Thursday, 19th September 2024

ಆಕ್ರೋಬ್ಯಾಟಿಕ್ ಶೈಲಿಯಲ್ಲಿ ಡೈವ್ ಹೊಡೆದು ಚೆಂಡನ್ನು ತಡೆದ ನಟ್ಟಕನ್ ಚಾಂಥಮ್

ಶಾರ್ಜಾ: ಮಹಿಳೆಯರ ಮಹಿಳಾ ಟಿ20 ಚಾಲೆಂಜ್ ಟೂರ್ನಿಯಲ್ಲಿ ಚಾಂಪಿಯನ್ ಟ್ರೈಲ್‌ಬ್ಲೇಜರ್ಸ್‌ ತಂಡದ ಪರ ಆಡಿದ ಥಾಯ್ಲೆಂಡ್ ಆಟಗಾರ್ತಿ ಥಾಯ್ಲೆಂಡ್ ಆಟಗಾರ್ತಿ ನಟ್ಟಕನ್ ಚಾಂಥಮ್ ಅದ್ಭುತ ಫೀಲ್ಡಿಂಗ್ ನಿರ್ವಹಣೆಯ ಮೂಲಕ ಗಮನ ಸೆಳೆದಿದ್ದಾರೆ.

ಸೂಪರ್‌ನೋವಾಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೂಪರ್‌ವುಮನ್ ರೀತಿಯಲ್ಲಿ ಹಾರಿ ಬೌಂಡರಿಯೊಂದನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋಫಿ ಎಕ್ಲೆಸ್ಟೋನ್ ಎಸೆದ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಚಾಂಥಮ್ ಅವರಿಂದ ಈ ಅದ್ಭುತ ನಿರ್ವಹಣೆ ಬಂದಿತು. ರೋಡ್ರಿಗಸ್ ಬಾರಿಸಿದ ಚೆಂಡು ಥರ್ಡ್ ಮ್ಯಾನ್ ಕಡೆ ಹೋಗಿತ್ತು. ಆಗ ಚೆಂಡಿನ ಹಿಂದೆ ಓಡುತ್ತ ಹೋದ ಚಾಂಥಮ್, ಬೌಂಡರಿ ಗೆರೆಯ ಬಳಿ ಆಕ್ರೋಬ್ಯಾಟಿಕ್ ಶೈಲಿಯಲ್ಲಿ ಡೈವ್ ಹೊಡೆದು ಚೆಂಡನ್ನು ತಡೆದರು.

2015ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಕಲಂ ಕೂಡ ಇದೇ ರೀತಿಯಲ್ಲಿ ಹಾರಿ ಬೌಂಡರಿ ತಡೆಗಟ್ಟಿದ್ದಕ್ಕೆ ಥಾಯ್ಲೆಂಡ್ ಆಟಗಾರ್ತಿಯ ಪ್ರಯತ್ನವನ್ನು ಹೋಲಿಸಲಾಗುತ್ತಿದೆ.

ನಟ್ಟಕನ್ ಚಾಂಥಮ್ ನಿರ್ವಹಣೆಯನ್ನು ಟ್ರೈಲ್‌ಬ್ಲೇಜರ್ಸ್‌ ತಂಡದ ನಾಯಕಿ ಸ್ಮತಿ ಮಂದನಾ ಕೂಡ ಪ್ರಶಂಸಿಸಿದ್ದು, ಮಹಿಳಾ ಕ್ರಿಕೆಟ್‌ನಲ್ಲಿ ಈ ರೀತಿಯ ಫೀಲ್ಡಿಂಗ್ ನಿರ್ವಹಣೆಯನ್ನು ಹಿಂದೆಂದೂ ಕಂಡಿರಲಿಲ್ಲ ಎಂದಿದ್ದಾರೆ.

ನಟ್ಟಕನ್ ಚಾಂಥಮ್ ಮಹಿಳಾ ಟಿ20 ಚಾಲೆಂಜ್‌ನಲ್ಲಿ ಆಡಿದ ಥಾಯ್ಲೆಂಡ್‌ನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರ ರಾಗಿದ್ದಾರೆ.

Leave a Reply

Your email address will not be published. Required fields are marked *