನ್ನುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಹಿಮಾಂಶಿ ಅವರು ತಮ್ಮ ಪತಿಯ ಪಾರ್ಥಿವ ಶರೀರದ ಎದುರು ನಿಂತು ಸೆಲ್ಯುಟ್ ಮಾಡಿ ಜೈ ಹಿಂದ್ ಎಂದು ಹೇಳಿ ವಿದಾಯವನ್ನು ಸಲ್ಲಿಸಿದ್ದಾರೆ.
#WATCH | Delhi | Indian Navy Lieutenant Vinay Narwal's wife bids an emotional farewell to her husband, who was killed in the Pahalgam terror attack
— ANI (@ANI) April 23, 2025
The couple got married on April 16. pic.twitter.com/KJpLEeyxfJ
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ದಾಳಿ ಹಿಂದಿನ ರೆಸಿಸ್ಟೆನ್ಸ್ ಫ್ರಂಟ್ ಎಂದರೇನು? ಮಾಸ್ಟರ್‌ಮೈಂಡ್ ಸೈಫುಲ್ಲಾ ಖಾಲಿದ್ ಯಾರು?
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ... ನಾವು ಅವರನ್ನು ಎಲ್ಲ ರೀತಿಯಲ್ಲೂ ಹೆಮ್ಮೆಪಡುವಂತೆ ಮಾಡುತ್ತೇವೆ," ಎಂದು ಅವರು ಶವಪೆಟ್ಟಿಗೆಯನ್ನು ತಬ್ಬಿಕೊಳ್ಳುತ್ತಾ ಅಳುತ್ತಾ ಹೇಳಿದರು. ವಿನಯ್ ನರ್ವಾಲ್ ಅವರ ಯುನಿಫಾರ್ಮ್ ಕ್ಯಾಪ್ ಧರಿಸಿ, ಸೆಲ್ಯುಟ್ ಮಾಡಿದ್ದಾರೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಉಪಸ್ಥಿತರಿದ್ದರು. ಎರಡು ವರ್ಷಗಳ ಹಿಂದೆ ನೌಕಾಪಡೆಗೆ ಸೇರಿ ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದ ನರ್ವಾಲ್, ಮಿನಿ ಸ್ವಿಟ್ಜರ್ಲೆಂಡ್' ಎಂದೂ ಕರೆಯಲ್ಪಡುವ ಬೈಸರನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಗುಪ್ತಚರ ಬ್ಯೂರೋ ಅಧಿಕಾರಿ ಸೇರಿದಂತೆ 26 ಜನರಲ್ಲಿ ಒಬ್ಬರು.