ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Robert Vadra: "ಮುಸ್ಲಿಮರಿಗೆ ದುರ್ಬಲ ಅನ್ನೋ ಭಾವನೆ ಇದೆ"; ಪಹಲ್ಗಾಮ್‌ ದಾಳಿ ಕುರಿತು ವಿವಾದ ಸೃಷ್ಟಿಸಿದ ಸೋನಿಯಾ ಗಾಂಧಿ ಅಳಿಯ

ಪ್ರವಾಸಿಗರ ಸ್ವರ್ಗ ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಯಾಗಿದೆ. ಧರ್ಮಾಂದರು ಪಹಲ್ಗಾಮ್‌ನಲ್ಲಿ ರಕ್ತದ ಓಕುಳಿಯನ್ನೇ ಹರಿಸಿದ್ದಾರೆ. ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ಟೀಕೆಗೆ ಗುರಿಯಾಗಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡುವಾಗ ರಾಬರ್ಟ್ ವಾದ್ರಾ 'ಮುಸ್ಲಿಮರು ದುರ್ಬಲರಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಮುಸ್ಲಿಮರಿಗೆ ದುರ್ಬಲ ಅನ್ನೋ ಭಾವನೆ ಇದೆ;  ರಾಬರ್ಟ್‌ ವಾದ್ರಾ

Profile Vishakha Bhat Apr 23, 2025 6:30 PM

ನವದೆಹಲಿ: ಪ್ರವಾಸಿಗರ ಸ್ವರ್ಗ ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಯಾಗಿದೆ. ಧರ್ಮಾಂದರು ಪಹಲ್ಗಾಮ್‌ನಲ್ಲಿ ರಕ್ತದ ಓಕುಳಿಯನ್ನೇ ಹರಿಸಿದ್ದಾರೆ. ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ (Robert Vadra) ಟೀಕೆಗೆ ಗುರಿಯಾಗಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡುವಾಗ ರಾಬರ್ಟ್ ವಾದ್ರಾ 'ಮುಸ್ಲಿಮರು ದುರ್ಬಲರಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ದೇಶದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷ ನಡೆಯುತ್ತಿದೆ, ಇದರಿಂದಾಗಿ ಮುಸ್ಲಿಮರಿಗೆ ತಾವು ದುಬರ್ಲ ಅನ್ನೋ ಭಾವನೆ ಬರುತ್ತಿದೆ ಎಂಬ ಹೇಳಿಕೆಯನ್ನು ನೀಡಿ ವಿವಾದ ಸೃಷ್ಟಿ ಮಾಡಿದ್ದಾರೆ.

ದೇಶದ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರು ದುರ್ಬಲರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ 'ಹಿಂದುತ್ವ' ಪ್ರಚೋದನೆಯನ್ನು ಅವರು ದೂಷಿಸಿದ್ದಾರೆ. ಈ ಸರ್ಕಾರ ಯಾವಾಗಲೂ ಹಿಂದುತ್ವದ ಬಗ್ಗೆ ಮಾತನಾಡುತ್ತದೆ, ಇದರಿಂದಾಗಿ ಅಲ್ಪಸಂಖ್ಯಾತ ಸಮುದಾಯವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವಾದ್ರಾ ಹೇಳಿದ್ದಾರೆ. ಸರ್ಕಾರವು ಆಗಾಗ್ಗೆ ಹಿಂದುತ್ವದ ಬಗ್ಗೆ ಮಾತನಾಡುತ್ತದೆ ಎಂದು ಅವರು ಹೇಳಿದರು. ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ದುರ್ಬಲ ಎನ್ನುವ ಭಾವ ಬರುವಂತೆ ನಾವು ಸಮಸ್ಯೆಯಲ್ಲಿದ್ದೇವೆ ಎನ್ನುವಂತೆ ಮಾಡುತ್ತದೆ. ಈ ರೀತಿ ಸರ್ಕಾರ ಎಲ್ಲರಿಗೆ ತೊಂದರೆ ಉಂಟು ಮಾಡಿದೆ ಎಂದು ವಾದ್ರಾ ಹೇಳಿದ್ದಾರೆ.



ಭಯೋತ್ಪಾದಕರು ಸಂತ್ರಸ್ಥರ ಗುರುತನ್ನು (ಧರ್ಮ) ನೋಡಿ ಕೊಲ್ಲುತ್ತಿದ್ದರೆ, ಅದಕ್ಕೆ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಸೃಷ್ಟಿಯಾಗಿರುವ ಅಂತರವೇ ಕಾರಣ ಎಂದು ವಾದ್ರಾ ಹೇಳಿದ್ದಾರೆ. ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ? ಏಕೆಂದರೆ ನಮ್ಮ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿಭಜನೆ ಇದೆ. ಇದಕ್ಕೆಲ್ಲಾ ಸರ್ಕಾರವೇ ಕಾರಣ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್‌ ಭಯೋತ್ಪಾದಕ ದಾಳಿ ಖಂಡಿಸಿದ ಉಗ್ರಂ ಮಂಜು

ಭಾರತೀಯ ಜನತಾ ಪಕ್ಷದ (ಬಿಜೆಪಿ) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಈ ಹೇಳಿಕೆಯಿಂದ ಆಘಾತವಾಗಿದೆ ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಭಯೋತ್ಪಾದನಾ ಕೃತ್ಯವನ್ನು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುತ್ತಿದ್ದಾರೆ, ಭಯೋತ್ಪಾದಕರನ್ನು ಖಂಡಿಸುವ ಬದಲು ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಅವರು ಅಲ್ಲಿಗೆ ನಿಲ್ಲುವುದಿಲ್ಲ, ಬದಲಾಗಿ, ಪಾಕಿಸ್ತಾನಿ ಭಯೋತ್ಪಾದಕರು ಮಾಡಿದ ದೌರ್ಜನ್ಯಗಳಿಗೆ ಭಾರತದ ಮೇಲೆ ಹೊಣೆ ಹೊರಿಸುತ್ತಾರೆ ಎಂದು ಅವರು ಬರೆದಿದ್ದಾರೆ.